ಏನಿದು ಸ್ವಿಚ್ ಹಿಟ್ ಶಾಟ್: ಬ್ಯಾನ್ ಮಾಡುವಂತೆ ಇಯಾನ್ ಚಾಪೆಲ್ ಹೇಳಿದ್ದೇಕೆ?
ಬೌಲರ್‌ಗಳು ಮತ್ತು ಫೀಲ್ಡಿಂಗ್ ತಂಡದ ಮೇಲೆ ಸ್ಪಷ್ಟವಾಗಿ ಅನ್ಯಾಯ ಎಸಗುತ್ತಿರುವ 'ಸ್ವಿಚ್ ಹಿಟ್' ಹೊಡೆತವನ್ನು ಕೂಡಲೇ ಬ್ಯಾನ್ ಮಾಡುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ಗೆ(ಐಸಿಸಿ) ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್ ಸಲಹೆ ನೀಡಿದ್ದಾರೆ.
Published: 02nd December 2020 03:51 PM | Last Updated: 02nd December 2020 03:51 PM | A+A A-

ಮ್ಯಾಕ್ಸ್ ವೆಲ್-ಚಾಪೆಲ್
ಸಿಡ್ನಿ: ಬೌಲರ್‌ಗಳು ಮತ್ತು ಫೀಲ್ಡಿಂಗ್ ತಂಡದ ಮೇಲೆ ಸ್ಪಷ್ಟವಾಗಿ ಅನ್ಯಾಯ ಎಸಗುತ್ತಿರುವ 'ಸ್ವಿಚ್ ಹಿಟ್' ಹೊಡೆತವನ್ನು ಕೂಡಲೇ ಬ್ಯಾನ್ ಮಾಡುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ಗೆ(ಐಸಿಸಿ) ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್ ಸಲಹೆ ನೀಡಿದ್ದಾರೆ.
ಪ್ರಸಕ್ತ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಕ್ರಿಕೆಟ್ ಸರಣಿಯಲ್ಲಿ ಕಾಂಗರೂ ಪಡೆಯ ಬ್ಯಾಟ್ಸ್‌ಮನ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಡೇವಿಡ್ ವಾರ್ನರ್, ಈ ಸ್ವಿಚ್ ಹಿಟ್‌ನ ಸಂಪೂರ್ಣ ಲಾಭ ಪಡೆದು ಭಾರತೀಯ ಬೌಲರ್‌ಗಳನ್ನು ಬೆಂಡೆತ್ತಿದ್ದಾರೆ.
ಬಲಗೈ ಬ್ಯಾಟ್ಸ್‌ಮನ್ ಸಂಪೂರ್ಣ ಎಡಗೈ ಬ್ಯಾಟ್ಸ್‌ಮನ್ ರೀತಿಯಲ್ಲಿ ತಮ್ಮ ಶೈಲಿ ಬದಲಾಯಿಸಿ ಹೊಡೆತವನ್ನಾಡುವುದು ಸ್ವಿಚ್ ಹಿಟ್‌ನ ವಿಶೇಷತೆ. ಬೌಲರ್ ಚೆಂಡನ್ನು ಎಸೆದ ಬಳಿಕ ಕ್ಷಣಮಾತ್ರದಲ್ಲಿ ಬ್ಯಾಟ್ಸ್‌ಮನ್‌ಗಳು ತಮ್ಮ ಶೈಲಿಗೆ ವಿರುದ್ಧವಾಗಿ ತಿರುಗಿ ಚೆಂಡನ್ನು ಬೌಂಡರಿಗೆ ಬಡಿದಟ್ಟುತ್ತಾರೆ. ಈ ರೀತಿಯ ಹೊಡೆತಗಳನ್ನು ಆಡುವುದರಲ್ಲಿ ವಾರ್ನರ್ ಮತ್ತು ಮ್ಯಾಕ್ಸ್‌ವೆಲ್ ನಿಸ್ಸೀಮರು.
ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ನಿಜಕ್ಕೂ ಅದ್ಭುತವಾಗಿತ್ತು. ಅತ್ಯಂತ ಸುಲಭವಾಗಿ ರನ್ ಗಳಿಸುತ್ತಿದ್ದಾರೆ ಎಂಬಂತೆ ಕಾಣಿಸುತ್ತಿತ್ತು. ಅದರಲ್ಲೂ ಸ್ಮಿತ್ ಮತ್ತು ಮ್ಯಾಕ್ಸ್‌ವೆಲ್ ಅವರ ಬ್ಯಾಟಿಂಗ್. ಅವರಿಬ್ಬರು ಆಡುವ ಕೆಲ ಹೊಡೆತಗಳನ್ನು ನಂಬಲು ಸಾಧ್ಯವಾಗುವುದಿಲ್ಲ. ಸ್ವಿಚ್ ಹಿಟ್ ಆಡಲು ಅತ್ಯಂತ ನೈಪುಣ್ಯತೆ ಬೇಕಿರುತ್ತದೆ. ಆದರೆ, ಇದು ನ್ಯಾಯ ಸಮ್ಮತವಾದುದ್ದಲ್ಲ," ಎಂದು ಚಾಪೆಲ್ ಹೇಳಿದ್ದಾರೆ.
ಇದು ಬಹಳಾ ಸರಳ. ಮ್ಯಾಕ್ಸ್‌ವೆಲ್ ಒಂದೆರಡು ಸ್ವಿಚ್ ಹಿಟ್‌ಗಳನ್ನು ಆಡಿದರು. 2ನೇ ಒಡಿಐನಲ್ಲಿ ವಾರ್ನರ್ ಕೂಡ ಆಡಿದರು. ಬೌಲರ್ ಇನ್ನೇನು ಚೆಂಡನ್ನು ಎಸೆಯುವ ವೇಳೆ ಬ್ಯಾಟ್ಸ್‌ಮನ್ ತಮ್ಮ ಶೈಲಿಯನ್ನೇ ಬದಲಾಯಿಸುತ್ತಾರೆ. ಕೈ-ಕಾಲುಗಳ ದಿಕ್ಕೇ ಬದಲಾಗುತ್ತದೆ. ಇದು ಬೌಲರ್‌ಗಳಿಗೆ ಆಗುತ್ತಿರುವ ಅನ್ಯಾಯ ಎಂದು ಟೀಕಿಸಿದ್ದಾರೆ.
ಬ್ಯಾಟ್ಸ್‌ಮನ್ ಈಗ ಸ್ವಿಚ್ ಹಿಟ್ ಹೊಡೆತವನ್ನಾಡಲಿದ್ದಾರೆ ಎಂಬುದು ಬೌಲರ್‌ಗೆ ಮೊದಲೇ ತಿಳಿದರೆ ಇಲ್ಲಿ ಸಮಸ್ಯೆ ಏನಿಲ್ಲ. ಆದರೆ ತಿಳಿಸದೇ ತಮ್ಮ ಶೈಲಿ ಬದಲಾಯಿಸಿದರೆ ಅದು ಬಹುದೊಡ್ಡ ಅನ್ಯಾಯವೇ ಸರಿ ಎಂದು ಚಾಪೆಲ್ ಹೇಳಿದ್ದಾರೆ.
"ಈ ರೀತಿಯ ನಿಯಮಗಳು ಏಕಮುಖವಾಗಿರುವುದು ಸರಿಯಲ್ಲ. ಏಕೆಂದರೆ ಬೌಲರ್‌ಗಳು ತಾವು ಯಾವ ಬದಿಯಿಂದ ಬೌಲಿಂಗ್ ಮಾಡುತ್ತಿದ್ದೇವೆ ಎಂದು ಮೊದಲೇ ಹೇಳಬೇಕು. ಇಲ್ಲದಿದ್ದರೆ ಇದಕ್ಕೆ ಅಂಪೈರ್‌ಗಳಿಂದ ಆಕ್ಷೇಪ ಎದುರಾಗುತ್ತದೆ. ಇನ್ನು ಬೌಲರ್ ರನ್ ಅಪ್‌ನಲ್ಲಿ ಇರುವಾಗ ಬಲಗೈ ಬ್ಯಾಟ್ಸ್‌ಮನ್ ಎಡಗೈ ಬ್ಯಾಟ್ಸ್‌ಮನ್‌ನಂತೆ ಬದಲಾದರೆ ಇದು ಎಲ್ಲಿಯ ನ್ಯಾಯ. ಫೀಲ್ಡಿಂಗ್ ತಂಡದ ನಾಯಕ ಕೂಡ ಬಲಗೈ ಬ್ಯಾಟ್ಸ್‌ಮನ್‌ಗೆ ಫೀಲ್ಡರ್‌ಗಳನ್ನು ನಿಲ್ಲಿಸಿರುತ್ತಾರೆ. ಬ್ಯಾಟ್ಸ್‌ಮನ್‌ಗಳು ಇದರ ಲಾಭ ಪಡೆಯುವ ಸಲುವಾಗಿ ಬಲಗೈನಿಂದ ಎಡಗೈ ಬ್ಯಾಟ್ಸ್‌ಮನ್ ಆಗಿ ಬದಲಾಗುತ್ತಾರೆ. ಕ್ರಿಕೆಟ್‌ನ ನಿಯಮಗಳನ್ನು ರಚಿಸಿರುವವರು ಇದು ಯಾವ ರೀತಿ ನ್ಯಾಯಯುತ ಎಂದು ವಿವರಿಸಲಿ," ಎಂದು 77 ವರ್ಷದ ಮಾಜಿ ಕ್ರಿಕೆಟಿಗ ಚಾಪೆಲ್ ಮನವಿ ಮಾಡಿದ್ದಾರೆ.
Another outrageous display from Glenn Maxwell! #AUSvIND pic.twitter.com/pChGgxMAqv
— cricket.com.au (@cricketcomau) November 29, 2020