ಮಾಂಸಾಹಾರ ತ್ಯಜಿಸಿ ಸಂಪೂರ್ಣ ಸಸ್ಯಾಹಾರಿಯಾಗಿದ್ದು ಏಕೆ? ಕಾರಣ ತಿಳಿಸಿದ ವಿರಾಟ್ ಕೊಹ್ಲಿ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಂಪೂರ್ಣ ಸಸ್ಯಾಹಾರಿಯಾಗಿದ್ದು ಗೊತ್ತೇ ಇದೆ. ಮಾಂಸಪ್ರಿಯರಾಗಿದ್ದ ಕೊಹ್ಲಿ ಸಂಪೂರ್ಣ ಸಸ್ಯಾಹಾರಿಯಾಗಲು ಕಾರಣವೇನೆಂದು ಹೇಳಿಕೊಂಡಿದ್ದಾರೆ.
ಮಾಂಸಾಹಾರ ತ್ಯಜಿಸಿ ಸಂಪೂರ್ಣ ಸಸ್ಯಾಹಾರಿಯಾಗಿದ್ದು ಏಕೆ? ಕಾರಣ ತಿಳಿಸಿದ ವಿರಾಟ್ ಕೊಹ್ಲಿ

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಂಪೂರ್ಣ ಸಸ್ಯಾಹಾರಿಯಾಗಿದ್ದು ಗೊತ್ತೇ ಇದೆ. ಮಾಂಸಪ್ರಿಯರಾಗಿದ್ದ ಕೊಹ್ಲಿ ಸಂಪೂರ್ಣ ಸಸ್ಯಾಹಾರಿಯಾಗಲು ಕಾರಣವೇನೆಂದು ಹೇಳಿಕೊಂಡಿದ್ದಾರೆ.

ಕತ್ತಿನ ಕೆಳಗೆ ಬೆನ್ನುಮೂಳೆ ಸಮಸ್ಯೆಯಿಂದಾಗಿ ಮಾಂಸ ಸೇವಿಸುವುದನ್ನು ತ್ಯಜಿಸಿ ಸಂಪೂರ್ಣ ಸಸ್ಯಾಹಾರಿಯಾದೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ಇಂಗ್ಲೆಂಡಿನ ಬ್ಯಾಟ್ಸ್ ಮೆನ್ ಕೆವಿನ್ ಪೀಟರ್ಸನ್ ಅವರ ಜೊತೆ ಇನ್ಸ್ಟಾಗ್ರಾಂ ಲೈವ್ ವಿಡಿಯೊ ಸೆಷನ್ ನಲ್ಲಿ ಹೇಳಿಕೊಂಡಿದ್ದಾರೆ.

 ಅದು ಇಂಗ್ಲೆಂಡ್ ಟೆಸ್ಟ್ ಸರಣಿ ಸಮಯ, 2018ರಲ್ಲಿ ದಕ್ಷಿಣ ಆಫ್ರಿಕಾಗೆ ಹೋದಾಗ ನನಗೆ ಬೆನ್ನುಮೂಳೆ ಸಮಸ್ಯೆ ಕಾಣಿಸಿಕೊಂಡಿತು. ನನ್ನ ಬಲಗೈಯ ಕಿರು ಬೆರಳಿನ ತನಕ ನರ ಸಂಕುಚಿತಗೊಳಿಸಿತು. ನರಗಳು ಜುಮ್ಮೆನ್ನುತ್ತಿತ್ತು. ಆ ದಿನ ರಾತ್ರಿ ಮಲಗಲು ಸಾಧ್ಯವಾಗದೆ ತೀವ್ರವಾದ ನೋವು ಕಾಡಿತು ಎಂದು ನೆನಪಿಸಿಕೊಂಡರು.

ನಂತರ ವೈದ್ಯರಲ್ಲಿ ಪರೀಕ್ಷೆ ಮಾಡಿಸಿದಾಗ ಹೊಟ್ಟೆಯಲ್ಲಿ ತೀವ್ರ ಆಸಿಡಿಟಿ, ಯೂರಿಕ್ ಆಮ್ಲ ಸಮಸ್ಯೆ ಇದೆ, ಹೀಗಾಗಿ ಮೈಕೈಯೆಲ್ಲಾ ನೋಯುತ್ತಿದೆ ಎಂದು ಗೊತ್ತಾಯಿತು. ಕ್ಯಾಲ್ಸಿಯಂ, ಮೆಗ್ನೇಸಿಯಂ ಮಾತ್ರೆ ತೆಗೆದುಕೊಳ್ಳುತ್ತಿದ್ದರೂ ನನ್ನ ದೇಹಕ್ಕೆ ಸಾಕಾಗುತ್ತಿರಲಿಲ್ಲ. ನೋವು ಕಡಿಮೆಯಾಗಲಿಲ್ಲ. ಮೂಳೆ ದುರ್ಬಲವಾಗತೊಡಗಿತು. ಹೀಗಾಗಿ ಇಂಗ್ಲೆಂಡ್ ಪ್ರವಾಸದ ಮಧ್ಯೆ ಮಾಂಸ ತಿನ್ನುವುದನ್ನು ಬಿಟ್ಟೆನು. ಯೂರಿಕ್ ಆಮ್ಲ, ಆಸಿಡಿಟಿ ಸಮಸ್ಯೆ ನಿಯಂತ್ರಣಕ್ಕೆ ಬಂದು ದೇಹ ಹಗುರವಾದಂತೆ ಅನಿಸಿತು. ನಿರಾಳತೆ ಸಿಕ್ಕಿತು.

ಆಗ ನನಗೆ ಅನಿಸಿದ್ದು, ಮಾಂಸ ತಿನ್ನುವುದನ್ನು ಬಿಡಬೇಕೆಂದು, ಅಲ್ಲಿಂದ ಸುಮಾರು ಎರಡು ವರ್ಷವಾಗುತ್ತಾ ಬಂದಿದೆ. ಮಾಂಸ ಇಂದಿನವರೆಗೆ ಮುಟ್ಟಿಲ್ಲ, ಇದು ನಾನು ತೆಗೆದುಕೊಂಡ ಉತ್ತಮ ನಿರ್ಧಾರ ಎಂದು ಅನಿಸುತ್ತಿದೆ ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com