ಶಾಕಿಂಗ್ ನ್ಯೂಸ್ : ಕಿವೀಸ್ ವಿರುದ್ಧದ ಏಕದಿನ, ಟೆಸ್ಟ್ ಸರಣಿಯಿಂದ ರೋಹಿತ್ ಹೊರಗೆ-ಕಾರಣ ಏನು ಗೊತ್ತಾ?

ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಅದ್ಬುತ ಪ್ರದರ್ಶನ ನೀಡಿದ ಟೀಂ ಇಂಡಿಯಾ ಹಿಟ್ ಮ್ಯಾನ್ ರೋಹಿತ್ ಶರ್ಮಾ ಏಕದಿನ ಹಾಗೂ ಟೆಸ್ಟ್ ಸರಣಿಯಲ್ಲಿ ಆಡುತ್ತಿಲ್ಲ.
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಅದ್ಬುತ ಪ್ರದರ್ಶನ ನೀಡಿದ ಟೀಂ ಇಂಡಿಯಾ ಹಿಟ್ ಮ್ಯಾನ್ ರೋಹಿತ್ ಶರ್ಮಾ  ಏಕದಿನ ಹಾಗೂ ಟೆಸ್ಟ್ ಸರಣಿಯಲ್ಲಿ ಆಡುತ್ತಿಲ್ಲ.

ಮೊಣಕಾಲು  ಗಾಯದ ಸಮಸ್ಯೆಯಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಹಾಗೂ ಟೆಸ್ಟ್ ಸರಣಿಗಳಲ್ಲಿ ರಾಹುಲ್ ಶರ್ಮಾ ಆಡುತ್ತಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಮೌಂಟ್ ಮೌಂಗನುಯಿಯಲ್ಲಿ  ಭಾನುವಾರ ನಡೆದ ಪಂದ್ಯದಲ್ಲಿ 41 ಎಸೆತಗಳಲ್ಲಿ 60 ರನ್ ಗಳಿಸಿದ ರೋಹಿತ್ ಶರ್ಮಾ ಗಾಯದಿಂದ ಮೈದಾನದಿಂದ ಹೊರಗೆ ಬಂದರು. 

ಐದನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ರೋಹಿತ್ ಶರ್ಮಾ ಆರಂಭಿಕರಾಗಿ ರಾಹುಲ್ ಜೊತೆಗೆ ಇನ್ನಿಂಗ್ಸ್ ಆರಂಭಿಸರಿಲಿಲ್ಲ. ಟೀಂ ಇಂಡಿಯಾ ಟಾಸ್ ಗೆಲುವಿನ ಬಳಿಕ ಸಂಜು ಸ್ಯಾಮ್ಸನ್ ಹಾಗೂ ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಿದ್ದರು. ಸಂಜು ಸ್ಯಾಮ್ಸನ್ ಔಟಾದ ಬಳಿಕ ಎರಡನೇ ಓವರ್ ನಲ್ಲಿ ಬಂದ  ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಿದ್ದರು.  16. 4 ಓವರ್ ನಲ್ಲಿ ಗಾಯದಿಂದಾಗಿ ಮೈದಾನದಿಂದ ಹೊರಗೆ ಬಂದರು.  

ರೋಹಿತ್ ಸಿಕ್ಸ್ ಬಾರಿಸುವ ಸಂದರ್ಭದಲ್ಲಿ ಮೊಣಕಾಲು ಸಮಸ್ಯೆಕ್ಕೊಳಗಾಗಿದ್ದಾರೆ. ರೋಹಿತ್ ಮೂರು ಸಿಕ್ಸ್ ಹಾಗೂ ಮೂರು ಬೌಂಡರಿ ಬಾರಿಸಿದ್ದರು. 

ಗಾಯದ ಸಮಸ್ಯೆಗೊಳಗಾಗಿರುವ ರೋಹಿತ್ ಶರ್ಮಾ ಕೆಲ ದಿನಗಳ ಬಳಿಕ ಪಿಟ್ ಆಗಲಿದ್ದಾರೆ ಎಂದು ಪಂದ್ಯ ಮುಗಿದ ಬಳಿಕ ನಾಯಕತ್ವ ವಹಿಸಿಕೊಂಡಿದ್ದ ಕೆಎಲ್ ರಾಹುಲ್ ಹೇಳಿದರು. 

ಬುಧವಾರ ಹ್ಯಾಮಿಲ್ಟನ್ ನಲ್ಲಿ ಮೊದಲ ಏಕದಿನ, ಫೆಬ್ರವರಿ 8 ಶನಿವಾರ ಆಕ್ಲಂಡ್ ನಲ್ಲಿ 2 ಏಕದಿನ ಹಾಗೂ ಫೆಬ್ರವರಿ 11 ಮೌಂಟ್ ಮೌಂಗನುಯಿಯಲ್ಲಿ ಮೂರನೇ ಏಕದಿನ ಪಂದ್ಯಗಳು ನಡೆಯಲಿವೆ. ಏಕದಿನ ಸರಣಿ ಮುಗಿದ ಬಳಿಕ ಫೆಬ್ರವರಿ 21-25ರವರೆಗೆ ಮೊದಲ ಟೆಸ್ಟ್ ಹಾಗೂ ಫೆಬ್ರವರಿ 29 ರಿಂದ ಮಾರ್ಚ್ 4ರವರೆಗೆ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com