ಧೋನಿ ಗ್ಲೌವ್ಸ್ ವಿಚಾರದಲ್ಲಿ ಯಾವುದೇ ವಿವಾದ ಕಾಣುತ್ತಿಲ್ಲ: ಮಾಹಿ ಬೆನ್ನಿಗೆ ನಿಂತ ಸುನಿಲ್ ಶೆಟ್ಟಿ

ಬಾಲಿವುಡ್ ನಟ ಸುನೀಲ್ ಶೆಟ್ಟಿ ಧೋನಿ ಬೆನ್ನಿಗೆ ನಿಂತಿದ್ದು, ಗ್ಲೌವ್ಸ್ ವಿಚಾರದಲ್ಲಿ ತಮಗೆ ಯಾವುದೇ ರೀತಿಯ ವಿವಾದ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.

Published: 08th June 2019 12:00 PM  |   Last Updated: 08th June 2019 11:26 AM   |  A+A-


ಸಂಗ್ರಹ ಚಿತ್ರ

Posted By : SVN SVN
Source : Online Desk
ನವದೆಹಲಿ: ಬಾಲಿವುಡ್ ನಟ ಸುನೀಲ್ ಶೆಟ್ಟಿ ಧೋನಿ ಬೆನ್ನಿಗೆ ನಿಂತಿದ್ದು, ಗ್ಲೌವ್ಸ್ ವಿಚಾರದಲ್ಲಿ ತಮಗೆ ಯಾವುದೇ ರೀತಿಯ ವಿವಾದ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.

ತೀವ್ರ ವಿವಾದ ಸೃಷ್ಟಿ ಮಾಡಿರುವ ಮಹೇಂದ್ರ ಸಿಂಗ್ ಧೋನಿ ಅವರ ಬಲಿದಾನದ ಲೋಗೋ ಇರುವ ಕೀಪಿಂಗ್ ಗ್ಲೌವ್ಸ್ ವಿಚಾರ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಐಸಿಸಿ ಗ್ಲೌವ್ಸ್ ಬದಲಿಸುವಂತೆ ಸೂಚನೆ ನೀಡಿದ ವಿಚಾರ ಆಕ್ರೋಶಕ್ಕೆ ತುತ್ತಾಗಿದೆ. ಈ ನಡುವೆ ದೇಶಾದ್ಯಂತ ಕ್ರೀಡಾ ಪ್ರೇಮಿಗಳು ಮಹೇಂದ್ರ ಸಿಂಗ್ ಧೋನಿ ಬೆಂಬಲಕ್ಕೆ ನಿಂತಿದ್ದು, ಕ್ರೀಡಾ ಪ್ರೇಮಿಗಳು ಮಾತ್ರವಲ್ಲದೇ ಬಾಲಿವುಡ್ ಕೂಡ ಮಾಹಿ ಬೆಂಬಲಕ್ಕೆ ನಿಂತಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ನಟ ಸುನೀಲ್ ಶೆಟ್ಟಿ, ಧೋನಿ ಗ್ಲೌವ್ಸ್ ವಿಚಾರದಲ್ಲಿ ತಮಗೆ ಯಾವುದೇ ವಿವಾದ ಕಾಣುತ್ತಿಲ್ಲ. ಧೋನಿ ಕೂಡ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಿರುವಾಗ ಲೋಗೋ ಇರುವ ಗ್ಲೌವ್ಸ್ ಧರಿಸಿದರೆ ತಪ್ಪೇನು. ಬೇರೆ ಕ್ರೀಡಾ ಕಂಪನಿಗಳ ಲೋಗೋಗಳನ್ನು ಬಳಕೆ ಮಾಡಿ ಆ ವಸ್ತುಗಳಿಗೆ ಪ್ರಚಾರ ನೀಡುತ್ತಿರುವಾಗ ಬಲಿದಾನದ ಲೋಗೋ ಮೂಲಕ ದೇಶದ ಸೈನಿಕರ ಬಲಿದಾನದ ಕುರಿತು ಅಭಿಯಾನ ನಡೆಸಿದರೆ ತಪ್ಪೇನು. ಧೋನಿ ಕಾರ್ಯ ಎಲ್ಲ ಭಾರತೀಯರೂ ಹೆಮ್ಮೆ ಪಡುವಂತಹದ್ದು. ಧೋನಿ ಕಾರ್ಯಕ್ಕೆ ನಾನು ಸಂತೋಷಗೊಂಡಿದ್ದೇನೆ ಎಂದು ಹೇಳಿದ್ದಾರೆ.

ಅಂತೆಯೇ ಹಿರಿಯ ನಟ ಪರೇಶ್ ರಾವಲ್, ರಿತೀಶ್ ದೇಶ್ ಮುಖ್ ಸೇರಿದಂತೆ ಹಲವು ನಟರು ಧೋನಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದು, ಧೋನಿಗೆ ಬೆಂಬಲ ಘೋಷಣೆ ಮಾಡಿದ್ದಾರೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp