ಟಿಮ್ ಪೈನ್ ನಾಟೌಟ್ ಆದರೆ ರಹಾನೆ ಔಟ್? ಥರ್ಡ್ ಅಂಪೈರ್ ವಿರುದ್ಧ ತಿರುಗಿಬಿದ್ದ ನೆಟ್ಟಿಗರು, ವಿಡಿಯೋ ನೋಡಿ!

ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ರನೌಟ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಹೌದು ಭಾರತೀಯ ಅಭಿಮಾನಿಗಳು ಥರ್ಡ್ ಅಂಪೈರ್ ವಿರುದ್ಧ ಮುಗಿಬಿದ್ದಿದ್ದಾರೆ.
ರನೌಟ್ ದೃಶ್ಯ
ರನೌಟ್ ದೃಶ್ಯ

ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ರನೌಟ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಹೌದು ಭಾರತೀಯ ಅಭಿಮಾನಿಗಳು ಥರ್ಡ್ ಅಂಪೈರ್ ವಿರುದ್ಧ ಮುಗಿಬಿದ್ದಿದ್ದಾರೆ. 

ಆರಂಭಿಕರಾಗಿ ಕಣಕ್ಕಿಳಿದ ರಹಾನೆ ಮತ್ತು ರವೀಂದ್ರ ಜಡೇಜಾ ಅವರು ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ರಹಾನೆ 112 ರನ್ ಗಳಿಸಿದ್ದಾಗ ಸಿಂಗಲ್ ರನ್ ತೆಗೆದುಕೊಳ್ಳಲು ಮುಂದಾದರೂ. ಆದರೆ ಜಡೇಜಾ ಬೇಡ ಅಂದಿದ್ದಕ್ಕೆ ರಹಾನೆ ಹಿಂದಕ್ಕೆ ಹೋಗುವ ಸಂದರ್ಭದಲ್ಲಿ ಮಾರ್ನಸ್ ಲ್ಯಾಬುಸ್ಚಾಗ್ನೆ ಚೆಂಡನ್ನು ಕೀಪರ್ ಟಿಮ್ ಪೈನ್ ಕೈಗೆ ಎಸೆದರು. ರನೌಟ್ ಕುರಿತಾಗಿ ಪೈನ್ ಅಂಪೈರ್ ಗೆ ಮನವಿ ಸಲ್ಲಿಸಿದರು. 

ರನೌಟ್ ತೀರ್ಪು ನೀಡುವುದಕ್ಕೆ ತುಂಬಾ ಕ್ಲಿಷ್ಟಕರವಾಗಿದ್ದರಿಂದ ಮೈದಾನದ ಅಂಪೈರ್ ತೀರ್ಪು ನೀಡುವಂತೆ ಮೂರನೇ ಅಂಪೈರ್ ಗೆ ಮನವಿ ಮಾಡಿದರು. ಈ ವೇಳೆ ಟಿವಿ ಪರದೆಯಲ್ಲಿ ನೋಡಿದ ಥರ್ಡ್ ಅಂಪೈರ್ ಕೊನೆಗೆ ಔಟ್ ಎಂದು ತೀರ್ಪು ನೀಡಿದರು. ಈ ತೀರ್ಪು ನೆಟ್ಟಿಗರ ಕೆರಳುವಂತೆ ಮಾಡಿದೆ. 

ಕಾರಣ ಮೊದಲ ಇನ್ನಿಂಗ್ಸ್ ನಲ್ಲಿ ಟಿಮ್ ಪೈನ್ ಸಹ ಇದೇ ರೀತಿ ರನೌಟ್ ಗೆ ಬಲಿಯಾಗಬೇಕಿತ್ತು. ಆದರೆ ಥರ್ಡ್ ಅಂಪೈರ್ ಅದನ್ನು ನಾಟೌಟ್ ಎಂದು ಘೋಷಿಸಿದ್ದರು. ಆದರೆ ರಹಾನೆಯದ್ದು ಔಟ್ ನೀಡುವ ಮೂಲಕ ಧ್ವಂಧ್ವ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com