ಟೀಂ ಇಂಡಿಯಾ ಮುಂದಿನ ಕೋಚ್ ಯಾರು? ಟಾಮ್ ಮೂಡಿ ಹೆಸರು ಮುಂಚೂಣಿಯಲ್ಲಿ

ಮುಂದಿನ ತಿಂಗಳು 2ರಿಂದ ವಿಂಡೀಸ್ ನಲ್ಲಿ ನಡೆಯಲಿರುವ ಸರಣಿ ಬಳಿಕ ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರೀ ಹಾಗೂ ಅವರ ತಂಡದ ಗುತ್ತಿಗೆ ಅವಧಿ ಮುಗಿಯಲಿದ್ದು, ಹೊಸ ಕೋಚ್ ಹಾಗೂ ಸಹಾಯಕ ಸಿಬ್ಬಂದಿಗಳ ಹುದ್ದೆಗಳಿಗೆ ಬಿಸಿಸಿಐ ಜುಲೈ 16 ರಂದು ಅರ್ಜಿ ಆಹ್ವಾನಿಸಿದೆ.
ಟಾಮ್ ಮೂಡಿ
ಟಾಮ್ ಮೂಡಿ
ನವದೆಹಲಿ:ಮುಂದಿನ ತಿಂಗಳು 2ರಿಂದ ವಿಂಡೀಸ್ ನಲ್ಲಿ ನಡೆಯಲಿರುವ  ಸರಣಿ  ಬಳಿಕ  ಟೀಂ ಇಂಡಿಯಾದ  ಕೋಚ್ ರವಿಶಾಸ್ತ್ರೀ ಹಾಗೂ ಅವರ ತಂಡದ ಗುತ್ತಿಗೆ  ಅವಧಿ ಮುಗಿಯಲಿದ್ದು, ಹೊಸ  ಕೋಚ್ ಹಾಗೂ ಸಹಾಯಕ ಸಿಬ್ಬಂದಿಗಳ ಹುದ್ದೆಗಳಿಗೆ ಬಿಸಿಸಿಐ ಜುಲೈ 16 ರಂದು ಅರ್ಜಿ ಆಹ್ವಾನಿಸಿದೆ.  
ಮುಖ್ಯ ತರಬೇತುದಾರನಿಗೆ ಬಿಸಿಸಿಐ ಕೆಲವು ಮಾನದಂಡಗಳನ್ನು ಹಾಕಿದೆ, ಇದರಲ್ಲಿ ಅವರು ಟೆಸ್ಟ್ ಆಡುವ ರಾಷ್ಟ್ರಕ್ಕೆ ಕನಿಷ್ಠ ಎರಡು ವರ್ಷ ಅಥವಾ ಮೂರು ವರ್ಷಗಳ  ಕಾಲ ಕೋಚ್ ಆಗಿ ಕೆಲಸ ಮಾಡಿರಬೇಕು ಅಥವಾ  ಎ ಟೀಮ್ / ಐಪಿಎಲ್ ತಂಡದೊಂದಿಗೆ ಮೂರು ವರ್ಷಗಳ ಕಾಲ ತರಬೇತುದಾರರಾಗಿರಬೇಕು. ಅರ್ಜಿದಾರರು 30 ಟೆಸ್ಟ್ ಅಥವಾ 50 ಏಕದಿನ ಪಂದ್ಯಗಳನ್ನು ಆಡಿರಬೇಕು.
ಐಸಿಸಿ ವಿಶ್ವಕಪ್ ಗೆಲ್ಲದ ಟೀಂ ಇಂಡಿಯಾಕ್ಕೆ ಹಾಲಿ ಕೋಚ್ ರವಿಶಾಸ್ತ್ರೀ ಅವರೇ ಇರುತ್ತಾರಾ ? ಅಥವಾ ಹೊಸ ಮುಖಗಳಿಗೆ ಮಣೆ ಹಾಕುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಸ್ಪೀನ್ ಲೆಜೆಂಡ್ ಅನಿಲ್ ಕುಂಬ್ಳೆ ಅವರನ್ನು ಮತ್ತೆ ಪರಿಗಣಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕುಂಬ್ಳೆ ಕೋಚ್ ಆಗಿದ್ದ ಅವಧಿಯಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿತ್ತು. ಆದರೆ, ನಾಯಕ ವಿರಾಟ್ ಕೊಹ್ಲಿ ಇದಕ್ಕೆ ಸಹಮತ ವ್ಯಕ್ತಪಡಿಸುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ.
ಐಪಿಎಲ್ ಟೂರ್ನಿ ವೇಳೆಯಲ್ಲಿ ವಿವಿಧ ಪ್ರಾಂಚೈಸಿಗಳಿಗೆ  ಕೋಚ್ ಆಗಿದ್ದ ಮಹೇಲಾ ಜಯವರ್ದನೆ, ಟಾಮ್  ಮೂಡಿ, ರಿಕಿ ಪಾಟಿಂಗ್, ಮತ್ತು ಸ್ಟೀಫನ್ ಫ್ಲೆಮಿಂಗ್, ಗ್ಯಾರಿ ಕಿರ್ಸ್ಟೆನ್   ಅವರ ಹೆಸರು ಕೂಡಾ ಕೇಳಿಬರುತ್ತಿದೆ. 
ಅದರಲ್ಲೂ ಒಂದು ಬಾರಿ ಐಪಿಎಲ್ ವಿಜೇತ ತಂಡ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಕೋಚ್  ಟಾಮ್ ಮೂಡಿ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಆಸ್ಟ್ರೇಲಿಯಾ ಪರ 8 ಟೆಸ್ಟ್ ಹಾಗೂ 76 ಏಕದಿನ ಪಂದ್ಯಗಳನ್ನಾಡಿರುವ ಮೂಡಿ ಉತ್ತಮ ಕೋಚ್ ಆಗಿದ್ದಾರೆ. ಒಟ್ಟಾರೇ ಈ ಪೈಕಿ ಯಾರು ಮುಂದಿನ ಟೀಂ ಇಂಡಿಯಾ ಮುಖ್ಯ ಕೋಚ್ ಆಗಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com