
ನವದೆಹಲಿ: ವಿಶ್ವಕಪ್ ಗೆಲ್ಲಿಸಿಕೊಟ್ಟ ಇಮ್ರಾನ್ ಖಾನ್ ನಾಯಕತ್ವದಲ್ಲಿ ಪಾಕಿಸ್ತಾನ ವಿಜೃಂಭಿಸಿದಂತೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮೆರೆಯುತ್ತಿದೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮತ್ತು ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತಂಡಗಳ ನಡುವೆ ಸಾಕಷ್ಟು ಸಾಮ್ಯತೆಗಳಿವೆ ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯ ಪಟ್ಟಿದ್ದಾರೆ.
ಪಂದ್ಯ ನಮ್ಮ ಕೈ ಮೀರಿ ಹೋಗಿದೆ ಎಂದು ತೋರಿದಾಗಲೂ ಇಮ್ರಾನ್ ನೇತೃತ್ವದ ಪಾಕಿಸ್ತಾನ ಪಂದ್ಯಗಳನ್ನು ಗೆಲ್ಲುವ ವಿಭಿನ್ನ ಮಾರ್ಗಗಳನ್ನು ಕಂಡುಕೊಂಡಿತ್ತು. ಅದೇ ರೀತಿ ಟೀಂ ಇಂಡಿಯಾದ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯ ಗೆಲುವು ಇಮ್ರಾನ್ ನೇತೃತ್ವದಲ್ಲಿನ ಪಾಕಿಸ್ತಾನವನ್ನು ನೆನಪಿಸುತ್ತದೆ. ತಂಡ ಬಲವಾದ ಆತ್ಮ ನಂಬಿಕೆ ಹೊಂದಿತ್ತು ಎಂದು ಸಂಜಯ್ ಟ್ವೀಟ್ ಮಾಡಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ದದ 5 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ ಇತಿಹಾಸ ನಿರ್ಮಿಸಿತ್ತು. ಈ ಹಿನ್ನೆಲೆಯಲ್ಲಿ ಕೊಹ್ಲಿ ನಾಯಕತ್ವವನ್ನು ಇಮ್ರಾನ್ ಖಾನ್ ಗೆ ಹೊಲಿಸಿದ್ದಾರೆ.
Advertisement