ಮೈದಾನದಲ್ಲಿ ಭಾರತ ಆಟಗಾರರ ಮೇಲೆ ಹಲ್ಲೆಗೆ ಮುಂದಾಗಿ ವಿಕೃತಿ ಮೆರೆದ ಬಾಂಗ್ಲಾ ಕ್ರಿಕೆಟಿಗರು, ವಿಡಿಯೋ ವೈರಲ್!

ಅಂಡರ್ 19 ವಿಶ್ವಕಪ್ ಗೆಲುವಿನ ನಂತರ ಬಾಂಗ್ಲಾ ಕ್ರಿಕೆಟಿಗರು ಸಂಭ್ರಮಾಚರಣೆಗೆಂದು ಮೈದಾನಕ್ಕೆ ತೆರಳಿ ಅಲ್ಲಿದ್ದ ಭಾರತೀಯ ಕ್ರಿಕೆಟಿಗರ ಮೇಲೆ ಹಲ್ಲೆಗೆ ಮುಂದಾಗಿರುವ ಹೀನಾ ಕೃತ್ಯ ಮೆರೆದಿದ್ದಾರೆ. 
ಪ್ರತ್ಯಕ್ಷ ಚಿತ್ರ
ಪ್ರತ್ಯಕ್ಷ ಚಿತ್ರ

ಅಂಡರ್ 19 ವಿಶ್ವಕಪ್ ಗೆಲುವಿನ ನಂತರ ಬಾಂಗ್ಲಾ ಕ್ರಿಕೆಟಿಗರು ಸಂಭ್ರಮಾಚರಣೆಗೆಂದು ಮೈದಾನಕ್ಕೆ ತೆರಳಿ ಅಲ್ಲಿದ್ದ ಭಾರತೀಯ ಕ್ರಿಕೆಟಿಗರ ಮೇಲೆ ಹಲ್ಲೆಗೆ ಮುಂದಾಗಿರುವ ಹೀನಾ ಕೃತ್ಯ ಮೆರೆದಿದ್ದಾರೆ. 

ಪೊಚೆಫ್‌ಸ್ಟ್ರೂಮ್ ನಲ್ಲಿ ನಡೆದ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಭಾರತ ತಂಡವನ್ನು 3 ವಿಕೆಟ್ ಗಳಿಂದ ಮಣಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 

ಇನ್ನು ಬಾಂಗ್ಲಾ ಬ್ಯಾಟ್ಸ್ ಮನ್ ಗೆಲುವಿನ ರನ್ ಬಾರಿಸುತ್ತಿದ್ದಂತೆ ಮೈದಾನಕ್ಕೆ ಬಾಂಗ್ಲಾ ಕ್ರಿಕೆಟಿಗರು ತೆರಳಿ ಅಲ್ಲಿ ಭಾರತೀಯ ಕ್ರಿಕೆಟಿಗರ ಮುಂದೆ ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೆ ಉಭಯ ಆಟಗಾರರು ಕೈ ಕೈ ಮೀಲಾಯಿಸಿದ ಹಂತಕ್ಕೆ ತೆರಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com