ಟೆಸ್ಟ್ ರ್ಯಾಂಕಿಂಗ್ ಅಗ್ರಸ್ಥಾನದಲ್ಲಿ ಕೊಹ್ಲಿ, ರಹಾನೆ, ಪೂಜಾರ ಕುಸಿತ!

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ನೂತನ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ನೂತನ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ. 

ವಿರಾಟ್ ಕೊಹ್ಲಿ 928 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ 911 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಚೇತೇಶ್ವರ ಪೂಜಾರಾ ಒಂದು ಸ್ಥಾನ ಕುಸಿದಿದ್ದು 791 ಅಂಕಗಳೊಡನೆ 5ನೇ ಸ್ಥಾನದಲ್ಲಿದ್ದಾರೆ. ಇನ್ನು ಅಜಿಂಕ್ಯ ರಹಾನೆ 759 ಅಂಕಗಳೊಂದಿಗೆ 9 ಸ್ಥಾನಕ್ಕೆ ಕುಸಿದಿದ್ದಾರೆ. 

ಇನ್ನು ಟೆಸ್ಟ್ ಬೌಲಿಂಗ್ ನಲ್ಲಿ ಭಾರತ ಜಸ್ ಪ್ರೀತ್ ಬುಮ್ರಾ 794 ಅಂಕಗಳೊಂದಿಗೆ 6ನೇ ಸ್ಥಾನ, ರವಿಚಂದ್ರನ್ ಅಶ್ವಿನ್ 772 ಅಂಕ ಹಾಗೂ ಮೊಹಮ್ಮದ್ ಶಮಿ 771 ಅಂಕಗಳೊಂದಿಗೆ 9ನೇ ಹಾಗೂ 10ನೇ ಸ್ಥಾನ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com