ಕೊಹ್ಲಿ-ಕೆಸ್ರಿಕ್
ಕೊಹ್ಲಿ-ಕೆಸ್ರಿಕ್

ಕೊಹ್ಲಿಗೆ ಬಾಯ್ಮುಚ್ಚಿ ಬ್ಯಾಟಿಂಗ್‌ ಮಾಡು ಎಂದಿದ್ದೆ: ಕೆಸ್ರಿಕ್ ವಿಲಿಯಮ್ಸ್‌

ಕಳೆದ ವರ್ಷ ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವೆ ನಡೆದ ಟಿ20 ಕ್ರಿಕೆಟ್‌ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಮತ್ತು ಕೆರಿಬಿಯನ್ ವೇಗಿ ಕೆಸ್ರಿಕ್‌ ವಿಲಿಯಮ್ಸ್‌ ನಡುವಣ ಮಾತಿನ ಜಟಾಪಟಿ ಕ್ರಿಕೆಟ್‌ ಲೋಕವನ್ನೇ ತನ್ನತ್ತ ತಿರುಗುವಂತೆ ಮಾಡಿತ್ತು.

ನವದೆಹಲಿ: ಕಳೆದ ವರ್ಷ ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವೆ ನಡೆದ ಟಿ20 ಕ್ರಿಕೆಟ್‌ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಮತ್ತು ಕೆರಿಬಿಯನ್ ವೇಗಿ ಕೆಸ್ರಿಕ್‌ ವಿಲಿಯಮ್ಸ್‌ ನಡುವಣ ಮಾತಿನ ಜಟಾಪಟಿ ಕ್ರಿಕೆಟ್‌ ಲೋಕವನ್ನೇ ತನ್ನತ್ತ ತಿರುಗುವಂತೆ ಮಾಡಿತ್ತು.

ಅಂದು ಕೊಹ್ಲಿ ಆ ರೀತಿ ಸಂಭ್ರಮಾಚರಣೆ ಮಾಡಿದ್ದೇಕೆ ಎಂಬುದು ಹಲವರಿಗೆ ಅರ್ಥವಾಗಿರಲಿಲ್ಲ. ಅಂದಹಾಗೆ, 2017ರಲ್ಲಿ ಭಾರತ ತಂಡ ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿದ್ದ ವೇಳೆ ಕೆಸ್ರಿಕ್‌ ಟೀಂ ಇಂಡಿಯಾ ನಾಯಕನ ವಿಕೆಟ್‌ ಪಡೆದು ನೋಟ್‌ಬುಕ್‌ ಸೆಲೆಬ್ರೇಷನ್‌ ಮಾಡಿದ್ದೇ ಇದಕ್ಕೆ ಪ್ರಮುಖ ಕಾರಣವಾಗಿತ್ತು ಎಂದು ಹೇಳಿದ್ದಾರೆ. 

2017ರಲ್ಲಿ ಜಮೈಕಾದಲ್ಲಿ ನಾನು ಕೊಹ್ಲಿ ವಿಕೆಟ್ ಪಡೆದಾಗ ಆ ನೋಟ್ಬುಕ್ ಆಚರಣೆಯನ್ನು ಮಾಡಿದ್ದೆ ನಾನು ನೋಟ್ಬುಕ್ ಆಚರಣೆಯನ್ನು ಮಾಡಿದಾಗ, ನಾನು ಅದನ್ನು ಇಷ್ಟಪಟ್ಟ ಕಾರಣ ಅದನ್ನು ಮಾಡಿದ್ದೇ, ಮತ್ತು ನನ್ನ ಅಭಿಮಾನಿಗಳಿಗಾಗಿ ಮಾಡಿದ್ದೇ. ಆದರೆ ಕೊಹ್ಲಿ ಅದನ್ನು ಆ ರೀತಿ ನೋಡಲಿಲ್ಲ ಎಂದು ವಿಲಿಯಮ್ಸ್ ನೆನಪಿಸಿಕೊಂಡರು.

2017ರ ಟಿ20 ಪಂದ್ಯದ ವೇಳೆ ಇಂತಹ ಆಚರಣೆಯನ್ನು ಇಷ್ಟಪಡುವುದಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ ಎಂದು ವೇಗಿ ಹೇಳಿಕೊಂಡಿದ್ದಾರೆ. "ಆಟ ಮುಗಿದ ನಂತರ, ನಾನು ಅವರ ಕೈಕುಲುಕಲು ಹೋದೆ, ಕೊಹ್ಲಿ ಉತ್ತಮ ಬೌಲಿಂಗ್ ಹೇಳಿದರು ಆದರೆ ಆಚರಣೆಯು ಇಷ್ಟವಾಗಿಲ್ಲ ಎಂದು ಹೇಳಿ  ಹೊರನಡೆದರು. ಅಂದು ಅವರು ಕಠಿಣವಾಗಿ ವರ್ತಿಸಿರಲಿಲ್ಲ. ಆದರೆ ಅದು ನಮ್ಮ ಶುಭಾಶಯದ ಅಂತ್ಯವಾಗಿತ್ತು. ‘ನಾನು ನಿಮ್ಮ ವಿರುದ್ಧ ಉತ್ತಮವಾಗಿ ಆಡುತ್ತಿದ್ದೇನೆ, ಅವರು ವಿಶ್ವದ ಅತ್ಯುತ್ತಮ ಆಟಗಾರ, ಏನೇ ಇರಲಿ. ನಾವು ನಮ್ಮ ಪ್ರತ್ಯೇಕ ಮಾರ್ಗಗಳಲ್ಲಿ ಹೋದೆವು ಎಂದು ಕೆಸ್ರಿಕ್ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com