ಅದ್ಭುತ ಬ್ಯಾಟಿಂಗ್ ಮಾಡಿದ ನಾಯಕ ವಿರಾಟ್ ಕೊಹ್ಲಿ ಆಸೀಸ್ ಬೌಲರ್ಗಳನ್ನು ಸಮರ್ಥವಾಗಿ ದಂಡಿಸಿದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತ ಅವರು, ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕಲಿಲ್ಲ. ಶಂಕರ್ ಬಿಟ್ಟರೆ ಯಾರೂ ಹೆಚ್ಚು ಹೊತ್ತು ಸಾಥ್ ನೀಡದೆ ಇದ್ದರೂ ಏಕಾಂಗಿಯಾಗಿ ಇನಿಂಗ್ಸ್ ಕಟ್ಟಿದ ಕೊಹ್ಲಿ, ಭಾರತಕ್ಕೆ ಆಸರೆಯಾದರು. 120 ಎಸೆತಗಳನ್ನು ಎದುರಿಸಿದ ಅವರು, 10 ಬೌಂಡರಿಯೊಂದಿಗೆ 166 ರನ್ ಗಳಿಸಿ ವೃತ್ತಿ ಜೀವನದ 40 ನೇ ಶತಕ ಸಿಡಿಸಿದರು. ಇವರ ಶತಕದ ಬಲದಿಂದ ಭಾರತ, ಸ್ಪರ್ಧಾತ್ಮ ರನ್ ಕಲೆ ಹಾಕಲು ಸಾಧ್ಯವಾಯಿತು. ಕೊಹ್ಲಿ ಔಟ್ ಆದ ಬಳಿಕ ಕುಲ್ದೀಪ್ ಯಾದವ್ ಹಾಗೂ ಬೂಮ್ರಾ ಕೇವಲ ಎರಡು ರನ್ ಅಂತರದಲ್ಲಿ ವಿಕೆಟ್ ಒಪ್ಪಿಸಿದರು.