ರಾಜಕೀಯ ಮಧ್ಯ ಪ್ರವೇಶ ಹಿನ್ನಲೆ; ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಜಿಂಬಾಬ್ವೆ ಅಮಾನತು

ರಾಜಕೀಯ ಮಧ್ಯ ಪ್ರವೇಶ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಜಿಂಬಾಬ್ವೆ ಕ್ರಿಕೆಟ್ ತಂಡ ಮತ್ತು ಸಂಸ್ಥೆಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಅಮಾನತು ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ರಾಜಕೀಯ ಮಧ್ಯ ಪ್ರವೇಶ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಜಿಂಬಾಬ್ವೆ ಕ್ರಿಕೆಟ್ ತಂಡ ಮತ್ತು ಸಂಸ್ಥೆಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಅಮಾನತು ಮಾಡಿದೆ.
ಜಿಂಬಾಬ್ವೆ ಕ್ರಿಕೆಟ್ ನಲ್ಲಿ ಅಲ್ಲಿನ ಸರ್ಕಾರ ಮತ್ತು ರಾಜಕೀಯ ಮುಖಂಡರು ಪದೇ ಪದೇ ಮಧ್ಯ ಪ್ರವೇಶ ಮಾಡಿದ್ದರಿಂದ ಕಠಿಣ ಕ್ರಮ ಕೈಗೊಂಡಿರುವ ಐಸಿಸಿ ಜಿಂಬಾಬ್ವೆ  ಕ್ರಿಕೆಟ್ ಸಂಸ್ಥೆ ಮತ್ತು ತಂಡವನ್ನು ಅಮಾನತು ಮಾಡಿದೆ.  ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಯ ನಿಯಮಗಳ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಜಿಂಬಾಂಬ್ವೆ ಕ್ರಿಕೆಟ್‌ ಅನ್ನು ತಕ್ಷಣದಿಂದ ಅಮಾನತುಗೊಳಿಸಲಾಗಿದೆ.
"ಐಸಿಸಿ ಪೂರ್ಣ ಸದಸ್ಯ ಜಿಂಬಾಬ್ವೆ ಕ್ರಿಕೆಟ್, ಐಸಿಸಿ ಸಂವಿಧಾನದ ವಿಧಿ 2.4 (ಸಿ) ಮತ್ತು (ಡಿ) ಉಲ್ಲಂಘನೆಯಾಗಿದೆ ಎಂದು ಐಸಿಸಿ ಮಂಡಳಿ ಸರ್ವಾನುಮತದಿಂದ ತೀರ್ಮಾನಿಸಿದೆ. ಇದು ಮುಕ್ತ ಮತ್ತು ಪ್ರಜಾಪ್ರಭುತ್ವ ಚುನಾವಣೆಗಳಿಗೆ ಪ್ರಕ್ರಿಯೆಯನ್ನು ಒದಗಿಸುವ ಮತ್ತು ಅದನ್ನು ಖಚಿತಪಡಿಸಿಕೊಳ್ಳಲು ಸದಸ್ಯರ ಮೇಲೆ ಬಾಧ್ಯತೆಯನ್ನು ವಿಧಿಸುತ್ತದೆ. ಕ್ರಿಕೆಟ್‌ಗೆ ಕ್ರಮವಾಗಿ ಅದರ ಆಡಳಿತ ಮತ್ತು / ಅಥವಾ ಆಡಳಿತದಲ್ಲಿ ಯಾವುದೇ ಹಸ್ತಕ್ಷೇಪವಿಲ್ಲ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಅವರು, ಇದು ತುರ್ತು ಕ್ರಮವಲ್ಲ. ಸಾಕಷ್ಟು ಯೋಚಿಸಿಯೇ ನಿರ್ಣಯ ಕೈಗೊಂಡಿದ್ದೇವೆ. ಕ್ರಿಕೆಟ್ ಒಂದು ಸುಂದರ ಕ್ರೀಡೆ. ಅದು ಯಾವಾಗಲೂ ರಾಜಕೀಯದಿಂದ ಮುಕ್ತವಾಗಿರಬೇಕು. ಇದೇ ಕಾರಣಕ್ಕೆ ಜಿಂಬಾಬ್ವೆಯನ್ನು ಅಮಾನತು ಮಾಡಿದ್ದೇವೆ ಎಂದು ಹೇಳಿದ್ದಾರೆ.
ಈ ಅಮಾನತುಗೊಳಿಸುವಿಕೆಯಿಂದಾಗಿ, ಜಿಂಬಾಬ್ವೆ ಕ್ರಿಕೆಟ್‌ಗೆ ನೀಡುವ ಐಸಿಸಿ ಹಣವನ್ನು ಸ್ಥಗಿತಗೊಳಿಸಲಾಗುವುದು ಮತ್ತು ಯಾವುದೇ ಐಸಿಸಿ ಟೂರ್ನಿಗಳಲ್ಲಿ ಜಿಂಬಾಂಬ್ವೆ ಭಾಗವಹಿಸಲು ಅನುಮತಿ ಇಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com