ಬಿಸಿಸಿಐ ಕೋವಿಡ್-19 ಟಾಸ್ಕ್ ಪೋರ್ಸ್ ಗೆ ರಾಹುಲ್ ದ್ರಾವಿಡ್

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೋವಿಡ್ -19 ಒಳಗೊಂಡ ಕಾರ್ಯಪಡೆ ರಚಿಸಲಿದ್ದು, ಇದರಲ್ಲಿ ಮಾಜಿ ನಾಯಕ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ರಾಹುಲ್ ದ್ರಾವಿಡ್ ಕೂಡ ಸೇರಿದ್ದಾರೆ.
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೋವಿಡ್ -19 ಒಳಗೊಂಡ ಕಾರ್ಯಪಡೆ ರಚಿಸಲಿದ್ದು, ಇದರಲ್ಲಿ ಮಾಜಿ ನಾಯಕ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ರಾಹುಲ್ ದ್ರಾವಿಡ್ ಕೂಡ ಸೇರಿದ್ದಾರೆ.

ರಾಜ್ಯಗಳಿಗೆ ಕಳುಹಿಸಲಾದ (ಎಸ್ ಒಪಿ) ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ನಲ್ಲಿ ಬಿಸಿಸಿಐ ರಾಜ್ಯ ಸಂಘಗಳಿಗೆ ಮಾಹಿತಿ ನೀಡಿದ್ದು  ಎನ್‌ಸಿಎ ಮುಖ್ಯಸ್ಥರಾಗಿರುವ ದ್ರಾವಿಡ್ ಈ ಕೋವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷರಾಗುವ ಸಾಧ್ಯತೆ ಇದೇ ಎಂದು ಮೂಲಗಳು ತಿಳಿಸಿವೆ.

ಸ್ಟ್ಯಾಂಡರ್ಸ್ ಆಪರೇಟಿಂಗ್ ಪ್ರೊಸೀಜರ್ ಪ್ರಕಾರ, ಕ್ರಿಕೆಟಿಗರು ತಮ್ಮ ತಮ್ಮ ಕೇಂದ್ರಗಳಲ್ಲಿ ಅಭ್ಯಾಸ ಪುನರಾರಂಭಿಸುವ ಮುನ್ನ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಬೇಕಿದೆ. ಸ್ಟ್ಯಾಂಡರ್ಸ್ ಆಪರೇಟಿಂಗ್ ಪ್ರೊಸೀಜರ್‌ನಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮತ್ತು ಆರೋಗ್ಯ ಸಮಸ್ಯೆ ಇರುವವರಿಗೆ ತಡೆ ವಿಧಿಸಲಾಗಿದೆ.

ಬೆಂಗಳೂರಿನ ಎನ್‌ಸಿಎಯಲ್ಲಿ ಅಭ್ಯಾಸ ಪುನರಾರಂಭಗೊಂಡಾಗ ಕೋವಿಡ್-19 ಟಾಸ್ಕ್ ಫೋರ್ಸ್‌ನಲ್ಲಿ ರಾಹುಲ್ ದ್ರಾವಿಡ್ ಜೊತೆ ವೈದ್ಯಕೀಯ ಅಧಿಕಾರಿಗಳು, ನೈರ್ಮಲ್ಯ ಅಧಿಕಾರಿ, ಬಿಸಿಸಿಐ ಅಧಿಕಾರಿಗಳು ಇರಲಿದ್ದಾರೆ.

ಆಟಗಾರರೊಂದಿಗೆ ಸ್ಪಷ್ಟ ಮತ್ತು ನಿಯಮಿತವ ಸಂವಹನ ಮಾಡುವುದು, ಅಪಾಯವನ್ನು ನಿರ್ವಹಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ವಿವರಿಸುವುದು ಮತ್ತು ಕೊರೋನಾ ಪ್ರಕರಣಗಳ ಮತ್ತು ನಿರ್ವಹಣೆ ಸಂಬಂಧ ಉನ್ನತ ಅಧಿಕಾರಿಗಳಿಗೆ ಸಲಹೆ ನೀಡಬೇಕಾಗುತ್ತದೆ.

ಆಯಾ ರಾಜ್ಯ ಕೇಂದ್ರಗಳಲ್ಲಿನ ಆಟಗಾರರಂತೆ, ಎನ್‌ಸಿಎಯ ಕ್ರಿಕೆಟಿಗರು ಸಹ ತರಬೇತಿಯನ್ನು ಪುನರಾರಂಭಿಸುವ ಮೊದಲು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com