ಆರ್‌ಸಿಬಿ ತಂಡದ ನೂತನ ಲಾಂಛನದ ಬಗ್ಗೆ ಮಾಜಿ ಮಾಲೀಕ ವಿಜಯ್ ಮಲ್ಯ ಪ್ರತಿಕ್ರಿಯ

ಇಂಡಿಯನ್ ಪ್ರೀಮಿಯರ್‌ ಲೀಗ್ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ(ಆರ್‌ಸಿಬಿ)ದ ನೂತನ ಲಾಂಛನವನ್ನು ಶುಕ್ರವಾರ ಅನಾವರಣಗೊಳಿಸಲಾಗಿದೆ. ಭವ್ಯ ಸಿಂಹದೊಂದಿಗೆ ಮರು ವಿನ್ಯಾಸ ಮಾಡಿರುವ ಲಾಂಛನ ಆರ್‌ಸಿಬಿಯ ತತ್ವಶಾಸ್ತ್ರ, ಜೀವಂತಿಕೆ ಮತ್ತು ನಿರ್ಬೀತ ಮನೋಭಾವವನ್ನು ತೋರುತ್ತದೆ.
ವಿಜಯ್ ಮಲ್ಯ(ಸಂಗ್ರಹ ಚಿತ್ರ)
ವಿಜಯ್ ಮಲ್ಯ(ಸಂಗ್ರಹ ಚಿತ್ರ)

ಲಂಡನ್‌: ಇಂಡಿಯನ್ ಪ್ರೀಮಿಯರ್‌ ಲೀಗ್ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ(ಆರ್‌ಸಿಬಿ)ದ ನೂತನ ಲಾಂಛನವನ್ನು ಶುಕ್ರವಾರ ಅನಾವರಣಗೊಳಿಸಲಾಗಿದೆ. ಭವ್ಯ ಸಿಂಹದೊಂದಿಗೆ ಮರು ವಿನ್ಯಾಸ ಮಾಡಿರುವ ಲಾಂಛನ ಆರ್‌ಸಿಬಿಯ ತತ್ವಶಾಸ್ತ್ರ, ಜೀವಂತಿಕೆ ಮತ್ತು ನಿರ್ಬೀತ ಮನೋಭಾವವನ್ನು ತೋರುತ್ತದೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಮಾಲೀಕ ವಿಜಯ್‌ ಮಲ್ಯ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ಗೆಲ್ಲಬೇಕು ಎಂದು ಹೇಳಿದ್ದಾರೆ.
 
ಈ ಬಗ್ಗೆ ಟ್ವೀಟ್ ಮಾಡಿರುವ ವಿಜಯ್‌ ಮಲ್ಯ," ಆರ್‌ಸಿಬಿ ತಂಡದ ಲೋಗೋ ಬದಲಾವಣೆ ಮಾಡಿರುವುದು ಅದ್ಭುತ ವಿಚಾರ. ಆದರೆ, ಈ ಬಾರಿ ಪ್ರಶಸ್ತಿ ಗೆಲ್ಲಲೇಬೇಕು'' ಎಂದು ಹೇಳಿದ್ದಾರೆ.

ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಅವರ ಕೈಗೆ ತಂಡವನ್ನು ನೀಡಲಾಗಿದೆ. ತಮಗೆ ನೀಡಿರುವ ಸ್ವಾತಂತ್ರವನ್ನು ಬಳಸಿಕೊಂಡು ವಿರಾಟ್ ಕೊಹ್ಲಿ ಅಭಿಮಾನಿಗಳ ಒತ್ತಾಸೆಯಂತೆ ಟ್ರೋಫಿ ಗೆಲ್ಲಬೇಕು ಎಂದು ಕೋರಿದ್ದಾರೆ.

"ವಿರಾಟ್ ಕೊಹ್ಲಿ ಭಾರತ 19 ವಯೋಮಿತಿ ತಂಡದಲ್ಲಿದ್ದಾಗ ಆರ್‌ಸಿಬಿಗೆ ಪದಾರ್ಪಣೆ ಮಾಡಿದ್ದರು. ಕೊಹ್ಲಿ ಭಾರತವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅವರೇ ಸ್ವತಃ ಅತ್ಯುತ್ತಮ ಸಾಧಕರಾಗಿದ್ದಾರೆ. ಇದನ್ನು ಪರಿಗಣಿಸಿ, ಅವರಿಗೆ ಸ್ವಾತಂತ್ರ್ಯ ನೀಡಿ. ಎಲ್ಲಾ ಆರ್‌ಸಿಬಿ ಅಭಿಮಾನಿಗಳು ದೀರ್ಘಾವಧಿಯ ಐಪಿಎಲ್ ಟ್ರೋಫಿಯನ್ನು ಬಯಸುತ್ತಾರೆ" ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.

ಆರ್‌ಸಿಬಿಯ ಹೊಸ ಲಾಂಛನದ ವಿನ್ಯಾಸವು ಸಿಂಹದ ಸರಳತೆ ಮತ್ತು 'ಐಕಾನಿಸಿಟಿ' ಅನ್ನು ಸಮತೋಲನಗೊಳಿಸುತ್ತದೆ ಹಾಗೂ ಭಾರತದ ಅತ್ಯಂತ ಅಪ್ರತಿಮ ಕ್ರೀಡಾ ತಂಡವೊಂದಕ್ಕೆ ಮುಂದಿನ ಅಧ್ಯಾಯವನ್ನು ರಚಿಸಲು ಪ್ರೇರಕವಾಗುತ್ತದೆ ಎಂದಿದ್ದಾರೆ.

2008 ರಲ್ಲಿಯೇ ಆರಂಭವಾದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇದುವರೆಗೂ 12 ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿದೆ. ಆದರೆ, ಇದುವರೆಗೂ ಆರ್‌ಸಿಬಿ ಪ್ರಶಸ್ತಿ ಗೆಲ್ಲುವಲ್ಲಿ ಸಾಧ್ಯವಾಗಲಿಲ್ಲ. ಶುಕ್ರವಾರ ಆರ್‌ಸಿಬಿ ತನ್ನ ಹೊಸ ಲಾಂಛನವನ್ನು ಅನಾವರಣಗೊಳಿಸಿದ್ದು, ತನ್ನ ಫೇಸ್‌ ಬುಕ್‌, ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್‌ ಖಾತೆಗಳಲ್ಲಿ ಪ್ರೋಫೈಲ್‌ ಚಿತ್ರಗಳಲ್ಲಿ ನೂತನ ಲೋಗೊವನ್ನು ಹಾಕಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com