ದುರುದ್ದೇಶದಿಂದಲೇ ಎಂಎಸ್ ಧೋನಿ ನನ್ನನ್ನು ತುಳಿದ್ರು, ರೈನಾ ಧೋನಿಗೆ ಹತ್ತಿರವಾಗಿದ್ದೇಗೆ? ಯುವಿ ಹೇಳಿದ್ದೇನು?

2007ರ ವಿಶ್ವ ಟಿ20 ಮತ್ತು 2011ರ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರನ್ನು ಮಾಜಿ ನಾಯಕ ಎಂಎಸ್ ಧೋನಿ ಬೇಕು ಅಂತಲೆ ತುಳಿದ್ರಾ ಈ ಬಗ್ಗೆ ಯುವಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. 
ಯುವರಾಜ್-ರೈನಾ-ಧೋನಿ
ಯುವರಾಜ್-ರೈನಾ-ಧೋನಿ

ನವದೆಹಲಿ: 2007ರ ವಿಶ್ವ ಟಿ20 ಮತ್ತು 2011ರ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರನ್ನು ಮಾಜಿ ನಾಯಕ ಎಂಎಸ್ ಧೋನಿ ಬೇಕು ಅಂತಲೆ ತುಳಿದ್ರಾ ಈ ಬಗ್ಗೆ ಯುವಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. 

ಸಂದರ್ಶವೊಂದರಲ್ಲಿ ಯುವರಾಜ್ ಸಿಂಗ್ ಹಳೆಯ ಘಟನೆಗಳನ್ನು ಸ್ಮರಿಸಿದ್ದಾರೆ. ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಸಂಭವಿಸಿದ ಘಟನೆಗಳ ಬಗ್ಗೆ ತಿಳಿಸಿದ್ದಾರೆ. ತಾನು ಉತ್ತಮ ಪ್ರದರ್ಶನ ನೀಡುತ್ತಿದ್ದರಿಂದ ನಾಯಕರಾಗಿದ್ದ ಎಂಎಸ್ ಧೋನಿಗೆ ನನ್ನನ್ನು ಆಯ್ಕೆ ಮಾಡುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ. ನನ್ನನ್ನು ಕಡೆಗಣಿಸುವ ಸಲುವಾಗಿಯೇ ಸುರೇಶ್ ರೈನಾ ಅವರಿಗೆ ಹೆಚ್ಚಿನ ಮಾನ್ಯತೆ ನೀಡಿದ್ದರು ಎಂದು ಹೇಳಿದ್ದಾರೆ. 

ಸುರೇಶ್ ರೈನಾಗೆ ದೊಡ್ಡ ಮಟ್ಟದ ಬೆಂಬಲವಿತ್ತು. ಅದಕ್ಕೆ ಕಾರಣ ಧೋನಿ ರೈನಾರಿಗೆ ನೀಡುತ್ತಿದ್ದ ಬೆಂಬಲ. ಪ್ರತಿಯೊಬ್ಬ ನಾಯಕನಿಗೂ ನೆಚ್ಚಿನ ಆಟಗಾರನಿರುತ್ತಾನೆ. ಅದೇ ರೀತಿ ಆ ಸಮಯದಲ್ಲಿ ಧೋನಿಗೆ ರೈನಾ ಆಪ್ತನಾಗಿದ್ದಾ ಎಂದು ಹೇಳಿದ್ದಾರೆ.

ನಾನು ಜೆರ್ಸಿಯನ್ನು ತೆಗೆದು ಸಂಭ್ರಮಿಸಿದ್ದೆ: ಯುವರಾಜ್ ಸಿಂಗ್
ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್, 2002 ರಲ್ಲಿ ಇಂಗ್ಲೆಂಡ್ ವಿರುದ್ಧದ ನ್ಯಾಟ್‌ವೆಸ್ಟ್ ಟ್ರೋಫಿ ಫೈನಲ್‌ನಲ್ಲಿ ಜಯಗಳಿಸಿದ ನಂತರ, ಆಗಿನ ನಾಯಕ ಸೌರಭ್ ಗಂಗೂಲಿ ಅವರೊಂದಿಗೆ ತಮ್ಮ ಜರ್ಸಿಯನ್ನು ಸಹ ತೆಗೆದಿದ್ದರು ಆದರೆ ಆ ಸಮಯದಲ್ಲಿ ಯಾರೂ ಅದನ್ನು ಗಮನಿಸಲಿಲ್ಲ ಎಂದರು. 

ಈ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಭಾರತಕ್ಕೆ 326 ರನ್ ಗಳಿಸುವ ಪ್ರಬಲ ಗುರಿಯನ್ನು ನೀಡಿತು. ಭಾರತ ಎರಡು ವಿಕೆಟ್ ಬಾಕಿ ಉಳಿದಾಗಲೇ, ಜಯ ಸಾಧಿಸಿತು. ನಾಯಕ ಗಂಗೂಲಿ ಏಣಿಗಳ ಬಾಲ್ಕನಿಯಲ್ಲಿ ಜರ್ಸಿಯನ್ನು ತೆಗೆದು ಸಂಭ್ರಮ ಆಚರಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com