'ಕಾಡಿ ಬೇಡಿ' ಭಾರತಕ್ಕಾಗಿ ಇನ್ನಿಂಗ್ಸ್ ಪ್ರಾರಂಭಿಸಿದ್ದೆ: ಸಚಿನ್ ತೆಂಡೂಲ್ಕರ್

1994ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತದ ಪರ ಇನ್ನಿಂಗ್ಸ್ ಆರಂಭಿಸಲು ಬೇಡಿಕೊಳ್ಳಬೇಕಾಗಿತ್ತು ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್  ತಮ್ಮ ವೃತ್ತಿಜೀವನದ ತಿರುವಿನ ಹಂತವನ್ನು ನೆನಪಿಸಿಕೊಂಡಿದ್ದಾರೆ.
ಸಚಿನ್ ತೆಂಡೊಲ್ಕರ್
ಸಚಿನ್ ತೆಂಡೊಲ್ಕರ್

ಮುಂಬೈ: 1994ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತದ ಪರ ಇನ್ನಿಂಗ್ಸ್ ಆರಂಭಿಸಲು ಬೇಡಿಕೊಳ್ಳಬೇಕಾಗಿತ್ತು ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್  ತಮ್ಮ ವೃತ್ತಿಜೀವನದ ತಿರುವಿನ ಹಂತವನ್ನು ನೆನಪಿಸಿಕೊಂಡಿದ್ದಾರೆ.

ಮಧ್ಯಮ ಕ್ರಮಾಂಕದಿಂದ ಜಿಗಿದು  ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸುತ್ತಿದ್ದ ಸಚಿನ್ ತೆಂಡೊಲ್ಕರ್, 50 ಸಿಮೀತ ಓವರ್ ಗಳ ಪಂದ್ಯಗಳಲ್ಲಿ  ವಿಶ್ವ ದಾಖಲೆಯ 49 ಶತಕಗಳನ್ನು  ಗಳಿಸಿದ್ದಾರೆ. ಆಕ್ಲೆಂಡ್ ನಲ್ಲಿ ನಡೆದಿದ್ದ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಪಂದ್ಯದ ಕ್ಷಣಗಳ ವಿಡಿಯೋವನ್ನು ಸಚಿನ್ ತೆಂಡೊಲ್ಕರ್ ಶೇರ್ ಮಾಡಿಕೊಂಡಿದ್ದಾರೆ.

1994 ರಲ್ಲಿ  ಭಾರತಕ್ಕಾಗಿ ಬ್ಯಾಟಿಂಗ್ ಮಾಡಲು  ಪ್ರಾರಂಭಿಸಿದಾಗ, ಎಲ್ಲಾ ತಂಡಗಳು ವಿಕೆಟ್ ಉಳಿಸುವ ತಂತ್ರವನ್ನು ಅನುಸರಿಸುತ್ತಿದ್ದವು.ಅಂತಹ ಸಂದರ್ಭದಲ್ಲಿ ಆರಂಭಿಕನಾಗಿ ಬ್ಯಾಟಿಂಗ್ ಅವಕಾಶ ಪಡೆಯಲು ಬೇಡಿಕೊಳ್ಳಬೇಕಾಗಿತ್ತು. ಒಂದು ವೇಳೆ ವಿಫಲನಾಗಿದ್ದರೆ ಮತ್ತೆ ಆ ಅವಕಾಶ ನನಗೆ ಸಿಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 49 ಎಸೆತಗಳಲ್ಲಿ 82 ರನ್ ಗಳಿಸಿದೆ. ಆದ್ದರಿಂದ ಮತ್ತೆ ಅವಕಾಶ ಕೊಡಿ ಎಂದು ಕೇಳಲಿಲ್ಲ. ಅವರೇ ನನನ್ನು ಆರಂಭಿಕ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿಸುತ್ತಿದ್ದರು. ಆದರೆ, ವಿಫಲತೆಗೆ ಯಾವುದೇ ಭಯಪಡಬಾರದು ಎಂದು 46 ವರ್ಷದ ತೆಂಡೊಲ್ಕರ್ ಹೇಳಿದ್ದಾರೆ.

ಸೆಪ್ಟೆಂಬರ್ 1994ರಲ್ಲಿ ಕೊಲೊಂಬೊದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಮೊದಲ ಶತಕವನ್ನು ಸಚಿನ್ ಗಳಿಸಿದ್ದರು. ನಂತರ ಮಧ್ಯಮ ಕ್ರಮಾಂಕದಿಂದ ಜಿಗಿದು ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸುತ್ತಿದ್ದರು. ಆರಂಭಿಕ ಬ್ಯಾಟ್ಸ್ ಮನ್ ಆಗಿ ಮೊದಲ ಐದು ಪಂದ್ಯಗಳಲ್ಲಿ ಕ್ರಮವಾಗಿ 82, 63, 40, 63 ಮತ್ತು 73 ರನ್ ಗಳನ್ನು ಸಚಿನ್ ತೆಂಡೊಲ್ಕರ್ ಪಡೆದುಕೊಂಡಿದ್ದರು. 

ಸಚಿನ್ ತೆಂಡೊಲ್ಕರ್  463 ಏಕದಿನ ಪಂದ್ಯಗಳಲ್ಲಿ  18 ಸಾವಿರದ 426 ರನ್ ಗಳನ್ನು ಗಳಿಸುವ ಮೂಲಕ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com