ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ: ಅಭ್ಯಾಸ, ಜಿಮ್ ಪ್ರಾರಂಭಿಸಿದ ಆಟಗಾರರು

ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ತಲುಪಿದ್ದು, ಮೊದಲ ಬಾರಿಗೆ ಅಭ್ಯಾಸ, ಜಿಮ್ ಪ್ರಾರಂಭಿಸಿದ್ದಾರೆ. 
ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ: ಅಭ್ಯಾಸ, ಜಿಮ್ ಪ್ರಾರಂಭಿಸಿದ ಆಟಗಾರರು
ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ: ಅಭ್ಯಾಸ, ಜಿಮ್ ಪ್ರಾರಂಭಿಸಿದ ಆಟಗಾರರು
Updated on

ಸಿಡ್ನಿ: ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ತಲುಪಿದ್ದು, ಮೊದಲ ಬಾರಿಗೆ ಅಭ್ಯಾಸ, ಜಿಮ್ ಪ್ರಾರಂಭಿಸಿದ್ದಾರೆ. 

ಸಿಡ್ನಿಯ ಒಲಂಪಿಕ್ ಪಾರ್ಕ್ ಹೊಟೆಲ್ ನಲ್ಲಿ ಟೀಂ ಇಂಡಿಯಾದ ಆಟಗಾರರು ಕ್ವಾರಂಟೈನ್ ನಲ್ಲಿದ್ದು, ದಿ ನ್ಯೂ ಸೌತ್ ವೆಲ್ಷ್ ಸರ್ಕಾರ ಕ್ವಾರಂಟೈನ್ ಅವಧಿಯಲ್ಲಿ ಅಭ್ಯಾಸ ನಡೆಸಲು ಅನುಮತಿ ನೀಡಿದೆ. 

ನ.14 ರಿಂದ ಆಟಗಾರರು ಜಿಮ್ ನಲ್ಲಿ ವರ್ಕ್ ಔಟ್ ಮಾಡುವುದು ಸೇರಿದಂತೆ ಹಲವು ಚಟುವಟಿಕೆಗಳನ್ನು ಪ್ರಾರಂಭಿಸಿ

ಬಿಸಿಸಿಐ ಆಟಗಾರರ ಅಭ್ಯಾಸ ಹಾಗೂ ವರ್ಕ್ ಔಟ್ ನ ಫೋಟೋಗಳನ್ನು ಟ್ವೀಟ್ ನಲ್ಲಿ ಹಂಚಿಕೊಂಡಿದ್ದು, ರಿಷತ್ ಪಂತ್, ಬೌಲರ್ ಟಿ.ನಟರಾಜನ್, ಚೇತೇಶ್ವರ್ ಪೂಜಾರ, ಶಾರ್ದೂಲ್ ಠಾಕೂರ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ಇದ್ದಾರೆ.
ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಸಹ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. 69 ದಿನಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಎಲ್ಲಾ ಫಾರ್ಮಾಟ್ ಗಳಲ್ಲೂ ಆಸ್ಟ್ರೇಲಿಯಾ ತಂಡದ ಜೊತೆ ಸೆಣೆಸಲಿದ್ದು, ನ.27 ರಿಂದ ಏಕದಿನ ಪಂದ್ಯ ಪ್ರಾರಂಭವಾಗಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com