

ವಿರಾಟ್ ಕೊಹ್ಲಿ ತಂಡದ ಬಗ್ಗೆ ರವಿ ಶಾಸ್ತ್ರಿ ಮಾತನಾಡಿದ್ದು, ತಾವು 1985 ರ ವಿಶ್ವ ಚಾಂಪಿಯನ್ ಭಾರತೀಯ ತಂಡ ಹಾಗೂ 2018/19 ರಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದ ವಿರಾಟ್ ಕೊಹ್ಲಿ ನೇತೃತ್ವದ ತಂಡದ ಭಾಗವಾಗಿದ್ದನ್ನು ಅದ್ಭುತ ಎಂದು ಬಣ್ಣಿಸಿದ್ದಾರೆ.
1985 ರಲ್ಲಿ ರವಿ ಶಾಸ್ತ್ರಿ ಸುನಿಲ್ ಗವಾಸ್ಕರ್ ನೇತೃತ್ವದ ತಂಡದಲ್ಲಿದ್ದರು. ವಿರಾಟ್ ಕೋಹ್ಲಿ ತಂಡ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದಾಗ ಭಾರತೀಯ ತಂಡದ ಕೋಚ್ ಆಗಿದ್ದರು.
ನಾನು ಆ ಎರಡೂ ತಂಡದಲ್ಲಿದ್ದದ್ದು ಅದ್ಭುತ. 71 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ತಂಡ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿತ್ತು. 1985 ರ ತಾಂಡವನ್ನು ಯಾರೂ ಸಹ ಮಣಿಸಲು ಸಾಧ್ಯವಿಲ್ಲ. ಯಾವುದೇ ತಂಡಕ್ಕೂ 1985 ರ ತಂಡ ಪ್ರಬಲ ಪೈಪೋಟಿ ನೀಡಬಲ್ಲದು. ವಿರಾಟ್ ಕೊಹ್ಲಿ ತಂಡಕ್ಕೆ 1985 ರ ಭಾರತೀಯ ತಂಡ ಪೈಪೋಟಿ ನೀಡಬಲ್ಲದು ಎಂದು ರವಿಶಾಸ್ತ್ರಿ ಹೇಳಿದ್ದಾರೆ.