ವಿಶ್ವಕಪ್ ಗೆ ಕೇದಾರ್ ಜಾಧವ್ ಫಿಟ್, ಮೇ 22 ರಂದು ಇಂಗ್ಲೆಂಡ್ ಗೆ ಪ್ರಯಾಣ

ಐಪಿಎಲ್ ಟೂರ್ನಿ ವೇಳೆ ಗಾಯಗೊಂಡಿದ್ದ ಭಾರತದ ಮಧ್ಯಮ ಕ್ರಮಾಂಕದ ಆಟಗಾರ ಕೇದಾರ್ ಜಾಧವ್ ಅವರು ಈಗ ಫಿಟ್ ಆಗಿದ್ದು, ಮೇ 30ರಿಂದ ಇಂಗ್ಲೆಂಡ್ ನಲ್ಲಿ....

Published: 18th May 2019 12:00 PM  |   Last Updated: 18th May 2019 06:49 AM   |  A+A-


Kedar Jadhav declared fit, will travel to UK for ICC World Cup 2019

ಕೇದಾರ್ ಜಾಧವ್

Posted By : LSB LSB
Source : PTI
ನವದೆಹಲಿ: ಐಪಿಎಲ್ ಟೂರ್ನಿ ವೇಳೆ ಗಾಯಗೊಂಡಿದ್ದ ಭಾರತದ ಮಧ್ಯಮ ಕ್ರಮಾಂಕದ ಆಟಗಾರ ಕೇದಾರ್ ಜಾಧವ್ ಅವರು ಈಗ ಫಿಟ್ ಆಗಿದ್ದು, ಮೇ 30ರಿಂದ ಇಂಗ್ಲೆಂಡ್ ನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಪರ ಆಡಲಿದ್ದಾರೆ.

ಕೇದಾರ್ ಜಾಧವ್ ವಿಶ್ವಕಪ್ ನಲ್ಲಿ ಆಡುವುದು ಅನುಮಾನ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಇದೀಗಿ ಬಿಸಿಸಿಐ ಕೇದಾರ್ ಜಾಧವ್ ಫಿಟ್ನೆಸ್ ರಿಪೋರ್ಟ್ ಬಹಿರಂಗ ಪಡಿಸಿದೆ. ಕೇದಾರ್ ಜಾಧವ್ ಸಂಪೂರ್ಣ ಫಿಟ್ ಆಗಿದ್ದು, ವಿಶ್ವಕಪ್ ಟೂರ್ನಿ ಆಡಲಿದ್ದಾರೆ ಎಂದು ಹೇಳಿದೆ.

ಕೇದಾರ್ ಜಾಧವ್ ಅವರಿಗೆ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಪಂದ್ಯದ ವೇಳೆ ಭುಜದ ನೋವು ಕಾಣಿಸಿಕೊಂಡಿತ್ತು. ಇದರಿಂದ ಅವರು ಮುಂದಿನ ಪಂದ್ಯಗಳಲ್ಲಿ ಚೆನ್ನೈ ಪರ ಕಣಕ್ಕೆ ಇಳಿದಿರಲಿಲ್ಲ.

ಇದೀಗ ಸಂಪೂರ್ಣ ಚೇತರಿಸಿಕೊಂಡಿರುವ ಕೇದಾರ್ ಜಾಧವ್, ಮೇ. 22 ರಂದು ಟೀಂ ಇಂಡಿಯಾ ಜೊತೆ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp