ಆಸ್ಟ್ರೇಲಿಯಾ ಪ್ರವಾಸ: ಕ್ವಾರಂಟೈನ್ ಅವಧಿಯಲ್ಲಿ ಸಿಡ್ನಿಯಲ್ಲಿ ಭಾರತೀಯ ಆಟಗಾರರಿಗೆ ತರಬೇತಿ

ಐಪಿಎಲ್‌ನಿಂದ ಹಿಂದಿರುಗಿದ ಭಾರತೀಯ ಮತ್ತು ಆಸ್ಟ್ರೇಲಿಯಾದ ಆಟಗಾರರಿಗೆ ಸಿಡ್ನಿಯಲ್ಲಿ ತರಬೇತಿ ನೀಡಲು ಅವಕಾಶ ನೀಡುವಂತೆ ನ್ಯೂ ಸೌತ್ ವೇಲ್ಸ್ ಸರ್ಕಾರ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಒಪ್ಪಂದ ಮಾಡಿಕೊಂಡಿವೆ.
ಟೀಂ ಇಂಡಿಯಾ
ಟೀಂ ಇಂಡಿಯಾ
Updated on

ಸಿಡ್ನಿ: ಐಪಿಎಲ್‌ನಿಂದ ಹಿಂದಿರುಗಿದ ಭಾರತೀಯ ಮತ್ತು ಆಸ್ಟ್ರೇಲಿಯಾದ ಆಟಗಾರರಿಗೆ ಸಿಡ್ನಿಯಲ್ಲಿ ತರಬೇತಿ ನೀಡಲು ಅವಕಾಶ ನೀಡುವಂತೆ ನ್ಯೂ ಸೌತ್ ವೇಲ್ಸ್ ಸರ್ಕಾರ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಒಪ್ಪಂದ ಮಾಡಿಕೊಂಡಿವೆ.

ಭಾರತೀಯ ತಂಡವು ಆರಂಭದಲ್ಲಿ ಬ್ರಿಸ್ಬೇನ್‌ಗೆ ಇಳಿಯಬೇಕಿತ್ತು. ಆದರೆ ಕ್ವೀನ್ಸ್‌ಲ್ಯಾಂಡ್ ರಾಜ್ಯ ಆರೋಗ್ಯ ಅಧಿಕಾರಿಗಳು ತಮ್ಮ 14 ದಿನಗಳ ಕ್ಯಾರೆಂಟೈನ್ ನಿಯಮವನ್ನು ಸಡಿಲಿಸಲಿಲ್ಲ. ಆ ಅವಧಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಸಹ ಆಟಗಾರರಿಗೆ ತರಬೇತಿ ನೀಡಲು ಅವಕಾಶ ನೀಡಲಾಗಿದೆ. 

ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ ಮೂರು ಟಿ20, ಮೂರು ಏಕದಿನ ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ.

ಮೊದಲ ಎರಡು ಏಕದಿನ ಪಂದ್ಯಗಳು ನವೆಂಬರ್ 27 ಮತ್ತು 29ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದರೆ ಕ್ಯಾನ್‌ಬೆರಾದ ಮನುಕಾ ಓವಲ್‌ನಲ್ಲಿ ಸರಣಿಯ ಫೈನಲ್ ಪಂದ್ಯ ನಡೆಯಲಿದೆ.

ಪಿಂಕ್ ಬಾಲ್ ಟೆಸ್ಟ್ ಡಿಸೆಂಬರ್ 17ರಿಂದ 21 ರವರೆಗೆ ಅಡಿಲೇಡ್‌ನಲ್ಲಿ ಹೊನಲು ಬೆಳಕಿನಲ್ಲಿ ನಡೆಯಲಿದೆ.

ಕೋವಿಡ್ ಹಿನ್ನಲೆಯಲ್ಲಿ ಮೆಲ್ಬೋರ್ನ್‌ನಲ್ಲಿನ ಎಂಸಿಜಿಯಲ್ಲಿ ಪಂದ್ಯ ಆಯೋಜಿಸಲು ಅಧಿಕಾರಿಗಳು ಅವಕಾಶ ನೀಡದಿದ್ದರೆ ಡಿಸೆಂಬರ್ 26ರಿಂದ ನಡೆಯಲಿರುವ ಬಾಕ್ಸಿಂಗ್ ಡೇ ಪಂದ್ಯವನ್ನು ಅಡಿಲೇಡ್‌ನಲ್ಲೇ ನಡೆಸಬಹುದು.

ಕ್ರಿಕೆಟ್ ಆಸ್ಟ್ರೇಲಿಯಾ ಬಿಸಿಸಿಐನಿಂದ ಅನುಮೋದನೆ ಪಡೆದ ನಂತರ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com