ಇಂಗ್ಲೆಂಡ್ ವಿಶ್ವ ಚಾಂಪಿಯನ್: ಅಂಪೈರ್ ಬಳಿ ಓವರ್ ಥ್ರೋ ರನ್ ಬೇಡ ಅಂತ ಬೆನ್ ಸ್ಟೋಕ್ಸ್ ಕೇಳಿಕೊಂಡಿದ್ರು, ತಪ್ಪು ಯಾರದು?
ವಿಶ್ವಕಪ್ ಫೈನಲ್ ಪಂದ್ಯದ ಓವರ್ ಥ್ರೋ ಸದ್ಯ ಕ್ರಿಕೆಟ್ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದು ವಿಶ್ವಕಪ್ ಗೆಲ್ಲಿಸಿ ಇಂಗ್ಲೆಂಡ್ ತಂಡಕ್ಕೆ ಹೀರೋ ಆಗಿರುವ ಬೆನ್ ಸ್ಟೋಕ್ಸ್ ಓವರ್ ಥ್ರೋ ರನ್ ಬೇಡ ಎಂದು ಅಂಪೈರ್...
Published: 18th July 2019 12:00 PM | Last Updated: 18th July 2019 02:19 AM | A+A A-

ಬೆನ್ ಸ್ಟೋಕ್ಸ್
Source : Online Desk
ಲಂಡನ್: ವಿಶ್ವಕಪ್ ಫೈನಲ್ ಪಂದ್ಯದ ಓವರ್ ಥ್ರೋ ಸದ್ಯ ಕ್ರಿಕೆಟ್ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದು ವಿಶ್ವಕಪ್ ಗೆಲ್ಲಿಸಿ ಇಂಗ್ಲೆಂಡ್ ತಂಡಕ್ಕೆ ಹೀರೋ ಆಗಿರುವ ಬೆನ್ ಸ್ಟೋಕ್ಸ್ ಓವರ್ ಥ್ರೋ ರನ್ ಬೇಡ ಎಂದು ಅಂಪೈರ್ ಬಳಿ ಕೇಳಿಕೊಂಡಿದ್ದರು ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಜೇಮ್ಸ್ ಆ್ಯಂಡ್ರೂಸನ್ ಹೇಳಿದ್ದಾರೆ.
ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಕೊನೆಯ ಓವರ್ ನಲ್ಲಿ ಇಂಗ್ಲೆಂಡ್ ಗೆ ಗೆಲ್ಲಲು 15 ರನ್ ಗಳ ಅವಶ್ಯಕತೆ ಇತ್ತು. ಮೂರನೇ ಎಸೆತದಲ್ಲಿ ಬೆನ್ ಸ್ಟೋಕ್ಸ್ ಸಿಕ್ಸರ್ ಬಾರಿಸಿದ್ದರು. ಇದರಿಂದ ಇನ್ನು 3 ಎಸೆತದಲ್ಲಿ ಆಂಗ್ಲರಿಗೆ 9 ರನ್ ಬೇಕಿತ್ತು. ಈ ವೇಳೆ ಡೀಪ್ ಕವರ್ ನಲ್ಲಿ ಸ್ಟೋಕ್ಸ್ ಚೆಂಡನ್ನು ಬಾರಿಸಿದರು. ಎರಡು ರನ್ ತೆಗೆದುಕೊಳ್ಳುವಾಗ ಮಾರ್ಟಿನ್ ಗಪ್ಟಿಲ್ ಮಾಡಿದ ಥ್ರೋ ಸ್ಟೋಕ್ಸ್ ಬ್ಯಾಟ್ ಗೆ ತಗುಲಿ ಬೌಂಡರಿಗೆ ಹೋಗಿತ್ತು. ಇದಕ್ಕೆ ಅಂಪೈರ್ ಧರ್ಮಸೇನಾ ಇಂಗ್ಲೆಂಡ್ ಗೆ ಆರು ರನ್ ನೀಡಿದ್ದು ಇದೀಗ ವಿಶ್ವದೆಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಈ ಬಗ್ಗೆ ಮಾತನಾಡಿರುವ ಜೇಮ್ಸ್ ಅಂಡರ್ಸನ್ ಅವರು ಬೆನ್ ಸ್ಟೋಕ್ಸ್ ಘಟನೆ ನಡೆದ ಕೂಡಲೇ ಅಂಪೈರ್ ಬಳಿ ಕ್ಷಮೆಯಾಚಿಸಿದ್ದರು. ಅಲ್ಲದೆ ಓವರ್ ಥ್ರೋ ರನ್ ನೀಡಿದ್ದ ಅಂಪೈರ್ ತಮ್ಮ ನಿರ್ಧಾರವನ್ನು ರದ್ದುಗೊಳಿಸುವಂತೆ ಅಂಪೈರ್ ಗೆ ಮನವಿ ಮಾಡಿದ್ದರು ಎಂದು ಹೇಳಿದ್ದಾರೆ.
ಇನ್ನು ಅಂಪೈರ್ ಗಳ ತೀರ್ಮಾನವನ್ನು ಸಮರ್ಥಿಸಿಕೊಂಡಿರುವ ಅಂಡರ್ಸನ್ ಥ್ರೋ ಮಾಡಿದಾಗ ಬಾಲು ಬ್ಯಾಟ್ ಗೆ ತಗುಲಿ ಬೌಂಡರಿಗೆ ಹೋದರೆ ನಿಯಮಗಳ ಪ್ರಕಾರ ಅದು ಫೋರ್ ಎಂದೇ ಪರಿಗಣಿಸಲಾಗುತ್ತದೆ. ಅದಕ್ಕೆ ನಾವು ಏನು ಮಾಡಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.
Stay up to date on all the latest ಕ್ರಿಕೆಟ್ news