ಬೆಂಗಳೂರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ: ಆರೋನ್ ಫಿಂಚ್‌

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಇತ್ತೀಚೆಗಷ್ಟೇ ಪ್ರತಿನಿಧಿಸಿದ್ದ ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ನಾಯಕ ಆರೋನ್‌ ಫಿಂಚ್‌, ಸಿಲಿಕಾನ್‌ ಸಿಟಿ ಬೆಂಗಳೂರು ಜತೆ ವಿಶೇಷ ಸಂಬಂಧ ಹೊಂದಿರುವುದಾಗಿ ತಿಳಿಸಿದ್ದಾರೆ.
ಆರೋನ್‌ ಫಿಂಚ್‌
ಆರೋನ್‌ ಫಿಂಚ್‌
Updated on

ನವದೆಹಲಿ: ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಇತ್ತೀಚೆಗಷ್ಟೇ ಪ್ರತಿನಿಧಿಸಿದ್ದ ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ನಾಯಕ ಆರೋನ್‌ ಫಿಂಚ್‌, ಸಿಲಿಕಾನ್‌ ಸಿಟಿ ಬೆಂಗಳೂರು ಜತೆ ವಿಶೇಷ ಸಂಬಂಧ ಹೊಂದಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ತಾವು 'ಅದ್ಭುತ ಫ್ರಾಂಚೈಸಿ'ಯ ಭಾಗವಾಗಿರುವುದು ಅಮೋಘವಾಗಿದ್ದು, ಇದಕ್ಕೆ ಕೃತಜ್ಞರಾಗಿರುವುದಾಗಿ ಹೇಳಿದ್ದಾರೆ.

"ಪ್ರತಿ ಫ್ರಾಂಚೈಸಿಯೂ ತಮ್ಮದೇ ಆದ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿವೆ. ಆದರೆ, ಹರಾಜಿನ ಸಮಯದಿಂದ ಇಲ್ಲಿಯವರೆಗೂ ಆರ್‌ಸಿಬಿ ಜತೆಗಿನ ಸಂವಹನ ಎಲ್ಲದರಲ್ಲೂ ಅದ್ಭುತವಾಗಿದೆ," ಎಂದು ಆರೋನ್‌ ಫಿಂಚ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

"ಅವರು(ಆರ್‌ಸಿಬಿ) ಎಲ್ಲರನ್ನೂ ಅಪ್‌ಡೇಟ್‌ ಮಾಡಿದ್ದಾರೆ, ತಂಡದಲ್ಲಿರುವ ಸಂಸ್ಕೃತಿ ಅದ್ಭುತವಾಗಿದೆ. ನಾವು ಕೆಲವು ತಂಡ ನಿರ್ಮಿಸುವ ವ್ಯಾಯಾಮಗಳನ್ನು ಮಾಡಿದ್ದೇವೆ. ಬೆಂಗಳೂರು ಫ್ರಾಂಚೈಸಿಯ ಭಾಗವಾಗಿರುವುದು ಅದ್ಭುತ ಮತ್ತು ಈ ಒಂದು ಅವಕಾಶಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ" ಎಂದಿದ್ದಾರೆ.

ಆರ್‌ಸಿಬಿ ಹೆಡ್‌ ಕೋಚ್‌ ಸೈಮನ್‌ ಕ್ಯಾಟಿಚ್‌ ಹಾಗೂ ಡೈರೆಕ್ಟರ್‌ ಮೈಕ್‌ ಹೆಸನ್‌ ಅವರನ್ನುಇದೇ ವೇಳೆ ಆರೋನ್‌ ಫಿಂಚ್‌ ಕೊಂಡಾಡಿದರು. "ಇವರಿಬ್ಬರೂ(ಸೈಮನ್ ಕ್ಯಾಟಿಚ್‌ ಹಾಗೂ ಮೈಕ್‌ ಹೆಸನ್) ಶಾಂತ ಸ್ವಭಾವದವರು ಹಾಗೂ ಎಲ್ಲಾ ಸನ್ನಿವೇಶಗಳ ಬಗ್ಗೆ ಸ್ಪಷ್ಟವಾಗಿ ಯೋಚಿಸುವುದು ಅವರ ದೊಡ್ಡ ಶಕ್ತಿ. ನಿಜವಾಗಿಯೂ ಮುಖ್ಯವಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಭಾವನೆಗಳನ್ನು ಉತ್ತಮಗೊಳಿಸಲು ಅವರು ಬಿಡುವುದಿಲ್ಲ. ಪ್ರತಿಯೊಬ್ಬರೂ ಅವರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಾರೆ,"ಎಂದು ಆಸ್ಟ್ರೇಲಿಯಾ ಕ್ರಿಕೆಟಿಗ ತಿಳಿಸಿದರು.

ಆರ್‌ಸಿಬಿ ಸಹ ಆಟಗಾರ ಜಾಶ್‌ ಫಿಲಿಪ್‌ ಅವರನ್ನು ಬೆಂಬಲಿಸಿದ ಫಿಂಚ್, 23ರ ಪ್ರಾಯದ ಕ್ರಿಕೆಟಿಗ ಅಪಾರ ಪ್ರತಿಭೆ ಹಾಗೂ ಕೌಶಲವನ್ನು ಹೊಂದಿದ್ದಾರೆ ಎಂದು ಹೇಳಿದರು.

"ಜಾಶ್‌ ಫಿಲಿಪ್‌ ಅವರಲ್ಲಿ ಅಪಾರ ಪ್ರತಿಭೆ ಇದೆ ಹಾಗೂ ಬೆಂಗಳೂರು ಫ್ರಾಂಚೈಸಿಯ ಪರ ಆಡುವಾಗ ಹಲವು ಪಾತ್ರಗಳನ್ನು ಅವರು ನಿರ್ವಹಿಸಲಿದ್ದಾರೆ. ಅವರಲ್ಲಿ ಸಾಕಷ್ಟು ಪ್ರತಿಭೆ ಹಾಗೂ ಕೌಶಲವಿದೆ. ಅವರಿಗೆ ಒಂದು ಪಾತ್ರವನ್ನು ಮಾಡಲು ಸಾಕಷ್ಟು ಸಮಯ ನೀಡಿದರೆ, ಅದನ್ನು ಸುಂದರವಾಗಿ ಅಭಿವೃದ್ಧಿಪಡಿಸಲು ಪ್ರಾರಂಭಿಸುತ್ತಾರೆ," ಎಂದು ತಮ್ಮ ದೇಶದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ಗೆ ಬೆಂಬಲ ಸೂಚಿಸಿದರು.

ಬೆಂಗಳೂರಿನ ಮೇಲೆ ಇರುವ ವಿಶೇಷ ಪ್ರೀತಿಯನ್ನು ಬಹಿರಂಗ ಪಡಿಸಿದ ಅವರು, ತಮ್ಮ ಹೃದಯದಲ್ಲಿ ಈ ನಗರಕ್ಕೆ ವಿಶೇಷ ಸ್ಥಾನ ನೀಡಿರುವ ಬಗ್ಗೆ ಅವರು ಹೇಳಿದರು. "ಬೆಂಗಳೂರಿನಲ್ಲಿ ಸಮಯ ಕಳೆಯಲು ತುಂಬಾ ಇಷ್ಟಪಡುತ್ತೇನೆ, ಇದು ನನ್ನ ನೆಚ್ಚಿನ ನಗರ. ನನ್ನ ಪತ್ನಿಗೆ ಪ್ರಪೋಸ್‌ ಮಾಡಿದ್ದು ಬೆಂಗಳೂರಿನಲ್ಲಿ, ಆದ್ದರಿಂದ ಈ ನಗರಕ್ಕೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ನೀಡಿದ್ದೇನೆ. ಆದರೆ, ಬೆಂಗಳೂರಿನಲ್ಲಿ ಆಡುತ್ತಿಲ್ಲವಲ್ಲ ಎಂಬ ಬಗ್ಗೆ ನನಗೆ ತುಂಬಾ ಬೇಸರವಿದೆ. ಆದಷ್ಟು ಬೇಗ ನಾವು ಮರಳುತ್ತೇವೆ ಎಂಬ ಬಗ್ಗೆ ನಂಬಿಕೆ ಇದೆ, ಎಂದು ಆರೋನ್‌ ಫಿಂಚ್‌ ತಿಳಿಸಿದರು.

ವಿರಾಟ್‌ ಕೊಹ್ಲಿ ನಾಯಕತ್ವದ ಆರ್‌ಸಿಬಿ, ಸೆ,24(ಇಂದು) ರಂದು ಕಿಂಗ್ಸ್ ಇಲೆವೆನ್‌ ಪಂಜಾಬ್‌ ವಿರುದ್ಧ ಎರಡನೇ ಪಂದ್ಯದಲ್ಲಿ ಸೆಣಸಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com