47 ವರ್ಷಗಳ ಹಿಂದಿನ ಅಪರೂಪ ದಾಖಲೆ ಮುರಿದ ರೋಹಿತ್-ಮಾಯಾಂಕ್ ಜೋಡಿ!

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಮಾಯಾಂಕ್ ಅಗರವಾಲ್ ಜೋಡಿ 47 ವರ್ಷಗಳ ಹಿಂದಿನ ದಾಖಲೆಯೊಂದನ್ನು ಮುರಿದಿದ್ದಾರೆ. 
ರೋಹಿತ್ ಶರ್ಮಾ-ಮಾಯಾಂಕ್ ಅಗರವಾಲ್
ರೋಹಿತ್ ಶರ್ಮಾ-ಮಾಯಾಂಕ್ ಅಗರವಾಲ್

ವಿಶಾಖಪಟ್ಟಣಂ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಮಾಯಾಂಕ್ ಅಗರವಾಲ್ ಜೋಡಿ 47 ವರ್ಷಗಳ ಹಿಂದಿನ ದಾಖಲೆಯೊಂದನ್ನು ಮುರಿದಿದ್ದಾರೆ. 

1972ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸುನಿಲ್ ಗವಾಸ್ಕರ್ ಮತ್ತು ರಾಮ್ ನಾಥ್ ಪಾರ್ಕರ್ ಆರಂಭಿಕರಾಗಿ ಮೊದಲ ಪಂದ್ಯವನ್ನಾಡಿದ್ದರು. ಈ ವೇಳೆ ಪಾರ್ಕರ್ ಟೆಸ್ಟ್ ಪಾದಾರ್ಪಣೆ ಪಂದ್ಯವನ್ನಾಡಿದ್ದರು. ಸುನಿಲ್ ಗವಾಸ್ಕರ್ ಆರಂಭಿಕರಾಗಿ ಮೊದಲ ಪಂದ್ಯವನ್ನಾಡಿದ್ದರು. 

ಇದೀಗ ಆ ದಾಖಲೆಯನ್ನು ಮುರಿಯಲಾಗಿದ್ದು ಮಾಯಾಂಕ್ ಮೊದಲ ಟೆಸ್ಟ್ ಪಂದ್ಯವನ್ನಾಡಿದ್ದು ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. 

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಜತೆ ಆರಂಭಿಕನಾಗಿ ಮೊಟ್ಟ ಮೊದಲ ಬಾರಿ ಆಡಿದ ರೋಹಿತ್ ಅಮೋಘ ಬ್ಯಾಟಿಂಗ್ ಮಾಡಿದರು. 173 ಎಸೆತಗಳನ್ನು ಎದುರಿಸಿದ ಅವರು 115 ರನ್ ಗಳಿಸಿದರು. ಆ ಮೂಲಕ ವೃತ್ತಿ ಜೀವನದ ನಾಲ್ಕನೇ ಶತಕ ಸಿಡಿಸಿದರು. ಮಾಯಾಂಕ್ ಅಜೇಯ 84 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com