ಅಂಡರ್ 19 ವಿಶ್ವಕಪ್ ಫೈನಲ್: 177  ರನ್ ಗಳಿಗೆ ಇಂಡಿಯಾ ಆಲೌಟ್, ಕೇವಲ 16 ರನ್ ಗಳ ಅಂತರದಲ್ಲಿ 6 ವಿಕೆಟ್ ಪತನ

ದಕ್ಷಿಣ ಆಪ್ರಿಕಾದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತೀಯ ಕಿರಿಯರ ತಂಡವು 47.2 ಓವರ್‌ಗಳಲ್ಲಿ 177 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು

Published: 09th February 2020 05:49 PM  |   Last Updated: 09th February 2020 06:01 PM   |  A+A-


Banglaindia1

ಇಂಡಿಯಾ- ಬಾಂಗ್ಲಾ ಆಟಗಾರರು

Posted By : Nagaraja AB
Source : Online Desk

ಪೊಚೆಫ್‌ಸ್ಟ್ರೂಮ್:  ದಕ್ಷಿಣ ಆಪ್ರಿಕಾದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತೀಯ ಕಿರಿಯರ ತಂಡವು 47.2 ಓವರ್‌ಗಳಲ್ಲಿ 177 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಆರಂಭ ಉತ್ತಮವಾಗಿರಲಿಲ್ಲ. ಯಶಸ್ವಿ ಜೈಸ್ವಾಲ್ ಹಾಗೂ ದಿವ್ಯಾಂಶ್ ಸಕ್ಸೇನ ಅವರನ್ನು ಆರಂಭದಲ್ಲೇ  ಕಟ್ಟಿಹಾಕುವಲ್ಲಿ ಬಾಂಗ್ಲಾ ವೇಗಿಗಳು ಯಶಸ್ವಿಯಾದರು. 17 ಎಸೆತಗಳಲ್ಲಿ ಎರಡು ರನ್  ಮಾತ್ರ ಗಳಿಸಿದ್ದ ದಿವ್ಯಾಂಶ್ ಸಕ್ಸೇನ ಅವರನ್ನು ಬಾಂಗ್ಲಾ ವೇಗಿ ಅವಿಷೇಕ್ ದಾಸ್ ಹೊರದಬ್ಬಿದರು.

ಇದಾದ ಬಳಿಕ ತಿಲಕ್ ವರ್ಮಾ ಜೊತೆಗೂಡಿದ ಯಶಸ್ವಿ ಜೈಸ್ವಾಲ್  ಅರ್ಧಶತಕ ಸಾಧನೆ ಮಾಡಿದರು. ಈ ಮೂಲಕ 2020 ಅಂಡರ್ 19 ವಿಶ್ವಕಪ್‌ನಲ್ಲಿ ಐದನೇ ಬಾರಿಗೆ 50ಕ್ಕೂ ಹೆಚ್ಚು ರನ್ ಗಳಿಸಿದ ಹಿರಿಮೆಗೆ ಭಾಜನವಾದರು.

ಬಳಿಕ ತಿಲಕ್ ವರ್ಮಾ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. 65 ಎಸೆತಗಳನ್ನು ಎದುರಿಸಿದ ತಿಲಕ್ ಮೂರು ಬೌಂಡರಿಗಳಿಂದ 38 ರನ್ ಗಳಿಸಿದರು.ನಾಯಕ ಪ್ರಿಯಂ ಗಾರ್ಗ್ (7) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇನ್ನೊಂದೆಡೆ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಜೈಸ್ವಾಲ್ ಕೇವಲ 12 ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡರು. 121 ಎಸೆತಗಳನ್ನು ಎದುರಿಸಿದ ಜೈಸ್ವಾಲ್ ಎಂಟು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 88 ರನ್ ಗಳಿಸಿದರು. 

ಜೈಸ್ವಾಲ್ ಬೆನ್ನಲ್ಲೇ ಸಿದ್ದೇಶ್ ವೀರ್ (0) ಹೊರದಬ್ಬಿದ ಬಾಂಗ್ಲಾ ವೇಗಿ ಶೊರಿಫುಲ್ ಇಸ್ಲಾಂ ಡಬಲ್ ಆಘಾತ ನೀಡಿದರು. ಪರಿಣಾಮ 40 ಓವರ್‌ಗಳಲ್ಲಿ 156 ರನ್‌ಗಳಿಗೆ ಐದು ವಿಕೆಟುಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.ವಿಕೆಟ್ ಕೀಪರ್ ಧ್ರುವ್ ಜುರೆಲ್ (22) ರವಿ ಬಿಶ್ನೋಯ್ (2)  ರನೌಟ್ ಆದರು. ಹೀಗೆ ಕೇವಲ 16 ರನ್ ಗಳ ಅಂತರದಲ್ಲಿ 6 ವಿಕೆಟ್ ಪತನವಾಯಿತು.

ಮಧ್ಯಮ ಕ್ರಮಾಂಕದ ವೈಫಲ್ಯ ಭಾರತೀಯ ಕಿರಿಯರ ತಂಡ ತೀವ್ರ ಹಿನ್ನಡೆ ಅನುಭವಿಸುವಂತೆ ಮಾಡಿತು. ನಂತರ ಬಂದಂತಹಅಥರ್ವ ಅಂಕೋಲೆಕರ್ (3), ಕಾರ್ತಿಕ್ ತ್ಯಾಗಿ (0) ಹಾಗೂ ಶುಶಾಂತ್ ಮಿಶ್ರಾ (3) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅಂತಿಮವಾಗಿ 47.2 ಓವರ್‌ಗಳಲ್ಲೇ 177 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು.

 ಬಾಂಗ್ಲ ಪರ ಅವಿಶೇಕ್ ದಾಸ್ ಮೂರು ಮತ್ತು ಶೊರಿಫುಲ್ ಇಸ್ಲಾಂ ಹಾಗೂ ತನ್ಜಿಮ್ ಹಸನ್ ಶಕಿಬ್ ತಲಾ ಎರಡು ವಿಕೆಟ್ ಪಡೆದರು. ಇದೀಗ ದಾಖಲೆಯ ಐದನೇ ವಿಶ್ವಕಪ್ ನನಸಾಗಬೇಕಾದರೆ ರನ್‌ಗಳಿಗೆ ಬಾಂಗ್ಲಾ ತಂಡವನ್ನು 176 ರನ್‌ಗಳಿಗೆ ಕಟ್ಟಿ ಹಾಕಬೇಕಿದೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp