ಐಪಿಎಲ್‌ನಲ್ಲಿ ಪ್ರಶಸ್ತಿ ಬರ ಕೊನೆಗೊಳಿಸುತ್ತೇವೆಂದ ಕೊಹ್ಲಿ, ಧೋನಿಯನ್ನು ಬೆಂಬಲಿಸುವುದು ಬಿಡಿ ಎಂದ ಪೀಟರ್ಸನ್

ಜಾಗತಿಕ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿರುವ ಕೊರೊನಾ ವೈರಸ್ ಕೋವಿಡ್ -19 ಪರಿಣಾಮ ಐಪಿಎಲ್ ಮುಂದೂಡಲ್ಪಟ್ಟಿದೆ. ಟೂರ್ನಿ ಮಾರ್ಚ್ 29 ರಂದು ನಡೆಯಬೇಕಿತ್ತು.
ಕೊಹ್ಲಿ-ಪೀಟರ್ಸನ್
ಕೊಹ್ಲಿ-ಪೀಟರ್ಸನ್

ನವದೆಹಲಿ: ಜಾಗತಿಕ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿರುವ ಕೊರೊನಾ ವೈರಸ್ ಕೋವಿಡ್ -19 ಪರಿಣಾಮ ಐಪಿಎಲ್ ಮುಂದೂಡಲ್ಪಟ್ಟಿದೆ. ಟೂರ್ನಿ ಮಾರ್ಚ್ 29 ರಂದು ನಡೆಯಬೇಕಿತ್ತು.

ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಈ ಋತುವನ್ನು ಜುಲೈ-ಆಗಸ್ಟ್‌ನಲ್ಲಿ ನಡೆಸುವ ನಿರೀಕ್ಷೆಯಿದೆ. “ಐಪಿಎಲ್ ಜುಲೈ-ಆಗಸ್ಟ್‌ನಲ್ಲಿ ನಡೆಸಬಹುದು. ಐಪಿಎಲ್ ನಡೆಯಬೇಕು ಮತ್ತು ಅದು ಕ್ರಿಕೆಟ್ ಋತುವನ್ನು ಪ್ರಾರಂಭಿಸುತ್ತದೆ ಎಂದು ನಾನು ನಂಬುತ್ತೇನೆ. ವಿಶ್ವದ ಪ್ರತಿಯೊಬ್ಬ ಕ್ರಿಕೆಟಿಗ ಐಪಿಎಲ್‌ನಲ್ಲಿ ಆಡಲು ಹತಾಶನಾಗಿರುತ್ತಾನೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದರು.
ಮೂರು ಅಥವಾ ನಾಲ್ಕು ವಾರಗಳ ಪಂದ್ಯಾವಳಿಗಳಲ್ಲಿ ಪ್ರೇಕ್ಷಕರು ಇಲ್ಲದ ಮೂರು ಸ್ಥಳಗಳಲ್ಲಿ ಇದನ್ನು ನಡೆಸಬಹುದು ಎಂದು ಪೀಟರ್ಸನ್ ಸಲಹೆ ನೀಡಿದರು.

ಐಪಿಎಲ್ ಪ್ರಶಸ್ತಿಯನ್ನು ತಂಡವು ಗೆಲ್ಲಬೇಕಾದರೆ ತಂಡ ಸಂಘಟಿತ ಆಟವನ್ನು ನಡೆಸಬೇಕಿದೆ” ಎಂದು ಭಾರತ ಮತ್ತು ಐಪಿಎಲ್ ತಂಡದ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. ಮಾಜಿ ಇಂಗ್ಲೆಂಡ್ ಮತ್ತು ರಾಯಲ್ ಚಾಲೆಂಜರ್ಸ್ ಬ್ಯಾಟ್ಸ್ಮನ್ ಕೆವಿನ್ ಪೀಟರ್ಸನ್ ಅವರೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ಚಾಟ್ ಮಾಡುವಾಗ ವಿರಾಟ್ ಈ ವಿಷಯ ತಿಳಿಸಿದ್ದಾರೆ.

ನೀವು ಒಂದು ಗುರಿಯನ್ನು ಸಾಧಿಸಲು ಪೂರ್ಣ ಬಲದಿಂದ ಕಣಕ್ಕೆ ಇಳಿಯಬೇಕಾಗುತ್ತದೆ. ಈ ಕಾರಣದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಪ್ರಶಸ್ತಿಯನ್ನು ಗೆಲ್ಲಲು ನಮ್ಮ ಮೇಲೆ ಸಾಕಷ್ಟು ಒತ್ತಡಗಳಿವೆ. ಪ್ರತಿ ಬಾರಿಯೂ ನಾವು ಗೆಲ್ಲುತ್ತೇವೆ ಎಂದು ನಾವು ಭಾವಿಸುತ್ತೇವೆ, ಆದರೆ ಪ್ರತಿ ಬಾರಿಯೂ ನಾವು ನಿರಾಶೆಗೊಳ್ಳಬೇಕಾಗುತ್ತೇವೆ. ನಾವು ಆಟದ ಬಗ್ಗೆ ನಮ್ಮ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ಮರಳಿ ಪಡೆಯಬೇಕು ಎಂದು ನಾನು ಭಾವಿಸುತ್ತೇನೆ ಎಂದು ವಿರಾಟ್ ತಿಳಿಸಿದ್ದಾರೆ.

ವಿಶೇಷವೆಂದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರು ಬಾರಿ ಐಪಿಎಲ್ ಫೈನಲ್ ತಲುಪಿದೆ ಆದರೆ ಪ್ರಶಸ್ತಿಯನ್ನು ಪಡೆದಿಲ್ಲ. ಆರ್ ಸಿಬಿ, 2009 ರಲ್ಲಿ ಡೆಕ್ಕನ್ ಚಾರ್ಜರ್ಸ್, 2011 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು 2016 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲುಕಂಡಿತ್ತು.

ತಂಡದಲ್ಲಿ ಚುಟುಕು ಕ್ರಿಕೆಟ್ ನ ಸ್ಟಾರ್ ಬ್ಯಾಟ್ಸ್ ಮನ್ ಗಳು ಇದ್ದಾರೆ. ಹೀಗಾಗಿ ಉತ್ತಮ ಪ್ರದರ್ಶನ ನೀಡಲು ತಂಡದ ಮೇಲೆ ಯಾವಾಗಲೂ ಒತ್ತಡವಿರುತ್ತದೆ. ಅನೇಕ ದೊಡ್ಡ ಆಟಗಾರರು ತಂಡದಲ್ಲಿರುವಾಗ, ಎಲ್ಲರ ಗಮನವು ತಂಡದ ಸಾಧನೆಯ ಮೇಲೆ ಇರುತ್ತದೆ. ನಾನು, ಎಬಿಡಿ ವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಎಲ್ಲರೂ ಇತ್ತೀಚೆಗೆ ತಂಡಕ್ಕಾಗಿ ಆಡಿದ್ದೇವೆ, ನಾವು ಯಾವಾಗಲೂ ನಮ್ಮ ಸಾಧನೆಯನ್ನು ಸುಧಾರಿಸುವತ್ತ ಗಮನಹರಿಸಿದ್ದೇವೆ. ನಾವು ಐಪಿಎಲ್‌ನಲ್ಲಿ ಮೂರು ಬಾರಿ ಫೈನಲ್‌ಗೆ ತಲುಪಿದ್ದೇವೆ, ಆದರೆ ನೀವು ಪ್ರಶಸ್ತಿಯನ್ನು ಗೆಲ್ಲದೆ ಇರುವುದು ನಿರಾಸೆ ತಂದಿದೆ” ಎಂದಿದ್ದಾರೆ.

ಇದೇ ವೇಳೆ ವಿಕೆಟ್ ಕೀಪರ್ ಆಗಿದ್ದರೂ ಎಂಎಸ್ ಧೋನಿ ಟೆಸ್ಟ್ ಪಂದ್ಯವೊಂದರಲ್ಲಿ ಬೌಲಿಂಗ್ ಮಾಡಿ ಕೇವಿನ್ ಪೀಟರ್ ರನ್ನು ಔಟ್ ಮಾಡಿದ್ದರು. ಹೀಗಾಗಿ ತಮಾಷೆಗಾಗಿ ವಿರಾಟ್ ಕೊಹ್ಲಿಗೆ ನೀವು ಎಂಎಸ್ ಧೋನಿಯನ್ನು ಬೆಂಬಲಿಸುವುದನ್ನು ಬಿಡಿ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com