3 ವರ್ಷಕ್ಕೊಮ್ಮೆ ವಿಶ್ವಕಪ್ ನಡೆಸಲು ಐಸಿಸಿ ಯೋಜನೆಗೆ ಗಂಗೂಲಿ ಹೇಳಿದ್ದೇನು?

ಪ್ರತಿ ಮೂರು ವರ್ಷಗಳಿಗೊಮ್ಮೆ 50 ಓವರ್‌ಗಳ ವಿಶ್ವಕಪ್ ನಡೆಸಲು ಐಸಿಸಿ ಪ್ರಯತ್ನಕ್ಕೆ ಬಿಸಿಸಿಐ ಅಧ್ಯಕ್ಷರಾಗಲಿರುವ ಸೌರವ್ ಗಂಗೂಲಿ ಮಂಗಳವಾರ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸೌರವ್ ಗಂಗೂಲಿ
ಸೌರವ್ ಗಂಗೂಲಿ

ಕೋಲ್ಕತಾ: ಪ್ರತಿ ಮೂರು ವರ್ಷಗಳಿಗೊಮ್ಮೆ 50 ಓವರ್‌ಗಳ ವಿಶ್ವಕಪ್ ನಡೆಸಲು ಐಸಿಸಿ ಪ್ರಯತ್ನಕ್ಕೆ ಬಿಸಿಸಿಐ ಅಧ್ಯಕ್ಷರಾಗಲಿರುವ ಸೌರವ್ ಗಂಗೂಲಿ ಮಂಗಳವಾರ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್ ಸಾಂಪ್ರದಾಯಿಕವಾಗಿ 1975ರಲ್ಲಿ ಮೊದಲ ಆವೃತ್ತಿಯಿಂದ ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಗುತ್ತಿತ್ತು. ಆದಾಗ್ಯೂ 1992ರ ಆವೃತ್ತಿಯನ್ನು ಐದು ವರ್ಷಗಳ ಅಂತರದ ನಂತರ ಮತ್ತು 1999ರ ಆವೃತ್ತಿಯನ್ನು ಮೂರು ವರ್ಷಗಳ ಅಂತರದ ನಂತರ ನಡೆಸಲಾಗಿತ್ತು. 

"ಕೆಲವೊಮ್ಮೆ ಜೀವನದಲ್ಲಿ ಕಡಿಮೆ ಹೆಚ್ಚಿರುತ್ತದೆ. ಆದ್ದರಿಂದ ನಾವು ಅದರ ಬಗ್ಗೆ ಜಾಗರೂಕರಾಗಿರಬೇಕು. ಇನ್ನು ಫುಟ್ಬಾಲ್ ವಿಶ್ವಕಪ್ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ನೀವು ಅಲ್ಲಿನ ಹುಚ್ಚುತನವನ್ನು ನೋಡಿರುತ್ತೀರಿ" ಎಂದು ಗಂಗೂಲಿ ಇಲ್ಲಿನ ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಭವಿಷ್ಯದ ಟೂರ್ನಿ ಆಯೋಜನೆ(ಎಫ್‌ಟಿಪಿ)ಯನ್ನು ಅವಧಿಗೂ ಮುನ್ನ ಆಯೋಜನೆಗೆ ಪ್ರಸ್ತಾಪಿಸಲು ಯೋಜಿಸುತ್ತಿದೆ, ಇದರಲ್ಲಿ ಟಿ20 ವಿಶ್ವಕಪ್ ಅನ್ನು ವರ್ಷಕ್ಕೊಮ್ಮೆ ಮತ್ತು ಏಕದಿನ ಕ್ರಿಕೆಟ್ ವಿಶ್ವಕಪ್  ಅವರು ಮೂರು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. 

ಐಸಿಸಿ ಬಗ್ಗೆ ಮಾತನಾಡಲು ಅಥವಾ ಪ್ರತಿಕ್ರಿಯಿಸಲು ಸದ್ಯಕ್ಕೆ ನಾನು ಸೂಕ್ತನಲ್ಲ. ಮುಂದಿನ ದಿನಗಳಲ್ಲಿ ಚರ್ಚೆಯ ಭಾಗವಾಗಲು ನನಗೆ ಅವಕಾಶ ಸಿಕ್ಕಾಗ ನಾನು ಮಾತನಾಡುತ್ತೇನೆ ಎಂದು ಭಾರತದ ಮಾಜಿ ನಾಯಕ ಗಂಗೂಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com