ಸ್ಟೀವನ್ ಸ್ಮಿತ್ ನಾಯಕತ್ವ ನೀಡುವ ಬಗ್ಗೆ ಸ್ಪಷ್ಟತೆಯಿಲ್ಲ: ಜಸ್ಟಿನ್ ಲ್ಯಾಂಗರ್

ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ ಮನ್ ಸ್ಟೀವನ್ ಸ್ಮಿತ್ ಅವರನ್ನು ಮತ್ತೆ ತಂಡದ ನಾಯಕತ್ವ ಸ್ಥಾನ ನೀಡುವ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ ಎಂದು ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.
ಸ್ಟೀವನ್ ಸ್ಮಿತ್
ಸ್ಟೀವನ್ ಸ್ಮಿತ್

ಸಿಡ್ನಿ: ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ ಮನ್ ಸ್ಟೀವನ್ ಸ್ಮಿತ್ ಅವರನ್ನು ಮತ್ತೆ ತಂಡದ ನಾಯಕತ್ವ ಸ್ಥಾನ ನೀಡುವ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ ಎಂದು ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.

2018ರ ಮಾರ್ಚ್‍ವರೆಗೂ ತಂಡದ ನಾಯಕತ್ವದ ಜವಾಬ್ದಾರಿ ನಿರ್ವಹಿಸಿದ್ದರು. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣ ಸಂಬಂಧ ಅವರು ಒಂದು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಅಮಾನತುಗೊಳಿಸಲಾಗಿತ್ತು. ನಂತರ, ಟೆಸ್ಟ್ ಕ್ರಿಕೆಟ್ ತಂಟದ ನಾಯಕತ್ವವನ್ನು ಟಿಮ್ ಪೈನ್ ಹಾಗೂ ಸೀಮಿತ ಓವರ್‍ಗಳ ತಂಡಕ್ಕೆ ಪಿಂಚ್‍ಗೆ ನೀಡಲಾಗಿತ್ತು.

ಇದೀಗ ಭರ್ಜರಿ ಲಯದೊಂದಿಗೆ ತಂಡಕ್ಕೆ ಮರಳಿರುವ ಸ್ಟೀವನ್ ಸ್ಮಿತ್ ಅಮೋಘ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹಾಗಾಗಿ, ಅವರನ್ನು ಮತ್ತೆ ತಂಡದ ನಾಯಕತ್ವದ ಜವಾಬ್ದಾರಿ ನೀಡಬಹುದು ಎಂದು ಬಹಳಷ್ಟು ಚರ್ಚೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com