ಸ್ಮಿತ್ ಅಲ್ಲ, ಕೊಹ್ಲಿ ಅಲ್ಲ.. 2019ರ ಗರಿಷ್ಠ ಟೆಸ್ಟ್ ರನ್ ಗಳಿಸಿದ ಆಟಗಾರ ಯಾರು ಗೊತ್ತಾ?

2019ನೇ ಸಾಲಿನಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ಗರಿಷ್ಠ ರನ್ ಸಿಡಿಸಿದ ಆಟಗಾರ ಯಾರು..? ಬಹುಶಃ ನಿಮ್ಮ ಉತ್ತರ ಸ್ಟೀವೆನ್ ಸ್ಮಿತ್, ವಿರಾಟ್ ಕೊಹ್ಲಿಯಾಗಿದ್ದರೆ ಅದು ತಪ್ಪು..
ಕೊಹ್ಲಿ-ಸ್ಮಿತ್
ಕೊಹ್ಲಿ-ಸ್ಮಿತ್

ಅಡಿಲೇಡ್: 2019ನೇ ಸಾಲಿನಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ಗರಿಷ್ಠ ರನ್ ಸಿಡಿಸಿದ ಆಟಗಾರ ಯಾರು..? ಬಹುಶಃ ನಿಮ್ಮ ಉತ್ತರ ಸ್ಟೀವೆನ್ ಸ್ಮಿತ್, ವಿರಾಟ್ ಕೊಹ್ಲಿಯಾಗಿದ್ದರೆ ಅದು ತಪ್ಪು..

ಹೌದು.. ಆಸ್ಟ್ರೇಲಿಯಾದ ಉದಯೋನ್ಮುಖ ಆಟಗಾರ ಮಾರ್ನಸ್ ಲ್ಯಾಬುಸ್ಚಾಗ್ನೆ 2019ನೇ ಸಾಲಿನಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಪೇರಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅಡಿಲೇಡ್ ನಲ್ಲಿ ಪಾಕಿಸ್ತಾನದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸುತ್ತಿರುವ ಮಾರ್ನಸ್ ಲ್ಯಾಬುಸ್ಚಾಗ್ನೆ ಸ್ಟೀವ್ ಸ್ಮಿತ್ ರನ್ನು ಹಿಂದಿಕ್ಕಿ 2019ನೇ ಸಾಲಿನಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಛ ರನ್ ಪೇರಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಜೊತೆಗೂಡಿ ಭರ್ಜರಿ ಆಟವಾಡಿದ  ಮಾರ್ನಸ್ ಲ್ಯಾಬುಸ್ಚಾಗ್ನೆ 238 ಎಸೆತಗಳಲ್ಲಿ 162 ರನ್ ಗಳಿಸಿದರು. ಆ ಮೂಲಕ ಸ್ಟೀವನ್ ಸ್ಮಿತ್ ಹೆಸರಲ್ಲಿದ್ದ 2019ರಲ್ಲಿ ಅತೀ ಹೆಚ್ಚು ಟೆಸ್ಟ್ ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅಡಿಲೇಡ್ ಪಂದ್ಯವೂ ಸೇರಿದಂತೆ 2019ರಲ್ಲಿ ಮಾರ್ನಸ್ ಲ್ಯಾಬುಸ್ಚಾಗ್ನೆ815‬ ರನ್ ಗಳನ್ನು ಗಳಿಸಿದ್ದಾರೆ. 

ಇನ್ನು ಈ ಪಟ್ಟಿಯಲ್ಲಿ 778 ರನ್ ಗಳಿಸಿರುವ ಸ್ಟೀವೆನ್ ಸ್ಮಿತ್ 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಹಾಲಿ ಟೆಸ್ಟ್ ಪಂದ್ಯದಲ್ಲಿ ಅವರು ಈ ವರೆಗೂ 34 ರನ್ ಗಳಿಸಿದ್ದಾರೆ. ಪಟ್ಟಿಯಲ್ಲಿ ಭಾರತದ ಮಯಾಂಕ್ ಅಗರ್ವಾಲ್ ಕೂಡ ಇದ್ದು, ಮಯಾಂಕ್ 754 ರನ್ ಗಳಿಸಿ 3ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್ (746 ರನ್) ಇದ್ದು ಅವರ ಬಳಿಕದ ಸ್ಥಾನದಲ್ಲಿ 642 ರನ್ ಗಳಿಸಿರುವ ಅಜಿಂಕ್ಯಾ ರಹಾನೆ ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com