ಸಂಕಷ್ಟದಲ್ಲಿದ್ದ ತಂಡಕ್ಕಾಗಿ ರಹಾನೆಯನ್ನು ಉಳಿಸಲು ತಾನೇ ರನ್‌ಔಟ್‌ಗೆ ಬಲಿಯಾದರಾ ರಿಷಬ್ ಪಂತ್, ವಿಡಿಯೋ ವೈರಲ್!

ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 165 ರನ್ ಗಳಿಗೆ ಸರ್ವಪತನ ಕಂಡಿದೆ. ಇದೇ ಪಂದ್ಯದಲ್ಲಿ ತಂಡ ಹೀನಾಯ ರನ್ ಕಲೆಹಾಕುವುದನ್ನು ತಪ್ಪಿಸಲು ಸ್ವತಃ ರಿಷಬ್ ಪಂತ್ ರನ್‌ಔಟ್‌ಗೆ ಬಲಿಯಾದರಾ ಎಂಬ ಪ್ರಶ್ನೆ ಮೂಡುತ್ತಿದೆ.
ಅಜಿಂಕ್ಯ ರಹಾನೆ-ರಿಷಬ್ ಪಂತ್
ಅಜಿಂಕ್ಯ ರಹಾನೆ-ರಿಷಬ್ ಪಂತ್

ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 165 ರನ್ ಗಳಿಗೆ ಸರ್ವಪತನ ಕಂಡಿದೆ. ಇದೇ ಪಂದ್ಯದಲ್ಲಿ ತಂಡ ಹೀನಾಯ ರನ್ ಕಲೆಹಾಕುವುದನ್ನು ತಪ್ಪಿಸಲು ಸ್ವತಃ ರಿಷಬ್ ಪಂತ್ ರನ್‌ಔಟ್‌ಗೆ ಬಲಿಯಾದರಾ ಎಂಬ ಪ್ರಶ್ನೆ ಮೂಡುತ್ತಿದೆ. 

ವೆಲ್ಲಿಂಗ್ಟನ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಕಳಪೆ ಪ್ರದರ್ಶನ ನೀಡಿತ್ತು. ಮೊದಲ ದಿನದಾಟದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು ಕೇವಲ 122 ರನ್ ಗಳಿಸಿತ್ತು. ಎರಡನೇ ದಿನದಾಟ ಪ್ರಾರಂಭಿಸಿದ ರಿಷಬ್ ಪಂತ್ ಮತ್ತು ಅಜಿಂಕ್ಯ ರಹಾನೆ ಉತ್ತಮ ಆಟ ಪ್ರಾರಂಭಿಸಿದರು. 

ಪಂದ್ಯದ 58 ಓವರ್ನ 2ನೇ ಎಸೆತದಲ್ಲಿ ಅಜಿಂಕ್ಯ ರಹಾನೆ ಹಾಫ್ ಸೈಡ್ ನಲ್ಲಿ ಚೆಂಡನ್ನು ಬಾರಿಸಿ ಒಂದು ರನ್ ಪಡೆಯಲು ಮುಂದಾದರೂ. ಈ ವೇಳೆ ಚೆಂಡನ್ನು ಫೀಲ್ಡರ್ ಬೇಗ ಹಿಡಿದಿದ್ದರಿಂದ ಪಂತ್ ರನ್ ಬೇಡ ಎಂದು ನಿಲ್ಲಿಸಿದರು. ಆದರೆ ರಹಾನೆ ಅದಾಗಲೇ ಕ್ರಿಸ್ ಮಧ್ಯಕ್ಕೆ ಬಂದಾಗಿತ್ತು. ಇನ್ನು ಫೀಲ್ಡರ್ ಚೆಂಡನ್ನು ವಿಕೆಟ್ ಗೆ ಥ್ರೋ ಮಾಡಿದ್ದರಿಂದ ವಿನಾಕಾರಣ ಪಂತ್ ಸ್ಟ್ರೈಕ್ ಗೆ ಓಡಿ ಔಟ್ ಆದರೂ.

ಪಂತ್ ರನೌಟ್ ಸದ್ಯ ಟ್ವೀಟರ್ ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಪಂತ್ ರನೌಟ್ ಆಗಲು ರಹಾನೆ ಕಾರಣ ಎಂದು ಟ್ವೀಟ್ ಮಾಡುತ್ತಿದ್ದರೆ ಇನ್ನು ಕೆಲವರು ನತದೃಷ್ಟ ಪಂತ್ ಎಂದು ಟ್ವೀಟಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com