ಬೆಂಗಳೂರು: ಭಾರತ-ನ್ಯೂಜಿಲ್ಯಾಂಡ್ ಟಿ20 ಪಂದ್ಯದ ವೇಳೆ ಬೆಟ್ಟಿಂಗ್, 10 ಜನರ ಬಂಧನ

ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ 10 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಿವೀಸ್-ಭಾರತ
ಕಿವೀಸ್-ಭಾರತ

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ 10 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಚೇತನ್, ಹೆಚ್​. ಅರವಿಂದ್, ನಿತಿನ್, ಮಹಮ್ಮದ್ ಫಹಾದ್, ನವೀನ್, ಲಕ್ಷ್ಮಣ್​ ದಾಸ್, ಪ್ರತೀಕ್, ಪವನ್, ಕಿಶನ್ ಹಾಗೂ ವೈಭವ್ ಬಂಧಿತ ಆರೋಪಿಗಳು. 

ನಿನ್ನೆ ಭಾರತ ಹಾಗೂ ನ್ಯೂಜಿಲೆಂಡ್ ತಂಡದ ಟಿ20 ಪಂದ್ಯದ  ಫಲಿತಾಂಶದ ಕುರಿತು ನಗರದ ಲ್ಯಾವೆಲ್ಲೇ ರಸ್ತೆಯ ಟೆಕ್ನೋ ಹ್ಯಾಂಗ್ ಔಟ್ ಕ್ಲಬ್‌ನಲ್ಲಿ ಬೆಟ್ಟಿಂಗ್​ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com