ಐಪಿಎಲ್‌ 2020: ಪರ್ಪಲ್‌ ಕ್ಯಾಪ್‌ ಪಡೆಯಬಹುದಾದ ಸಂಭಾವ್ಯ ಬೌಲರ್‌ಗಳು

ಮಾರ್ಚ್‌ 29 ರಿಂದ ಆರಂಭವಾಗುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹೊಡಿ ಬಡಿ ಟೂರ್ನಿಯನ್ನು ಕಣ್ತುಂಬಿಸಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಟೂರ್ನಿಯಲ್ಲಿ ನಡೆಯಬಹುದಾದ ಹಲವು ಲೆಕ್ಕಾಚಾರಗಳನ್ನು ಈಗಾಗಲೇ ಕ್ರಿಕೆಟ್‌ ಪಂಡಿತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಮಾರ್ಚ್‌ 29 ರಿಂದ ಆರಂಭವಾಗುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹೊಡಿ ಬಡಿ ಟೂರ್ನಿಯನ್ನು ಕಣ್ತುಂಬಿಸಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಟೂರ್ನಿಯಲ್ಲಿ ನಡೆಯಬಹುದಾದ ಹಲವು ಲೆಕ್ಕಾಚಾರಗಳನ್ನು ಈಗಾಗಲೇ ಕ್ರಿಕೆಟ್‌ ಪಂಡಿತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪ್ರತಿವರ್ಷ ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸುವ ಬ್ಯಾಟ್ಸ್‌ಮನ್‌ಗೆ ಆರೆಂಜ್ ಕ್ಯಾಪ್ ಹಾಗೂ ಅತಿ ಹೆಚ್ಚು ವಿಕೆಟ್‌ ಪಡೆಯುವ ಬೌಲರ್‌ಗೆ ಪರ್ಪಲ್ ಕ್ಯಾಪ್ ನೀಡಿ ಗೌರವಿಸಲಾಗುತ್ತದೆ. ಅಂದ ಹಾಗೇ ಪ್ರಸ್ತುತ ಪ್ರದರ್ಶನವನ್ನು ಆಧರಿಸಿ ಈ ಬಾರಿ ಪರ್ಪಲ್ ಕ್ಯಾಪ್‌ ಪಡೆಯಬಹುದಾದ ಐವರು ಬೌಲರ್‌ಗಳನ್ನು ಗುರುತಿಸಲಾಗಿದೆ.

ಭಾರತದ ಪಿಚ್‌ಗಳು ಎಲ್ಲರಿಗೂ ಗೊತ್ತಿರುವ ರೀತಿ ಸ್ಪಿನ್‌ ಸ್ನೇಹಿ ಪಿಚ್‌ಗಳಾಗಿವೆ. ಹೆಚ್ಚು ಕಡಿಮೆ ಎಲ್ಲಾ ಪಿಚ್‌ಗಳು ನಿಧಾನಗತಿಯಿಂದ ಕೂಡಿರುತ್ತದೆ. ಇದು ಬ್ಯಾಟ್ಸ್‌ಮನ್‌ಗಳಿಗೆ ಚೆಂಡನ್ನು ಬೌಂಡರಿಗೆ ಅಟ್ಟಲು ಸುಲಭವಾಗಬಹದು. 2010ರ ಮೂರನೇ ಐಪಿಎಲ್‌ ಆವೃತ್ತಿಯಲ್ಲಿ ಪ್ರಗ್ಯಾನ್ ಓಜಾ ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದರು. ಕಳೆದ 2019ರ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾದ ಹಿರಿಯ ಸ್ಪಿನ್ನರ್ ಇಮ್ರಾನ್ ತಾಹೀರ್ ಪಡೆದಿದ್ದರು. ಐಪಿಎಲ್‌ ಟೂರ್ನಿಯಲ್ಲಿ ಎರಡು ಬಾರಿ ಪರ್ಪಲ್ ಕ್ಯಾಪ್‌ ಪಡೆದ ದೇಶದ ಏಕೈಕ ವೇಗಿ ಭುವನೇಶ್ವರ್‌ ಆಗಿದ್ದಾರೆ. 2016 ಮತ್ತು 17ನೇ ಆವೃತ್ತಿಯಲ್ಲಿ ಸತತ ಎರಡು ಬಾರಿ ಸನ್‌ ರೈಸರ್ಸ್ ಹೈದರಾಬಾದ್ ಪರ ಪರ್ಪಲ್ ಕ್ಯಾಪ್ ಗೆದ್ದಿದ್ದರು.

