2ನೇ ಟೆಸ್ಟ್: ಆಫ್ರಿಕಾ ವಿರುದ್ಧ ಮೊದಲ ದಿನದಾಟ ಅಂತ್ಯ: ಭಾರತ 273/3

ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯಗೊಂಡಿದ್ದು 3 ವಿಕೆಟ್ ನಷ್ಟಕ್ಕೆ ಭಾರತ 273 ರನ್ ಪೇರಿಸಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ

ಪುಣೆ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯಗೊಂಡಿದ್ದು 3 ವಿಕೆಟ್ ನಷ್ಟಕ್ಕೆ ಭಾರತ 273 ರನ್ ಪೇರಿಸಿದೆ. 

ಪುಣೆಯಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪರ ಮಾಯಾಂಕ್ ಅಗರವಾಲ್ 108 ರನ್ ಪೇರಿಸಿದರು. ಚೇತೇಶ್ವರ ಪೂಜಾರ 58 ರನ್ ಗಳಿಸಿ ಔಟಾಗಿದ್ದಾರೆ. 

ಮೊದಲ ಪಂದ್ಯದ ಎರಡೂ ಇನಿಂಗ್ಸ್‌‌ಗಳಲ್ಲಿ ಎರಡು ಶತಕ ಸಿಡಿಸಿ ಸಂಚಲನ ಮೂಡಿಸಿದ್ದ ಹಿಟ್‌ಮನ್ ಖ್ಯಾತಿಯ ರೋಹಿತ್ ಶರ್ಮಾ ಅವರು ದ್ವಿತೀಯ ಇನಿಂಗ್ಸ್‌‌ನಲ್ಲಿ ನಿರಾಸೆ ಮೂಡಿಸಿದರು. ಮಯಾಂಕ್ ಅಗರ್ವಾಲ್ ಜತೆ ಆರಂಭಿಕನಾಗಿ ಕಣಕ್ಕೆೆ ಇಳಿದ ರೋಹಿತ್ ಶರ್ಮಾ 35 ಎಸೆತಗಳಲ್ಲಿ ಒಂದು ಬೌಂಡರಿಯೊಂದಿಗೆ ಕೇವಲ 14 ರನ್ ಗಳಿಸಿ ಕಗಿಸೋ ರಬಾಡ ಎಸೆತದಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು. 

ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡು ಶತಕ ಸಿಡಿಸಿದ ಭಾರತದ ಎರಡನೇ ಆಆರಂಭಿಕ ಬ್ಯಾಟ್ಸ್‌‌ಮನ್ ಎಂಬ ಕೀರ್ತಿಗೆ ಮಯಾಂಕ್ ಅಗರ್ವಾಲ್ ಭಾಜನರಾದರು. ಇದಕ್ಕೂ ಮುನ್ನ ವಿರೇಂದ್ರ ಸೆಹ್ವಾಗ್ ಅವರು 2009/10ರ ಆವೃತ್ತಿಯಲ್ಲಿ  ಸತತ ಎರಡು ಶತಕ ಗಳಿಸಿದ್ದರು. ಮೊದಲನೇ ಪಂದ್ಯದ ಪ್ರಥಮ ಇನಿಂಗ್ಸ್‌‌ನಲ್ಲಿ  215 ರನ್ ಚಿಚ್ಚಿದ್ದರು. ಇದು ಅವರ ವೃತ್ತಿ ಜೀವನದ ಮೊದಲ ದ್ವಿಶತಕವಾಗಿತ್ತು. 

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಜೇಯ 63 ಹಾಗೂ ಅಜಿಂಕ್ಯ ರಹಾನೆ ಅಜೇಯ 18 ರನ್ ಪೇರಿಸಿದ್ದು ನಾಳೆ ಎರಡನೇ ದಿನದಾಟವನ್ನು ಆರಂಭಿಸಲಿದ್ದಾರೆ. 

ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. 

ಸಂಕ್ಷಿಪ್ತ ಸ್ಕೋರ್:
ಭಾರತ

ಪ್ರಥಮ ಇನಿಂಗ್ಸ್‌: 85.1 ಓವರ್‌ಗಳಲ್ಲಿ 273/3 (ಮಯಾಂಕ್ ಅಗರ್ವಾಲ್ 108, ಚೇತೇಶ್ವರ ಪೂಜಾರ 58, ವಿರಾಟ್ ಕೊಹ್ಲಿ ಔಟಾಗದೆ 63; ಕಗಿಸೋ ರಬಾಡ 48ಕ್ಕೆ 3)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com