ವಿಶ್ವಕಪ್‌ನಲ್ಲಿ ಮಲಿಂಗಾ ಅದ್ಭುತ ಸಾಧನೆ; ಶುಭ ಕೋರಲು ಮಹೆಲಾ ಈ ಫೋಟೋ ಬಳಸಿದ್ದೇಕೆ?

ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದ ಲಸಿತ್ ಮಲಿಂಗಾ ಅವರನ್ನು ಅಭಿನಂದಿಸಲು ಮಾಜಿ ಕ್ರಿಕೆಟಿಗ ಮಹೆಲಾ ಜಯವರ್ಧನೆ ಅವರು ಈ ಫೋಟೋ ಬಳಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

Published: 22nd June 2019 12:00 PM  |   Last Updated: 22nd June 2019 06:31 AM   |  A+A-


Lasith Malinga-Mahela Jayawardene

ಲಸಿತ್ ಮಲಿಂಗಾ-ಮಹೆಲಾ ಜಯವರ್ಧನೆ

Posted By : VS VS
Source : Online Desk
ಲಂಡನ್: ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದ ಲಸಿತ್ ಮಲಿಂಗಾ ಅವರನ್ನು ಅಭಿನಂದಿಸಲು ಮಾಜಿ ಕ್ರಿಕೆಟಿಗ ಮಹೆಲಾ ಜಯವರ್ಧನೆ ಅವರು ಈ ಫೋಟೋ ಬಳಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಲಂಕಾ ಸೋಲಿನ ಸುಳಿಯಲ್ಲಿತ್ತು. ಆದರೆ ಲಸಿತ್ ಮಲಿಂಗಾ ಅದ್ಭುತ ಬೌಲಿಂಗ್ ಮಾಡಿ 4 ಪ್ರಮುಖ ವಿಕೆಟ್ ಪಡೆದು ಲಂಗಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಮಹೆಲಾ ಅವರು ಮಲಿಂಗಾರನ್ನು ಅಭಿನಂದಿಸಲು ಬಳಸಿರುವ ಫೋಟೋ ಸಖತ್ ವೈರಲ್ ಆಗಿದೆ.

ಶ್ರೀಲಂಕಾದ ವೇಗಿ ಲಸಿತ್ ಮಲಿಂಗಾ ಈ ನಿನ್ನ ಫೋಟೋ ಕಳೆದ ಒಂದು ವಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ನಿನ್ನ ಅದ್ಭುತ ಪ್ರದರ್ಶನದ ಮೂಲಕ ಸೂಕ್ತ ಉತ್ತರ ನೀಡಿದ್ದೀಯಾ ಎಂದು ಮಾಜಿ ಕ್ರಿಕೆಟಿಗ ಮಹೆಲಾ ಜಯವರ್ಧನೆ ಟ್ವೀಟ್ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ರೋಚಕ ಪಂದ್ಯದಲ್ಲಿ ಶ್ರೀಲಂಕಾ 20 ರನ್ ಗಳಿಂದ ಗೆಲುವು ಸಾಧಿಸಿತ್ತು. 
Stay up to date on all the latest ಕ್ರಿಕೆಟ್ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp