ಐದು ತಿಂಗಳ ವಿರಾಮ ನಂತರ ನೆಟ್ ಸೆಷನ್ ನಲ್ಲಿ ಭಾಗವಹಿಸುವಾಗ ಸ್ವಲ್ಪ ಭಯವಾಯಿತು: ವಿರಾಟ್ ಕೊಹ್ಲಿ

ಕೊರೋನಾ ಲಾಕ್ ಡೌನ್ ನಂತರ ಮೈದಾನದಲ್ಲಿ ಆಡಲು ಉತ್ಸುಕನಾಗಿರುವುದಾಗಿ ಭಾರತ ಕ್ರಿಕೆಟ್ ತಂಡದ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ದುಬೈ: ಕೊರೋನಾ ಲಾಕ್ ಡೌನ್ ನಂತರ ಮೈದಾನದಲ್ಲಿ ಆಡಲು ಉತ್ಸುಕನಾಗಿರುವುದಾಗಿ ಭಾರತ ಕ್ರಿಕೆಟ್ ತಂಡದ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಇಷ್ಟು ದಿನಗಳ ನಂತರ ಐಪಿಎಲ್ ಸರಣಿಗಿಂತ ಮುನ್ನ ಈಗ ಆಡುತ್ತಿರುವ ತಮ್ಮ ತರಬೇತಿ ಅವಧಿ ನಿರೀಕ್ಷೆಗಿಂತ ಚೆನ್ನಾಗಿ ಸಾಗಿದೆ ಎಂದು ಕೂಡ ಹೇಳಿದ್ದಾರೆ.

ನೆಟ್ ಸೆಷನ್ ನಲ್ಲಿ ದಕ್ಷಿಣ ಆಫ್ರಿಕಾದ ಜೀವಂತ ದಂತಕಥೆ ದಲೆ ಸ್ಟೆಯ್ನ್ ಮತ್ತು ಆರ್ ಸಿಬಿ ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಭಾಗವಹಿಸಿದ್ದರು.

ಪ್ರಾಮಾಣಿಕವಾಗಿ ಹೇಳಬೇಕೆಂದರೆ ನೆಟ್ ಸೆಷನ್ ನಿರೀಕ್ಷೆಗಿಂತ ಚೆನ್ನಾಗಿ ಸಾಗಿದೆ. ನನಗೆ ಭಯವಿತ್ತು. 5 ತಿಂಗಳು ಬ್ಯಾಟ್ ಹಿಡಿದಿರಲಿಲ್ಲ. ಇಷ್ಟು ದಿನಗಳ ನಂತರ ಆಡಿರುವುದರಲ್ಲಿ ನಿರೀಕ್ಷೆಗಿಂತ ಚೆನ್ನಾಗಿ ಬಂದಿದೆ ಎಂದು ಕೊಹ್ಲಿ ಹೇಳಿದ್ದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ವೆಬ್ ಸೈಟ್ ವರದಿ ಮಾಡಿದೆ.

ಕಳೆದ ವರ್ಷದ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಆರ್ ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ್ದರು. ಲಾಕ್ ಡೌನ್ ಸಮಯದಲ್ಲಿ ಸದೃಢವಾಗಿ ದೇಹದ ಆರೋಗ್ಯವನ್ನು ಕಾಪಾಡಿಕೊಂಡಿದ್ದು ಈಗ ನೆಟ್ ಸೆಷನ್ ನಲ್ಲಿ ಉತ್ತಮವಾಗಿ ಪ್ರದರ್ಶನ ಮಾಡಲು ಸಹಾಯವಾಯಿತು ಎಂದು ಕೊಹ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ 13ನೇ ಐಪಿಎಲ್ ಸರಣಿ ಆರಂಭವಾಗಲಿದ್ದು ಕಳೆದ ವಾರ ಬಂದಿಳಿದ ಆರ್ ಸಿಬಿ ತಂಡ ಕ್ವಾರಂಟೈನ್ ಮುಗಿಸಿ ನಿನ್ನೆ ನೆಟ್ ಅಭ್ಯಾಸದಲ್ಲಿ ಭಾಗಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com