ಎಂಎಸ್ ಧೋನಿ
ಎಂಎಸ್ ಧೋನಿ

ಭಾರತೀಯರ ಮೇಲುಗೈ: ಐಸಿಸಿ ದಶಕದ ಪುರುಷರ ಏಕದಿನ ಮತ್ತು ಟಿ20 ತಂಡದ ನಾಯಕನಾಗಿ ಎಂಎಸ್ ಧೋನಿ ಆಯ್ಕೆ!

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ದಶಕದ ಪುರುಷರ ಏಕದಿನ ತಂಡದ ನಾಯಕನನ್ನಾಗಿ ಆಯ್ಕೆ ಮಾಡಿದೆ.

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ದಶಕದ ಪುರುಷರ ಏಕದಿನ ತಂಡದ ನಾಯಕನನ್ನಾಗಿ ಆಯ್ಕೆ ಮಾಡಿದೆ.

ಧೋನಿ ನೇತೃತ್ವದ ತಂಡದಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮತ್ತು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಇದ್ದಾರೆ. ತಂಡದಲ್ಲಿ ಡೇವಿಡ್ ವಾರ್ನರ್ ಮತ್ತು ರೋಹಿತ್ ರನ್ನು ಆರಂಭಿಕ ಬ್ಯಾಟ್ಸ್ ಮನ್ಗ್ ಗಳಾಗಿ ಆಯ್ಕೆ ಮಾಡಲಾಗಿದ್ದು, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರನ್ನು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಆಯ್ಕೆ ಮಾಡಲಾಗಿದೆ.

ದಶಕದ ಏಕದಿನ ತಂಡದಲ್ಲಿ ಮಾಜಿ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಮತ್ತು ಬೆನ್ ಸ್ಟೋಕ್ಸ್ ಆಲ್ರೌಂಡರ್ ಆಗಿದ್ದರೆ ದಕ್ಷಿಣ ಆಫ್ರಿಕಾ ಇಮ್ರಾನ್ ತಾಹಿರ್ ಏಕೈಕ ಸ್ಪಿನ್ನರ್. ವೇಗದ ಬೌಲರ್ ಆಸ್ಟ್ರೇಲಿಯಾದ ಬೌಲರ್ ಮಿಚೆಲ್ ಸ್ಟಾರ್ಕ್, ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಮತ್ತು ಶ್ರೀಲಂಕಾದ ಲಸಿತ್ ಮಾಲಿಂಗ ಸೇರಿದ್ದಾರೆ.

ಐಸಿಸಿ ತನ್ನ ದಶಕದ ಮಹಿಳಾ ಟಿ20 ತಂಡದಲ್ಲಿ ಭಾರತೀಯ ಕ್ರಿಕೆಟಿಗರಾದ ಹರ್ಮನ್‌ಪ್ರೀತ್ ಕೌರ್ ಮತ್ತು ಪೂನಮ್ ಯಾದವ್ ಆಯ್ಕೆಯಾಗಿದ್ದಾರೆ. ಆಸ್ಟ್ರೇಲಿಯಾದ ನಾಯಕ ಮೆಗ್ ಲ್ಯಾನಿಂಗ್ ನೇತೃತ್ವದ ಮಹಿಳಾ ತಂಡದಲ್ಲಿ ಎಲ್ಲೀಸ್ ಪೆರ್ರಿ ಆಲ್ರೌಂಡರ್ ಆಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಅನ್ಯಾ ಶ್ರಬ್ಸೋಲ್, ಮೇಗನ್ ಶುಟ್ ಮತ್ತು ಭಾರತೀಯ ಸ್ಪಿನ್ನರ್ ಪೂನಮ್ ಸೇರಿದ್ದಾರೆ.

ಐಸಿಸಿ ದಶಕದ ಪುರುಷರ ಟಿ20 ತಂಡದಲ್ಲಿ ನಾಲ್ವರು ಭಾರತೀಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಎಂ.ಎಸ್. ಧೋನಿ, ಮತ್ತು ಜಸ್ಪ್ರಿತ್ ಬುಮ್ರಾ ಸ್ಥಾನ ಪಡೆದಿದ್ದಾರೆ. ಐಸಿಸಿಯ ಟಿ20 ತಂಡದ ದಶಕದ ನಾಯಕನಾಗಿ ಧೋನಿ ಆಯ್ಕೆಯಾಗಿದ್ದಾರೆ.

ಐಸಿಸಿಯ ದಶಕದ ಟಿ 20 ಐ ತಂಡ: 
ರೋಹಿತ್ ಶರ್ಮಾ, ಕ್ರಿಸ್ ಗೇಲ್, ಆರನ್ ಫಿಂಚ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ ವೆಲ್, ಎಂಎಸ್ ಧೋನಿ (ಸಿ), ಕೀರನ್ ಪೊಲಾರ್ಡ್, ರಶೀದ್ ಖಾನ್, ಜಸ್ಪ್ರೀತ್ ಬುಮ್ರಾ, ಮತ್ತು ಲಸಿತ್ ಮಾಲಿಂಗ.

Related Stories

No stories found.

Advertisement

X
Kannada Prabha
www.kannadaprabha.com