ದಿಢೀರ್ ಅಂತಾ ಕ್ರಿಕೆಟ್‍ನಿಂದ ವಿಶ್ರಾಂತಿಗೆ ಮೊರೆ ಹೋದ ಸ್ಫೋಟಕ ಬ್ಯಾಟ್ಸ್ ಮನ್ ಮ್ಯಾಕ್ಸ್ ವೆಲ್!

ಆಸ್ಟ್ರೇಲಿಯಾ ಸ್ಟಾರ್ ಆಲ್‍ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ ಮಾನಸಿಕ ಸಮಸ್ಯೆಯಿಂದಾಗಿ ಕ್ರಿಕೆಟ್‍ನಿಂದ ಲಘು ವಿರಾಮ ತೆಗೆದುಕೊಳ್ಳಲು ಬಯಸಿದ್ದಾರೆ.

Published: 01st November 2019 11:44 AM  |   Last Updated: 01st November 2019 11:44 AM   |  A+A-


glenn maxwell

ಗ್ಲೇನ್ ಮ್ಯಾಕ್ಸ್ ವೆಲ್

Posted By : Vishwanath S
Source : Online Desk

ಮೆಲ್ಬೋರ್ನ್: ಆಸ್ಟ್ರೇಲಿಯಾ ಸ್ಟಾರ್ ಆಲ್‍ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ ಮಾನಸಿಕ ಸಮಸ್ಯೆಯಿಂದಾಗಿ ಕ್ರಿಕೆಟ್‍ನಿಂದ ಲಘು ವಿರಾಮ ತೆಗೆದುಕೊಳ್ಳಲು ಬಯಸಿದ್ದಾರೆ.

ಗ್ಲೇನ್ ಮ್ಯಾಕ್ಸ್ ವೆಲ್ ಅವರು ಕ್ರಿಕೆಟ್ ನಿಂದ ಲಘು ವಿರಾಮ ತೆಗೆದುಕೊಂಡಿದ್ದಾರೆ. ಹಾಗಾಗಿ, ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯಕ್ಕೆ ಅವರ ಸ್ಥಾನಕ್ಕೆ ಡಿ'ಆರ್ಸಿ ಶಾರ್ಟ್‍ಗೆ ಸ್ಥಾನ ಕಲ್ಪಿಸಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ.

ಮಾನಿಸಿಕ ಆರೋಗ್ಯದಲ್ಲಿ ಮ್ಯಾಕ್ಸ್ ವೆಲ್ ಕೆಲ ಸಮಸ್ಯೆಗಳನ್ನು ಎದುರಿಸಿದ್ದಾರೆ. ಹಾಗಾಗಿ, ಕೆಲ ಕಾಲ ಕ್ರಿಕೆಟ್ ನಿಂದ ದೂರ ಉಳಿಯಲು ಬಯಸಿದ್ದಾರೆ. ಈ ಬಗ್ಗೆ ಅವರು ತಂಡದ ಸಹಾಯಕ ಸಿಬ್ಬಂದಿ ಬಳಿ ಹೇಳಿಕೊಂಡಿದ್ದಾರೆ ಎಂದು ತಂಡದ ಮನಶಾಸ್ತ್ರಜ್ಞ ಡಾ.ಮಿಚೆಲ್ ಲಾಯ್ಡ್ ತನ್ನ ಅಧಿಕೃತ ಹೇಳಕೆಯಲ್ಲಿ ತಿಳಿಸಿದ್ದಾರೆ.

Stay up to date on all the latest ಕ್ರಿಕೆಟ್ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp