ಅಭಿಮಾನಿಗಳಿಲ್ಲದೆ ಐಪಿಎಲ್ ನಡೆದರೂ ಅದೊಂದು ಉತ್ತಮ ಕ್ರೀಡಾಕೂಟವಾಗಲಿದೆ: ಪ್ಯಾಟ್ ಕಮ್ಮಿನ್ಸ್  

ಜಾಗತಿಕವಾಗಿ ಉಲ್ಬಣಿಸಿರುವ ಕೊರೋನಾವೈರಸ್ ಸೋಂಕಿನಿಂದಾಗಿ ಅಭಿಮಾನಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದಿರುವ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ , ಖಾಲಿ ಆಸನಗಳ ಮುಂದೆ ಆಡಲು ಐಪಿಎಲ್ ಆಡಲು ಮನಸ್ಸಿಲ್ಲ ಎಂಬುದಾಗಿ ಹೇಳಿದ್ದಾರೆ.
Pat Cummins
Pat Cummins

ಮೆಲ್ಬರ್ನ್: ಜಾಗತಿಕವಾಗಿ ಉಲ್ಬಣಿಸಿರುವ ಕೊರೋನಾವೈರಸ್ ಸೋಂಕಿನಿಂದಾಗಿ ಅಭಿಮಾನಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದಿರುವ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ , ಖಾಲಿ ಆಸನಗಳ ಮುಂದೆ ಆಡಲು ಐಪಿಎಲ್ ಆಡಲು ಮನಸ್ಸಿಲ್ಲ ಎಂಬುದಾಗಿ ಹೇಳಿದ್ದಾರೆ.

ಮಾರ್ಚ್ 29 ರಿಂದ 13ನೇ ಐಪಿಎಲ್ ಆವೃತ್ತಿ ಆರಂಭವಾಗಬೇಕಿತ್ತು. ಆದರೆ, ಕೊರೋನಾವೈರಸ್ ಸಾಂಕ್ರಾಮಿಕ ಕಾಯಿಲೆಯಿಂದಾಗಿ ಅದನ್ನು ಏಪ್ರಿಲ್ 15ರವರೆಗೂ ಸ್ಥಗಿತಗೊಳಿಸಲಾಗಿದೆ.  ದಿನದಿಂದ ದಿನಕ್ಕೆ ಕೊರೋನಾ ಸೋಂಕಿತ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಐಪಿಎಲ್ ಭವಿಷ್ಯ ಕೂಡಾ ಮಂಕಾಗಿದೆ

ಐಪಿಎಲ್ ಮುಂದಕ್ಕೆ ಹೋದರೂ ಆಶಾದಾಯಕ ತಮ್ಮಲ್ಲಿ ಇರಲಿದೆ ಎಂದು ಬಿಬಿಸಿ ಸ್ಪೂರ್ಟ್ಸ್ ಗೆ ಹೇಳಿಕೆ ನೀಡಿರುವ ಕಮ್ಮಿನ್ಸ್, ಸುರಕ್ಷತೆಗೆ ಮೊದಲು ಆದ್ಯತೆ ನೀಡಬೇಕು, ಆದರೆ, ಎರಡನೇಯದಾಗಿ ಸಹಜ ಸ್ಥಿತಿಗೆ ಮರಳುತ್ತಿರುವಂತೆ ಸಮತೋಲನವನ್ನು ಕಂಡುಕೊಳ್ಳಬೇಕು, ದುರಾದೃಷ್ಟವೆಂಬಂತೆ ಜನಸ್ತೋಮ ಇಲ್ಲದಿದ್ದರೂ ಜನರು ಮನೆಯಲ್ಲಿ ಕುಳಿತು ಟಿವಿಯಲ್ಲಿ ವೀಕ್ಷಿಸಲಿದ್ದಾರೆ ಎಂಬ ವಿಶ್ವಾಸ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ. 

ಖಾಲಿ ಮೈದಾನದಲ್ಲಿ ಐಪಿಎಲ್ ನಡೆದರೂ ಒಟ್ಟಾರೆ ವಿಭಿನ್ನ ಭಾವನೆ ಮೂಡಿಸಲಿದೆ. ಭಾರತದಲ್ಲಿ ಸಿಕ್ಸ್ ಹೊಡೆಯಲಿ ಅಥವಾ ವಿಕೆಟ್ ಬೀಳಲಿ ಪ್ರತಿ ಎಸೆತಕ್ಕೂ ಅಭಿಮಾನಿಗಳ ಕಿರುಚಾಟ, ಕೂಗಾಟದಂತಹ ವಾತಾವಾರಣ ಮಧ್ಯೆಯಲ್ಲಿ ಕ್ರಿಕೆಟ್ ಆಡಲು ಇಷ್ಟಪಡುವುದಾಗಿ ಅವರು ಹೇಳಿದ್ದಾರೆ. 

ಒಂದು ವೇಳೆ ಅಂತಹ ವಾತಾವರಣ ದೊರೆಯದೆ ಜನಸ್ತೋಮದ ನಡುವೆ ಆಡದಿದ್ದರೂ ಅದೊಂದು ಉತ್ತಮ ಕ್ರೀಡಾಕೂಟವಾಗಲಿದೆ ಎಂದು ಅವರು ತಿಳಿಸಿದ್ದಾರೆ. 

ಅಕ್ಟೋಬರ್- ನವೆಂಬರ್ ವೇಳೆಯಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಆದರೆ, ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೂ ನಡೆಯಲಿರುವ ಟಿ-20 ವಿಶ್ವಕಪ್ ನ್ನು ಐಸಿಸಿ ಮುಂದೂಡಿದ್ದರೆ ಮಾತ್ರ ಐಪಿಎಲ್ ಆಯೋಜಿಸಲು ಸಾಧ್ಯವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com