ಭಾರತ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಸಾಕಷ್ಟು ಶಕ್ತಿ ಇದೆ: ಮೈಕಲ್ ವಾನ್

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡದ ಡ್ರೆಸ್ಸಿಂಗ್(ಎಂಜಿನ್) ರೂಮಿನಲ್ಲಿ ಸಾಕಷ್ಟು ಶಕ್ತಿಯಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Published: 17th January 2020 08:39 PM  |   Last Updated: 17th January 2020 08:39 PM   |  A+A-


van1

ಮೈಕಲ್ ವಾನ್

Posted By : Lingaraj Badiger
Source : UNI

ನವದೆಹಲಿ: ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡದ ಡ್ರೆಸ್ಸಿಂಗ್(ಎಂಜಿನ್) ರೂಮಿನಲ್ಲಿ ಸಾಕಷ್ಟು ಶಕ್ತಿಯಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಂದಾಗ ಇದನ್ನು ನಾವು ಗಮನಿಸಬಹುದು. ಅಲ್ಲದೆ, ಕಳೆದ ಎರಡು ವಿಶ್ವಕಪ್ ಟೂರ್ನಿಗಳಲ್ಲಿ ತಂಡ ಇದನ್ನು ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.

2015 ಹಾಗೂ 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಹಂತದಲ್ಲಿ ಎಡವಿತ್ತು. 2015ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿತ್ತು. 2019ರಲ್ಲಿ ನ್ಯೂಜಿಲೆಂಡ್ ವಿರುದ್ಧ ಯಾರು ನಂಬಲಾಗದ ರೀತಿಯಲ್ಲಿ ಸೋಲು ಅನುಭವಿಸಿತ್ತು.

“ಕಳೆದ ಎರಡು ವಿಶ್ವಕಪ್ ಟೂರ್ನಿಗಳಲ್ಲಿ ಬ್ಯಾಟಿಂಗ್ ಗಮನಿಸಿದರೆ ಅವರು ನಿಜಕ್ಕೂ ನನ್ನ ಮಾತನ್ನು ಸ್ವೀಕರಿಸುತ್ತಾರೆ. ಮಧ್ಯಮ ಕ್ರಮಾಂಕದ ಇಂಜಿನ್ ರೂಂನಲ್ಲಿ ಸಾಕಷ್ಟು ಬಲವಿದೆ. ಮುಂದಿನ ಮೂರು ವರ್ಷಗಳ ವರೆಗೆ ಇದು ಹಾಗೇಯೆ ತಂಡದಲ್ಲಿ ಉಳಿಯಲಿದೆ,’ ಎಂದು ಮೈಕಲ್ ವಾನ್ ಟ್ವೀಟ್ ಮಾಡಿದ್ದಾರೆ.

ಕಳೆದ ಮಂಗಳವಾರ ಭಾರತ ತಂಡ ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ 10 ವಿಕೆಟ್ ಗಳ ಹೀನಾಯ ಸೋಲು ಅನುಭವಿಸಿತ್ತು. ಇಂದಿನ ಪಂದ್ಯದಲ್ಲಿ ಗೆದ್ದು ಸರಣಿ ಜೀವಂತವಾಗಿರಿಸಿಕೊಳ್ಳಬೇಕಾದ ಒತ್ತಡಕ್ಕೆ ಕೊಹ್ಲಿ ಪಡೆ ಒಳಗಾಗಿದೆ.

“ಮೊದಲನೇ ಪಂದ್ಯದಲ್ಲಿ ಸೋತಿರುವ ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ತಂಡಕ್ಕೆ ಯಾವ ರೀತಿ ಪ್ರತ್ಯುತ್ತರ ನೀಡಲಿದೆ ಎಂಬುದು ನನ್ನಲ್ಲಿ ಸಾಕಷ್ಟು ಆಸಕ್ತಿ ಕೆರಳಿಸಿದೆ,’’ ಎಂದು ವಾನ್ ಹೇಳಿದ್ದಾರೆ.

ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕ ಹೊರತುಪಡಿಸಿದರೆ, ರೋಹಿತ್ ಶರ್ಮಾ, ಶಿಖರ್ ಧವನ್/ಕೆ.ಎಲ್. ರಾಹುಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರು ರಾಜ್ ಕೋಟ್ ನಲ್ಲಿ ಹೇಗೆ ಪುಟಿದೇಳಲಿದ್ದಾರೆಂಬುದು ಆಸಕ್ತಿ ಕೆರಳಿಸಿದೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp