ಡಿಆರ್‌ಎಸ್ ಎಡವಟ್ಟು: ಅಂಪೈರ್ ವಿರುದ್ಧ ಗರಂ ಆದ ವಿರಾಟ್ ಕೊಹ್ಲಿ, ವಿಡಿಯೋ ವೈರಲ್!

ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯ ಸೋಲುವ ಮೂಲಕ ಸರಣಿಯನ್ನು ಕೈಚೆಲ್ಲಿದ್ದು ಇದೇ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲೇ ಅಂಪೈರ್ ಮೇಲೆ ಫುಲ್ ಗರಂ ಆಗಿರುವ ವಿಡಿಯೋ ವೈರಲ್ ಆಗಿದೆ.
ಕೊಹ್ಲಿ
ಕೊಹ್ಲಿ

ಆಕ್ಲೆಂಡ್: ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯ ಸೋಲುವ ಮೂಲಕ ಸರಣಿಯನ್ನು ಕೈಚೆಲ್ಲಿದ್ದು ಇದೇ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲೇ ಅಂಪೈರ್ ಮೇಲೆ ಫುಲ್ ಗರಂ ಆಗಿರುವ ವಿಡಿಯೋ ವೈರಲ್ ಆಗಿದೆ. 

ನ್ಯೂಜಿಲ್ಯಾಂಡ್ ನ ಬ್ಯಾಟ್ಸ್ ಮನ್ ಹೆನ್ರಿ ನಿಕೋಲ್ಸ್ ಎಲ್ ಬಿಡಬ್ಲ್ಯೂ ಔಟ್ ಆಗಿದ್ದರು. ನಿಗದಿತ ಸಮಯದ ನಂತರ ಅವರು ಡಿಆರ್‌ಎಸ್ ಮನವಿ ಮಾಡಿದರು. ಆಗ ಅಂಪೈರ್ ಬ್ರೂಸ್ ಆಕ್ಸೆನ್ ಪೋರ್ಡ್ ಅನುಮೋದಿಸಿದರು. ಇದರಿಂದ ಕೋಪಗೊಂಡ ಕೊಹ್ಲಿ ಅಂಪೈರ್ ಮೇಲೆ ರೇಗಾಡಿದರು.

ಐಸಿಸಿ ನಿಯಮಗಳ ಪ್ರಕಾರ ಅಂಪೈರ್ ನಿರ್ಧಾರದ ನಂತರದ 15 ಸೆಕೆಂಡುಗಳಲ್ಲಿ ಡಿಆರ್‌ಎಸ್ ಗೆ ಸಲ್ಲಿಸಬೇಕು. ಆದರೆ 15 ಸೆಕೆಂಡ್ ನಂತರ ಮನವಿಯನ್ನು ಒಪ್ಪಿದ್ದಕ್ಕೆ ಕೊಹ್ಲಿ ಸಿಟ್ಟಾದರು. 

ನಂತರ ಡಿಆರ್‌ಎಸ್ ನಲ್ಲಿ ಹೆನ್ರಿ ನಿಕೋಲ್ಸ್ ಔಟ್ ಆಗಿರುವುದು ಸ್ಪಷ್ಟವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com