ಪಿಸಿಬಿ ಏಷ್ಯಾ ಕಪ್ ಆತಿಥ್ಯದಿಂದ ತೊಂದರೆ ಇಲ್ಲ, ಆದರೆ, ಪಾಕ್ ನಲ್ಲಿ ಭಾರತ ಆಡಲ್ಲ: ಬಿಸಿಸಿಐ

ಪಾಕಿಸ್ತಾನ ಕ್ರಿಕೆಟ್ ಮಂಡಳಿ  2020ರ ಏಷ್ಯಾಕಪ್ ಆತಿಥ್ಯ ವಹಿಸುವುದರಿಂದ ಯಾವುದೇ ತೊಂದರೆ ಇಲ್ಲ. ಆದರೆ, ಭಾರತ ಪಾಕಿಸ್ತಾನದಲ್ಲಿ ಆಡಲ್ಲ ಎಂದು ಬಿಸಿಸಿಐ ಇಂದು ಸ್ಪಷ್ಟಪಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ  2020ರ ಏಷ್ಯಾಕಪ್ ಆತಿಥ್ಯ ವಹಿಸುವುದರಿಂದ ಯಾವುದೇ ತೊಂದರೆ ಇಲ್ಲ. ಆದರೆ, ಭಾರತ ಪಾಕಿಸ್ತಾನದಲ್ಲಿ ಆಡಲ್ಲ ಎಂದು ಬಿಸಿಸಿಐ ಇಂದು ಸ್ಪಷ್ಟಪಡಿಸಿದೆ.

ಏಷ್ಯಾ ಕಪ್ ಆಯೋಜಿಸುವ ಹಕ್ಕು ಪ್ರಮುಖ ವಿಚಾರವಲ್ಲ,ಇದು ಮೈದಾನಕ್ಕೆ ಸಂಬಂಧಿಸಿದ ವಿಷಯವಾಗಿದೆ. ಪಾಕಿಸ್ತಾನದ ಬದಲಿಗೆ ಬೇರೆ ರಾಷ್ಟ್ರದ ಮೈದಾನದ ಅಗತ್ಯವಿದೆ  ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಇದನ್ನು ಹೊರತುಪಡಿಸಿದಂತೆ  ಏಷ್ಯಾಕಪ್‌ನಂತಹ ಬಹು ರಾಷ್ಟ್ರಗಳ ಸ್ಪರ್ಧೆಯಲ್ಲಿ ಭಾಗವಹಿಸಲು ಭಾರತೀಯ ತಂಡವು ಪಾಕಿಸ್ತಾನಕ್ಕೆ ಭೇಟಿ ನೀಡುವ ಯಾವುದೇ ಮಾರ್ಗಗಳಿಲ್ಲ ಎಂದು ಅವರು ಸ್ಪಷ್ಪಪಡಿಸಿದ್ದಾರೆ.

2018ರಲ್ಲಿ ಯುಎಇನಲ್ಲಿ ಬಿಸಿಸಿಐ ಏಷ್ಯಾಕಪ್ ಆಯೋಜಿಸಿತ್ತು. ಇದೇ ರೀತಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಡಬಹುದು. ಪರ್ಯಾಯ ಮೈದಾನ ಒಂದು ಉತ್ತಮ ಆಯ್ಕೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ. 

ದಶಕದ ನಂತರ ಇತ್ತೀಚಿಗೆ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ಯಶಸ್ವಿಯಾಗಿ ಸರಣಿಯನ್ನು ಮುಗಿಸಿತ್ತು. ಪ್ರಸ್ತುತ ಪಾಕ್ ಪ್ರವಾಸದಲ್ಲಿರುವ ಬಾಂಗ್ಲಾದೇಶ ಮೂರು ಟಿ-20 ಪಂದ್ಯಗಳನ್ನಾಡಿದೆ. ಫೆಬ್ರವರಿ 7ರಿಂದ 11ರವರೆಗೆ ಟೆಸ್ಟ್ ಹಾಗೂ ಏಪ್ರಿಲ್ 5ರಿಂದ 9ರವರೆಗೂ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಒಂದು ಏಕದಿನ ಪಂದ್ಯಗಳನ್ನಾಡಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com