ಉತ್ತಮ ಇನ್ನಿಂಗ್ಸ್ ಕಟ್ಟಲು ವಿರಾಟ್ ಕೊಹ್ಲಿ ಸಲಹೆಗಳು ನೆರವಾಯಿತು: ದೇವದತ್‌ ಪಡಿಕ್ಕಲ್‌

ಐಪಿಎಲ್ ನಲ್ಲಿ ಉತ್ತಮ ಇನ್ನಿಂಗ್ಸ್ ಕಟ್ಟಲು ವಿರಾಟ್ ಕೊಹ್ಲಿ ಸಲಹೆಗಳು ನೆರವಾಯಿತು ಎಂದು ಉದಯೋನ್ಮುಖ ಕ್ರಿಕೆಟಿಗೆ ದೇವದತ್ ಪಡಿಕ್ಕಲ್ ಹೇಳಿದ್ದಾರೆ.
ಪಡಿಕ್ಕಲ್-ವಿರಾಟ್ ಕೊಹ್ಲಿ
ಪಡಿಕ್ಕಲ್-ವಿರಾಟ್ ಕೊಹ್ಲಿ
Updated on

ನವದೆಹಲಿ: ಐಪಿಎಲ್ ನಲ್ಲಿ ಉತ್ತಮ ಇನ್ನಿಂಗ್ಸ್ ಕಟ್ಟಲು ವಿರಾಟ್ ಕೊಹ್ಲಿ ಸಲಹೆಗಳು ನೆರವಾಯಿತು ಎಂದು ಉದಯೋನ್ಮುಖ ಕ್ರಿಕೆಟಿಗೆ ದೇವದತ್ ಪಡಿಕ್ಕಲ್ ಹೇಳಿದ್ದಾರೆ.

ತಮ್ಮ ಪಾಲಿನ ಮೊದಲನೇ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌, ತನ್ನ ಬ್ಯಾಟಿಂಗ್‌ ಯಶಸ್ಸಿನ ಶ್ರೇಯವನ್ನು ನಾಯಕ ವಿರಾಟ್‌ ಕಹ್ಲಿ  ಸಮರ್ಪಿಸಿದ್ದಾರೆ. ಅಲ್ಲದೆ, ಟೂರ್ನಿಯುದ್ದಕ್ಕೂ ಕೊಹ್ಲಿ ಹೇಳಿಕೊಟ್ಟಿದ್ದ ಸಲಹೆಗಳನ್ನು ಬೆಂಗಳೂರು ಮೂಲದ ಆಟಗಾರ ಬಹಿರಂಗಪಡಿಸಿದ್ದಾರೆ.

ಇಎಸ್ ಪಿಎನ್-ಕ್ರಿಕ್ ಇನ್ಫೋ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಪಡಿಕ್ಕಲ್ ಅವರು, 'ನನ್ನ ಸುತ್ತಲೂ ಸಾಕಷ್ಟು ಹಿರಿಯ ಆಟಗಾರರಿದ್ದರು. ಅವರಿಂದ ನಾನು ಸಾಕಷ್ಟು ಪ್ರಮಾಣದಲ್ಲಿ ಕಲಿತಿದ್ದೇನೆ. ಇದು ಬೇರೆ ಬೇರೆ ಸಂದರ್ಭಗಳಲ್ಲಿ ಯಾವ ರೀತಿ ನಿಭಾಯಿಸಬೇಕೆಂಬ  ಮನಸ್ಥಿತಿಯನ್ನು ಬದಲಾಯಿಸಿದೆ. ಹಿರಿಯ ಆಟಗಾರರು ಟೂರ್ನಿಯುದ್ದಕ್ಕೂ ತಂಡದ ಯಾವುದೇ ಸಂದರ್ಭದಲ್ಲೂ ಸ್ಥಿರವಾಗಿದ್ದರು. ಫಲಿತಾಂಶಕ್ಕಿಂತಲೂ ಪ್ರದರ್ಶನ ಉತ್ತಮ ನೀಡುವತ್ತ ದೃಷ್ಠಿ ನೆಟ್ಟಿದ್ದರು. ನಾಯಕ ವಿರಾಟ್ ಕೊಹ್ಲಿಯಿಂದ ಹಲವಾರು ವಿಚಾರಗಳನ್ನು ತಿಳಿದುಕೊಂಡಿದ್ದೇನೆ.  ಬ್ಯಾಟಿಂಗ್‌ನಲ್ಲಿ ಸಾಕಷ್ಟು ಸಲಹೆಗಳನ್ನು ಅವರಿಂದ ಪಡೆದುಕೊಂಡಿದ್ದೇನೆ. ಇನ್ನಿಂಗ್ಸ್ ಯಾವ ರೀತಿಯಲ್ಲಿ ಬೆಖೆಸಬೇಕೆಂದು ನನಗೆ ವಿರಾಟ್ ಕೊಹ್ಲಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಗಂಭೀರ್ ನನ್ನ ನೆಚ್ಚಿನ ಕ್ರಿಕೆಟಿಗರಲ್ಲಿ ಒಬ್ಬರು
ಇದೇ ವೇಳೆ ಗೌತಮ್ ಗಂಭೀರ್ ಅವರನ್ನು ತನ್ನ ನೆಚ್ಚಿನ ಆಟಗಾರರಲ್ಲಿ ಒಬ್ಬರು ಎಂದಿರುವ ಪಡಿಕ್ಕಲ್, ನನಗೆ ಗಂಭೀರ್ ಅವರ ಬ್ಯಾಟಿಂಗ್ ತುಂಬಾ ಇಷ್ಟ. ತಂಡಕ್ಕೆ ಯಾವಾಗ ಅಗತ್ಯವಿರುತ್ತದೋ ಆಗ ಗಂಭೀರ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರು. ಯಾವಾಗ ತಂಡ  ಒತ್ತಡದಲ್ಲಿರುತ್ತದೋ ಆಗ ನೀವು ಗಂಭೀರ್ ಮೇಲೆ ನಂಬಿಕೆಯಿಡಬಹುದಿತ್ತು. ಆತ ನನ್ನ ನೆಚ್ಚಿನ ಆಟಗಾರಲ್ಲಿ ಓರ್ವ ಎಂದಿದ್ದಾರೆ.

ಇತ್ತೀಚೆಗೆ ಮುಕ್ತಾಯವಾಗಿದ್ದ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ ಉದಯೋನ್ಮಖ ಆಟಗಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಅವರು ಆಡಿದ 15  ಪಂದ್ಯಗಳಿಂದ ಐದು ಅರ್ಧಶತಕಗಳೊಂದಿಗೆ 31.53 ರ ಸರಾಸರಿಯಲ್ಲಿ 473 ರನ್‌ಗಳನ್ನು ಗಳಿಸಿದ್ದರು. ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪರ ಅತಿ ಹೆಚ್ಚು ವೈಯಕ್ತಿಕ ರನ್‌ಗಳನ್ನು ಗಳಿಸಿದ ದೇವದತ್‌ ಪಡಿಕ್ಕಲ್‌, ಒಟ್ಟಾರೆ ಟೂರ್ನಿಯಲ್ಲಿ ಎಂಟನೇ ಗರಿಷ್ಠ ಸ್ಕೋರರ್‌  ಎನಿಸಿಕೊಂಡರು. ಆ ಮೂಲಕ ವಿರಾಟ್‌ ಕೊಹ್ಲಿ ವಿಶ್ವ ಕ್ರಿಕೆಟ್‌ ದಿಗ್ಗಜ ಗಮನವನ್ನು ಪಡಿಕ್ಕಲ್‌ ಸೆಳೆದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com