3 ಬಾರಿ ಐಪಿಎಲ್ ಚಾಂಪಿಯನ್ಸ್: ಸಿಎಸ್ ಕೆ ಯಶಸ್ಸಿನ ಹಿಂದೆ ಧೋನಿ ಸ್ವಭಾವವಿದೆ - ರಾಹುಲ್ ದ್ರಾವಿಡ್

ಕ್ರೀಡಾಂಗಣದಾಚೆ ಮಹೇಂದ್ರ ಸಿಂಗ್ ಧೋನಿಯ ಪೂರ್ವಾಭ್ಯಾಸ, ನಡವಳಿಕೆ ಮತ್ತು ಆಟದ ಕುರಿತ ಯೋಜನೆ ರೂಪಿಸುವ ತಂತ್ರದಿಂದಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ನಲ್ಲಿ ಯಶಸ್ಸಿನ ಹಾದಿಯಲ್ಲಿದೆ ಎಂದು ಎನ್ ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಅಭಿಪ್ರಾಯಪ್ಟಟಿದ್ದಾರೆ.
ರಾಹುಲ್ ದ್ರಾವಿಡ್-ಧೋನಿ
ರಾಹುಲ್ ದ್ರಾವಿಡ್-ಧೋನಿ
Updated on: 

ನವದೆಹಲಿ: ಕ್ರೀಡಾಂಗಣದಾಚೆ ಮಹೇಂದ್ರ ಸಿಂಗ್ ಧೋನಿಯ ಪೂರ್ವಾಭ್ಯಾಸ, ನಡವಳಿಕೆ ಮತ್ತು ಆಟದ ಕುರಿತ ಯೋಜನೆ ರೂಪಿಸುವ ತಂತ್ರದಿಂದಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ನಲ್ಲಿ ಯಶಸ್ಸಿನ ಹಾದಿಯಲ್ಲಿದೆ ಎಂದು ಎನ್ ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಅಭಿಪ್ರಾಯಪ್ಟಟಿದ್ದಾರೆ.

''ಸಿಎಸ್ ಕೆ ಬಳಗದ ತೆರೆಮರೆಯಲ್ಲಿರುವ ಸಹಾಯಕ ಸಿಬ್ಬಂದಿಯು ಚಾಣಾಕ್ಷವಾಗಿದೆ. ಅವರು ಸಂಗ್ರಹಿಸುವ ದತ್ತಾಂಶ ಮತ್ತು ಜನ ಸಂಪರ್ಕವು ಉತ್ತಮವಾಗಿದೆ. ಆಟಗಾರರೊಂದಿಗೆ ಈ ಸಿಬ್ಬಂದಿಯು ನಿರಂತರ ಸಂಪರ್ಕದಲ್ಲಿರುತ್ತಾರೆ. ಜೂನಿಯರ್ ಹಂತದ ತಂಡಗಳನ್ನು ನಿರ್ವಹಿಸುವ ಅನುಭವ ಈ ತಂಡಗಳಿಗೆ ಇದೆ ಎಂದು ರಾಹುಲ್ ಹೇಳಿದ್ದಾರೆ.

"ಧೋನಿ ಪ್ರತಿಭೆಯನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಉತ್ತಮ ಅನ್ವೇಷಣೆ ಪ್ರಕ್ರಿಯೆಯನ್ನು ಹೊಂದಿದ್ದಾರೆ. ಅವರಲ್ಲಿ ಇರುವುದು ಸಹಜ ಪ್ರವೃತ್ತಿಯನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುವ ನಾಯಕ. ನನಗೆ ಧೋನಿ ಬಗ್ಗೆ ಚೆನ್ನಾಗಿ ತಿಳಿದಿದೆ ಮತ್ತು ಅವರು ಬದಲಾಗಿಲ್ಲ ಎಂದು ನಾನು ಭಾವಿಸುತ್ತೇನೆ ಎಂದರು.

ಚೆನ್ನೈ ಸೂಪರ್ ಕಿಂಗ್ಸ್ ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮುಂಬೈ ಇಂಡಿಯನ್ಸ್ ಗಿಂತ ಒಂದು ಕಡಿಮೆ. ಆದರೆ 10 ಆವೃತ್ತಿಯಲ್ಲೂ ನಾಕೌಟ್ ಹಂತ ತಲುಪಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com