ಧೋನಿಯಂತೆ ಅದ್ಭುತ ಕೀಪಿಂಗ್ ಮಾಡಿದ ಕೆಎಲ್ ರಾಹುಲ್, ಈ ವಿಡಿಯೋ ನೋಡಿ ಶಾಕ್ ಆಗ್ತೀರಾ!

ಕೀಪಿಂಗ್ ನಲ್ಲಿ ಎಂಎಸ್ ಧೋನಿಯನ್ನು ಮೀರಿಸುವಂತಾ ಕೀಪರ್ ಮತ್ತೊಬ್ಬ ಸಿಕ್ಕಿರಲಿಲ್ಲ. ಆದರೆ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿ ವೇಳೆ ಕೆಎಲ್ ರಾಹುಲ್ ಅದ್ಭುತವಾಗಿ ಕೀಪಿಂಗ್ ಮಾಡುತ್ತಿರುವುದಕ್ಕೆ ಈ ವಿಡಿಯೋ ಸಾಕ್ಷಿ.
ಕೆಎಲ್ ರಾಹುಲ್
ಕೆಎಲ್ ರಾಹುಲ್

ಬೆಂಗಳೂರು: ಕೀಪಿಂಗ್ ನಲ್ಲಿ ಎಂಎಸ್ ಧೋನಿಯನ್ನು ಮೀರಿಸುವಂತಾ ಕೀಪರ್ ಮತ್ತೊಬ್ಬ ಸಿಕ್ಕಿರಲಿಲ್ಲ. ಆದರೆ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿ ವೇಳೆ ಕೆಎಲ್ ರಾಹುಲ್ ಅದ್ಭುತವಾಗಿ ಕೀಪಿಂಗ್ ಮಾಡುತ್ತಿರುವುದಕ್ಕೆ ಈ ವಿಡಿಯೋ ಸಾಕ್ಷಿ.

ನ್ಯೂಜಿಲ್ಯಾಂಡ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸುವ ಮೂಲಕ ಕಿವೀಸ್ ತಂಡದ ವಿರುದ್ಧ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಇನ್ನು ಆಲ್ ರೌಂಡರ್ ಪ್ರದರ್ಶನ ನೀಡುತ್ತಿರುವ ಕೆಎಲ್ ರಾಹುಲ್ ಅದ್ಭುತವಾಗಿ ರನೌಟ್ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಟಿಮ್ ಸೈಫರ್ಟ್ ಕವರ್ಸ್ ನಲ್ಲಿ ಸಿಂಗಲ್ ತೆಗೆದುಕೊಳ್ಳುವಾಗ ಸಂಜು ಸ್ಯಾಮ್ಸನ್ ಚೆಂಡನ್ನು ಸ್ಟ್ರೈಕ್ ನತ್ತ ಬೀಸಿದರು. ಇನ್ನು ದೂರದಲ್ಲಿ ನಿಂತಿದ್ದ ಕೆಎಲ್ ರಾಹುಲ್ ಓಡಿ ಬಂದು ಚೆಂಡನ್ನು ಹಿಡಿದು ಡೈವ್ ಮಾಡಿ ವಿಕೆಟ್ ಗೆ ಹೊಡೆದರು. ಇದರೊಂದಿಗೆ ಟೇಲರ್ ಮತ್ತು ಟಿಮ್ ಜೊತೆಯಾಟವನ್ನು ಮುರಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com