ಆಸ್ಟ್ರೇಲಿಯಾದಲ್ಲಿ ಟೀಮ್‌ ಇಂಡಿಯಾ ಆಟಗಾರರಿಗೆ ಹೊಸ ಜೆರ್ಸಿ

ಐಪಿಎಲ್ ಬೆನ್ನಲ್ಲೇ ಆಯೋಜನೆಯಾಗಿರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಿದ್ಧವಾಗಿರುವ ಟೀಂ ಇಂಡಿಯಾ ಹೊಸ ಮಾದರಿಯ ಜೆರ್ಸಿ ತೊಟ್ಟು ಆಟವಾಡಲಿದೆ.
ಟೀಮ್‌ ಇಂಡಿಯಾ ಹೊಸ ಜೆರ್ಸಿ (ಔಟ್‌ಲುಕ್‌  ಚಿತ್ರ)
ಟೀಮ್‌ ಇಂಡಿಯಾ ಹೊಸ ಜೆರ್ಸಿ (ಔಟ್‌ಲುಕ್‌ ಚಿತ್ರ)
Updated on

ನವದೆಹಲಿ: ಐಪಿಎಲ್ ಬೆನ್ನಲ್ಲೇ ಆಯೋಜನೆಯಾಗಿರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಿದ್ಧವಾಗಿರುವ ಟೀಂ ಇಂಡಿಯಾ ಹೊಸ ಮಾದರಿಯ ಜೆರ್ಸಿ ತೊಟ್ಟು ಆಟವಾಡಲಿದೆ.

ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು ಮಂಗಳವಾರ ಮುಂಬೈ ಇಂಡಿಯನ್ಸ್ ಚಾಂಪಿಯನ್‌ ಪಟ್ಟ ಅಲಂಕತರಿಸೊದ ಬಳಿಕ ಮುಕ್ತಾಯವಾಗಿದೆ. ಇದೀಗ ಕ್ರಿಕೆಟ್‌ ಪಂಡಿತರ ಹಾಗೂ ಅಭಿಮಾನಿಗಳ ಚಿತ್ತ ಭಾರತದ ಆಸ್ಟ್ರೇಲಿಯಾ ಪ್ರವಾಸದ ಮೇಲೆ  ತಿರುಗಿದೆ. ಇದು ಟೀಮ್‌ ಇಂಡಿಯಾದ ಪೂರ್ಣ ಪ್ರಮಾಣದ ಪ್ರವಾಸವಾಗಿದೆ. 

ಮೂರು ಪಂದ್ಯಗಳ ಏಕದಿನ ಸರಣಿಯ ಮೂಲಕ ಭಾರತ ಪ್ರವಾಸ ಆರಂಭವಾಗಲಿದೆ. ನ.27 ಮತ್ತು 29 ರಂದು ಮೊದಲ ಎರಡು ಪಂದ್ಯಗಳು ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಜರುಗಲಿದೆ. ಮೂರನೇ ಹಾಗೂ ಮೊದಲ ಟಿ20 ಪಂದ್ಯ ಮನುಕಾ ಓವಲ್‌ ಅಂಗಳದಲ್ಲಿ ನಡೆಯಲಿದೆ.  ನಂತರ, ಎರಡು ಹಾಗೂ ಮೂರನೇ ಟಿ20 ಪಂದ್ಯಗಳಾಡಲು ಸಿಡ್ನಿಗೆ ವಾಪಸ್‌ ಆಗಲಿವೆ. 

ಡಿಸೆಂಬರ್‌ 17 ರಿಂದ 21ರವರೆಗೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಅಡಿಲೇಡ್ ಓವಲ್‌ನಲ್ಲಿ ಮೊದಲನೇ ಫಿಂಕ್‌ ಬಾಲ್‌ ಟೆಸ್ಟ್ ನಡೆಯಲಿದೆ. ನಂತರ ಬಾಕ್ಸಿಂಗ್‌ ಟೆಸ್ಟ್‌ ಮೆಲ್ಬೋರ್ನ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಒಂದು ವೇಳೆ ಕೋವಿಡ್‌-19 ನಿಂದಾಗಿ ಎಂಸಿಸಿ ಅಂಗಳ  ಲಭ್ಯವಾಗದೇ ಇದ್ದಲ್ಲಿ ಅಡಿಲೇಡ್‌ ಓವಲ್‌ ಎರಡನೇ ಟೆಸ್ಟ್‌ ಆಯೋಜಿಸಲಾಗುವುದು. ಇನ್ನುಳಿದ ಎರಡು ಪಂದ್ಯಗಳನ್ನು ಕ್ರಮಮವಾಗಿ ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣ ಹಾಗೂ ಬ್ರಿಸ್ಬೇನ್‌ನಲ್ಲಿ ಆಯೋಜಿಸಲಾಗಿದೆ. 

ಆಸ್ಟ್ರೇಲಿಯಾದಲ್ಲಿ ಟೀಮ್‌ ಇಂಡಿಯಾ ಆಟಗಾರರು ಸೀಮಿತ ಓವರ್‌ಗಳ ಸರಣಿಯಲ್ಲಿ ನೂತನ ಜೆರ್ಸಿಯನ್ನು ಧರಿಸಲಿದ್ದಾರೆ. 70ರ ದಶಕದ ಜೆರ್ಸಿಯಿಂದ ಸ್ಪೂರ್ತಿ ಪಡೆದು ನೂತನ ಜೆರ್ಸಿ ತಯಾರಿಸಲಾಗಿದೆ. ಅಲ್ಲದೆ, ಆಟಗಾರರಿಗೆ ಹೊಸ ಕಿಟ್‌ಗಳನ್ನು ನೀಡಲಾಗುತ್ತಿದೆ. ಹೊಸ ಕಿಟ್‌ಗಳು  ನೇವಿ ಬ್ಲೂ ಬಣ್ಣವನ್ನು ಹೊಂದಿದೆ ಎಂದು ಔಟ್‌ಲುಕ್‌ ವರದಿ ಮಾಡಿದೆ. ಎಂಪಿಎಲ್‌ ಸ್ಫೋರ್ಟ್ಸ್‌ ಇದೀಗ ಭಾರತ ತಂಡದ ಕಿಟ್‌ ಹಾಗೂ ಜೆರ್ಸಿ ಪ್ರಾಯೋಜಕತ್ವ ವಹಿಸಿಕೊಂಡಿದೆ. ಮುಂದಿನ ಮೂರು ವರ್ಷಗಳಿಗೆ ಎಂಪಿಎಲ್‌ 120 ಕೋಟಿ ರೂ.ಗಳಿಗೆ ಬಿಸಿಸಿಐ ಜತೆ ಒಪ್ಪಂದ  ಮಾಡಿಕೊಂಡಿದೆ. ಇದಕ್ಕೂ ಮೊದಲು ನೈಕಿ ಬಿಸಿಸಿಐಗೆ ಪ್ರಾಯೋಜಕತ್ವ ವಹಿಸಿಕೊಂಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com