ಐಪಿಎಲ್:2019: ಚೊಚ್ಚಲ ಪಂದ್ಯದಲ್ಲೇ ಆರ್‌ಸಿಬಿಗೆ ಮುಖಭಂಗ, ಚೆನ್ನೈಗೆ 7 ವಿಕೆಟ್ ಜಯ!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ನೇ ಆವೃತ್ತಿಯ ಪ್ರಥಮ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅಮೋಘ ಜಯ ಸಾಧಿಸಿದೆ.
ಐಪಿಎಲ್:2019:  ಚೊಚ್ಚಲ ಪಂದ್ಯದಲ್ಲೇ ಆರ್‌ಸಿಬಿಗೆ ಮುಖಭಂಗ, ಚೆನ್ನೈಗೆ  7 ವಿಕೆಟ್ ಜಯ!
ಐಪಿಎಲ್:2019: ಚೊಚ್ಚಲ ಪಂದ್ಯದಲ್ಲೇ ಆರ್‌ಸಿಬಿಗೆ ಮುಖಭಂಗ, ಚೆನ್ನೈಗೆ 7 ವಿಕೆಟ್ ಜಯ!
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ನೇ ಆವೃತ್ತಿಯ ಪ್ರಥಮ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅಮೋಘ ಜಯ ಸಾಧಿಸಿದೆ. 
ಅಂಬಟಿ ರಾಯಡು, ಹಾಗೂ ಸುರೇಶ್ ರೈನಾ ಉತ್ತಮ ಜತೆಯಾಟದ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ಏಳು ವಿಕೆಟ್ ಗಳ ಜಯ ಸಾಧಿಸಿದೆ.
ಇದಕ್ಕೆ ಮುನ್ನ ಬ್ಯಾಟಿಂಗ್ ನಡೆಸಿದ್ದ ಆರ್‌ಸಿಬಿ . 17.1 ಓವರ್ ಗಳಲ್ಲಿ ಕೇವಲ 70  ರನ್ ಗಳಿಸಿ ಆಲೌಟ್ ಆಗಿತ್ತು. 71 ರನ್ ಗುರಿ ಬೆನ್ನತ್ತಿದ ಸಿಎಸ್‌ಕೆ 17.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿದೆ.
ಸಿಎಸ್‌ಕೆ ಪರ ಸುರೇಶ್ ರೈನಾ (19), ಅಂಬಟಿ ರಾಯಡು (28) ಕೇದಾರ್ ಜಾಧವ್ (13) ರವೀಂದ್ರ ಜಡೇಜಾ (6) ರನ್ ಗಳಿಸಿದ್ದರು.  ಆರಂಭಿಕ ಆಟಗಾರ ಶೇನ್ ವ್ಯಾಟ್ಸನ್ ಶೂನ್ಯಕ್ಕೆ ನಿರ್ಗಮಿಸಿದ್ದರು.
ಇನ್ನು ಆರ್‌ಸಿಬಿ ಪರವಾಗಿ   ಯುಜ್ವೇಂದ್ರ ಚಹಲ್, ಮೊಯೀನ್ ಅಲಿ, ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಗಳಿಸಿದ್ದಾರೆ.
ಸುರೇಶ್ ರೈನಾ 5000 ರನ್ ದಾಖಲೆ
ಅಪಿಎಲ್ 2019ನೇ ಸಾಲಿನ ಪ್ರಥಮ ಪಂದ್ಯದಲ್ಲಿ ಸಿಎಸ್‌ಕೆ  ಪರ ಆಟಗಾರ ಸುರೇಶ್ ರೈನಾ ಹೊಸದೊಂದು ದಾಖಲೆ ಬರೆದಿದ್ದಾರೆ. ಐಪಿಎಲ್ ಕ್ರಿಕೆಟ್ ನಲ್ಲಿ 5000 ರನ್ ಗಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲಿಗರೆಂದು ಗುರುತಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com