ಪಡಿಕ್ಕಲ್ ಸ್ಫೋಟಕ ಅರ್ಧಶತಕ: ಮುಂಬೈ ವಿರುದ್ಧ ಕರ್ನಾಟಕಕ್ಕೆ 5 ವಿಕೆಟ್ ಜಯ

ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿರುವ ಕರ್ನಾಟಕ ತಂಡ 2019/20ನೇ ಸಾಲಿನ ರಣಜಿ ಟ್ರೋಫಿ ಎಲೈಟ್ ಎ ಮತ್ತು ಬಿ ಗುಂಪಿನ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಮುಂಬೈ ವಿರುದ್ಧ 5 ವಿಕೆಟ್ ಗೆಲುವು ಸಾಧಿಸಿತು. ರೈಲ್ವೇಸ್ ವಿರುದ್ಧ ಕಳೆದ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಸೂರ್ಯಕುಮಾರ್ ಯಾದವ್ ಪಡೆಗೆ ಎರಡನೇ ಪರಾಭವ ಇದಾಯ
ಕರುಣ್ ನಾಯರ್
ಕರುಣ್ ನಾಯರ್

ಮುಂಬೈ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿರುವ ಕರ್ನಾಟಕ ತಂಡ 2019/20ನೇ ಸಾಲಿನ ರಣಜಿ ಟ್ರೋಫಿ ಎಲೈಟ್ ಎ ಮತ್ತು ಬಿ ಗುಂಪಿನ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಮುಂಬೈ ವಿರುದ್ಧ 5 ವಿಕೆಟ್ ಗೆಲುವು ಸಾಧಿಸಿತು. ರೈಲ್ವೇಸ್ ವಿರುದ್ಧ ಕಳೆದ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಸೂರ್ಯಕುಮಾರ್ ಯಾದವ್ ಪಡೆಗೆ ಎರಡನೇ ಪರಾಭವ ಇದಾಯಿತು.

ಇಲ್ಲಿನ ಬಾಂದ್ರಾ ಕುರ್ಲಾ ಸಂಕೀರ್ಣದ ಕ್ರೀಡಾಂಗಣದಲ್ಲಿ ಮೂರನೇ ದಿನವಾದ ಇಂದು ಬೆಳಗ್ಗೆ 8 ವಿಕೆಟ್ ಕಳೆದುಕೊಂಡು 139 ರನ್ ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಆತಿಥೇಯ ಮುಂಬೈ ತಂಡ 50 ಓವರ್ ಗಳಿಗೆ 149 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ಪ್ರವಾಸಿ ಕರ್ನಾಟಕ ತಂಡಕ್ಕೆ 126 ರನ್ ಸಾಧಾರಣ ಗುರಿ ನೀಡಿತು.

ಗುರಿ ಬೆನ್ನತ್ತಿದ ಕರ್ನಾಟಕ ಪರ ದೇವದತ್ ಪಡಿಕ್ಕಲ್ ಮತ್ತು ಪ್ರತೀಕ್ ಜೈನ್ ಉತ್ತಮ ಪ್ರದರ್ಶನ ನೀಡಿದ್ದು ಗೆಲುವಿನ ರೂವಾರಿಗಳಾದರು. 

ರಣಜಿ ಸರಣಿಯಲ್ಲಿ ಕರ್ನಾಟಕಕ್ಕೆ ಎರಡನೇ ಗೆಲುವು ಇದಾಗಿದ್ದು ನಾಲ್ಕನೇ ಸುತ್ತಿನ ನಂತರ ಕರ್ನಾಟಕ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಇನ್ನಷ್ಟು ಮೇಲೇರಿದೆ.ಮುಂದಿನ ಪಂದ್ಯದಲ್ಲಿ ರಾಜ್ಯವು ಸೌರಾಷ್ಟ್ರ ವನ್ನು ಎದುರಿಸಲಿದ್ದು 11ರಿಂದ ಪಂದ್ಯ ಪ್ರಾರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್

ಮುಂಬೈ ಮೊದಲ ಇನ್ನಿಂಗ್ಸ್ 55.5 ಓವರ್ 194/10
(ಸೂರ್ಯಕುಮಾರ್ ಯಾದವ್ 77, ಶಶಾಂಕ್ ಅತ್ತಾರ್ಡೆ 35, ಪೃಥ್ವಿ ಶಾ 29 ರನ್ – ವಿ. ಕೌಶಿಕ್ 45/3, ರೋನಿತ್ ಮೋರೆ 47/2, ಅಭಿಮನ್ಯು ಮಿಥುನ್ 48/2)
ಕರ್ನಾಟಕ ಮೊದಲ ಇನ್ನಿಂಗ್ಸ್ 68.5 ಓವರ್ 218/10
(ರವಿಕುಮಾರ್ ಸಮರ್ಥ್ 86, ಬಿ.ಆರ್. ಶರತ್ 46, ದೇವತ್ ಪಡಿಕ್ಕಲ್ 32, ಶ್ರೇಯಸ್ ಗೋಪಾಲ್ 31 ರನ್ – ಶಶಾಂಕ್ ಅಟ್ಟಾರ್ಡೆ 58/5, ಶಮಸ್ ಮುಲಾನಿ 55/3)
ಮುಂಬೈ ಎರಡನೇ ಇನ್ನಿಂಗ್ಸ್ 50 ಓವರ್ 149/10)
(ಸರ್ಫರಾಜ್ ಖಾನ್ 71, ಶಮಸ್ ಮುಲಾನಿ 31 ರನ್ – ಪ್ರತೀಕ್ ಜೈನ್ 11/4, ಅಭಿಮನ್ಯು ಮಿಥುನ್ 62/3, ವಿ. ಕೌಶಿಕ್ 23/2)
ಕರ್ನಾಟಕ ಎರಡನೇ ಇನ್ನಿಂಗ್ಸ್ 24.3 ಓವರ್ 129/5
(ದೇವದತ್ ಪಡಿಕ್ಕಲ್ 50, ರವಿಕುಮಾರ್ ಸಮರ್ಥ್ 34, ರೋಹನ್ ಕದಮ್ 21 ರನ್ – ಶಶಾಂಕ್ ಅತ್ತಾರ್ಡೆ 52/4)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com