ಮೊಹಮ್ಮದ್ ಶಮಿ: ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್‌ ಶಮಿ ಪ್ರಸ್ತುತ ಮೂರೂ ಮಾದರಿಯಲ್ಲಿ ಅತ್ಯಂತ ಯಶಸ್ವಿ ವೇಗಿಯಾಗಿ ಮುಂಚೂಣಿಯಲಿದ್ದಾರೆ. ಹಿಸ ಚೆಂಡಿನಲ್ಲಿ ಅವರು ಇನ್‌ ಹಾಗೂ ಔಟ್ ಸ್ವಿಂಗ್ ಎರಡನ್ನೂ ಅತ್ಯುತ್ತಮವಾಗಿ ನಿರ್ವಹಿಸಬಲ್ಲರು. ಇತ್ತಿಚೀನ ನ್ಯೂಜಿಲೆಂಡ್ ಪ್ರವಾಸದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಯಾರ್ಕರ್ ಕೂಡ ಅದ್ಭುತ ನಿಯಂತ್ರಣವನ್ನು ಹೊಂದಿದ್ದಾರೆ. ಈ ಬಾರಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಅತ್ಯುತ್ತಮ ಬೌಲಿಂಗ್ ಮಾಡುವ ತುಡಿತದಲ್ಲಿದ್ದಾರೆ.

ಜಸ್ಪ್ರಿತ್ ಬುಮ್ರಾ: ಸ್ಟ್ರೆಸ್‌ ಫ್ರಾಕ್ಚರ್‌ನಿಂದ ಚೇತರಿಸಿಕೊಂಡು ಟೀಮ್ ಇಂಡಿಯಾಗೆ ಮರಳಿದ ಬಳಿಕ ಜಸ್ಪ್ರಿತ್ ಬುಮ್ರಾ ಇನ್ನು ನಿರೀಕ್ಷಿತ ಪ್ರಮಾಣದಲ್ಲಿ ಬೌಲಿಂಗ್ ಮಾಡಿಲ್ಲ. ಆದರೆ, ಅವರು ವಿಶ್ವ ದರ್ಜೆಯ ಬೌಲರ್‌ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಪರ್ಪಲ್ ಕ್ಯಾಪ್ ಪಡೆಯುವ ಸಂಭಾವ್ಯ ಬೌಲರ್‌ಗಳಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಆಡುವ ಬುಮ್ರಾ ಡೆತ್‌ ಓವರ್‌ನಲ್ಲಿ ಎಂಥ ಬ್ಯಾಟ್ಸ್‌ಮನ್‌ ಇದ್ದರೂ ತಮ್ಮ ವಿಶಿಷ್ಠ ಶೈಲಿಯ ಬೌಲಿಂಗ್‌ನಿಂದ ಕಟ್ಟಿಹಾಕುತ್ತಾರೆ. ಇದು ಮುಂಬೈ ತಂಡದ ಪಾಲಿಗೆ ಪ್ಲಸ್‌ ಪಾಯಿಂಟ್‌. ಇವರ ಪ್ರಮುಖ ಅಸ್ತ್ರವಾಗಿರುವ ಯಾರ್ಕರ್‌ಗಳಿಂದ ತಮ್ಮ ಬೌಲಿಂಗ್‌ನಲ್ಲಿ ಗಮನ ಸೆಳೆಯುತ್ತಾರೆ.

ಕಗಿಸೋ ರಬಾಡ: ದಕ್ಷಿಣ ಆಫ್ರಿಕಾ ತಂಡದ ಅತ್ಯಂತ ಯಶಸ್ವಿ ಬೌಲರ್‌ ಎನಿಸಿರುವ ಕಗಿಸೋ ರಬಾಡ, ಕಳೆದ ಆವೃತ್ತಿಯಲ್ಲಿ ಪರ್ಪಲ್‌ ಗೆಲ್ಲಬೇಕಿತ್ತು. ಆದರೆ, ಅವರು ಗಾಯಕ್ಕೆ ತುತ್ತಾಗಿ ಅರ್ಧದಲ್ಲೇ ಟೂರ್ನಿಯಿಂದ ಹೊರ ನಡೆದಿದ್ದರು. ವೇಗದ ಜತೆ ಅತ್ಯುತ್ತಮ ಕೌಶಲ ಮೆರೆಯುವ ರಬಾಡ ಅವರು ಪ್ರಸ್ತುತ ವಿಶ್ವದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ರಬಾಡ ಹೊಸ ಚೆಂಡಿನಲ್ಲಿ ಅತ್ಯುತ್ತಮವಾಗಿ ಸ್ವಿಂಗ್ ಮಾಡಬಲ್ಲರು. ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸಲು ತಡಬಡಾಯಿಸುತ್ತಾರೆ. ಇವರ ಬೌಲಿಂಗ್‌ನಲ್ಲಿ ಬ್ಯಾಟ್ಸ್‌ಮನ್‌ ಲೆಂಗ್ತ್‌ ಪಡೆಯುವುದು ಕಷ್ಟ. ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಇವರು ಈ ಬಾರಿ ಪರ್ಪಲ್‌ ಕ್ಯಾಪ್‌ ಪಡೆಯುವ ನಿರೀಕ್ಷಿತ ಬೌಲರ್‌ ಆಗಿದ್ದಾರೆ.

ದೀಪಕ್‌ ಚಾಹರ್‌: ಕಳೆದ ಹಲವು ಐಪಿಎಲ್‌ ಆವೃತ್ತಿಗಳಲ್ಲಿ ಇತರೆ ಬೌಲರ್‌ಗಳಿಗಿಂತ ಅತಿ ಸ್ವಿಂಗ್ ಮಾಡಿದ್ದ ಬೌಲರ್‌ ದೀಪಕ್‌ ಚಾಹರ್‌. ಚೆನ್ನೈ ಸೂಪರ್‌ ಕಿಂಗ್ಸ್ ಪರ ಆಡುವ ದೀಪಕ್ ಚಾಹರ್ ಅವರನ್ನು ಮಹೇಂದ್ರ ಸಿಂಗ್ ಧೋನಿ ಅತ್ಯುತ್ತಮವಾಗಿ ನಿರ್ವಹಿಸುತ್ತಾರೆ. ಡೆತ್‌ ಓವರ್‌ಗಳಂತೂ ಸಿಎಸ್‌ಕೆಗೆ ದೀಪಕ್‌ ಅತ್ಯಂತ ಮೌಲ್ಯಯುತ ಬೌಲರ್‌ ಆಗಿದ್ದಾರೆ. ಚಾಹರ್ ವಿಶೇಷವಾಗಿ ಚೆನ್ನೈಗೆ ನ್ಯೂ ಬಾಲ್ ಮ್ಯಾಚ್ ವಿನ್ನರ್‌ ಆಗಿದ್ದಾರೆ. ಬಲಗೈ ಬ್ಯಾಟ್ಸ್‌ಮನ್‌ಗಳಿಗೆ ಇಬರು ಹೆಚ್ಚು ಸ್ವಿಂಗ್ ಮಾಡುವುದಿಲ್ಲ. ಆದರೆ, ಅವರನ್ನು ಪರಿಸ್ಥಿತಿಗಳಿಗೆ ತಕ್ಕಂತೆ ನಿಯಂತ್ರಿಸುತ್ತಾರೆ. ಅಲ್ಲದೇ, ಬೌನ್ಸ್‌ ಎಸೆತಗಳಲ್ಲಿ ಬಲವಾಗಿರುವ ಚಾಹರ್‌, ಬ್ಯಾಟ್ಸ್‌ಮನ್‌ ಅನ್ನು ಬ್ಯಾಕ್‌ ಫುಟ್‌ಗೆ ಪ್ರೇರೇಪಿಸುತ್ತಾರೆ.

ಇಮ್ರಾನ್‌ ತಾಹೀರ್‌: ದಕ್ಷಿಣ ಆಫ್ರಿಕಾ ತಂಡದ ಹಿರಿಯ ಸ್ಪಿನ್ನರ್ ಇಮ್ರಾನ್‌ ತಾಹೀರ್‌ ಸದ್ಯ ವಿಶ್ವದ ಮುಂಚೂಣಿ ಲೆಗ್ ಸ್ಪಿನ್ನರ್‌. ಚೆನ್ನೈ ಎಂ ಚಿದಂಬರಂ ಕ್ರೀಡಾಂಗಣದ ವಿಕೆಟ್‌ ಅವರಿಗೆ ತಮ್ಮ ಬೌಲಿಂಗ್‌ನಲ್ಲಿ ಸಾಕಷ್ಟು ಸುಧಾರಿಸಿಕೊಳ್ಳುವಲ್ಲಿ ನೆರವಾಗಿದೆ. ತಾಹೀರ್‌ ಲೂಪಿ ಲೆಗ್‌ ಸ್ಪಿನ್ನರ್‌ ಅಲ್ಲದೇ, ಯಾವುದೇ ಪಿಚ್‌ನಲ್ಲಿ ಚೆಂಡನ್ನು ತಿರುಗಿಸಬಲ್ಲ ಸಾಮರ್ಥ್ಯ ಅವರಲ್ಲಿದೆ. ಕಳೆದ 2019ರ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಟ್ಟಿಯಲ್ಲಿ ಇವರು ಅಗ್ರ ಸ್ಥಾನ ಪಡೆದಿದ್ದರು. ಆ ಮೂಲಕ ಪರ್ಪಲ್‌ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು. ಈ ಬಾರಿಯು ಅವರು ಮತ್ತೊಂದು ಪರ್ಪಲ್‌ ಕ್ಯಾಪ್‌ ಮುಡಿಗೇರಿಸಿಕೊಳ್ಳುವ ತುಡಿತದಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com