ಭಾರತಕ್ಕೆ ಧೋನಿಗೆ ಬದಲಿ ಆಟಗಾರ ಸಿಕ್ಕಿಬಿಟ್ಟ: ಅಖ್ತರ್ ಹೇಳಿದ ಆ ಕನ್ನಡಿಗ ಯಾರು ಗೊತ್ತ?

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಎಂಎಸ್ ಧೋನಿ ನಿವೃತ್ತಿ ಕುರಿತ ಬಿಸಿ ಬಿಸಿ ಚರ್ಚೆಗಳು ಕ್ರಿಕೆಟ್ ವಲಯದಲ್ಲಿ ನಡೆಯುತ್ತಲೇ ಇದೆ. ಇನ್ನು ಧೋನಿಗೆ ಬದಲಿ ಆಟಗಾರನನ್ನು ಆಯ್ಕೆ ಮಾಡುವ ವಿಚಾರದಲ್ಲೂ ಬಿಸಿಸಿಐ ಹೆಚ್ಚು ಜಾಗರೂಕತೆಯನ್ನು ವಹಿಸಿದೆ. 
ಎಂಎಸ್ ಧೋನಿ-ಶೊಯೇಬ್ ಅಖ್ತರ್
ಎಂಎಸ್ ಧೋನಿ-ಶೊಯೇಬ್ ಅಖ್ತರ್

ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಎಂಎಸ್ ಧೋನಿ ನಿವೃತ್ತಿ ಕುರಿತ ಬಿಸಿ ಬಿಸಿ ಚರ್ಚೆಗಳು ಕ್ರಿಕೆಟ್ ವಲಯದಲ್ಲಿ ನಡೆಯುತ್ತಲೇ ಇದೆ. ಇನ್ನು ಧೋನಿಗೆ ಬದಲಿ ಆಟಗಾರನನ್ನು ಆಯ್ಕೆ ಮಾಡುವ ವಿಚಾರದಲ್ಲೂ ಬಿಸಿಸಿಐ ಹೆಚ್ಚು ಜಾಗರೂಕತೆಯನ್ನು ವಹಿಸಿದೆ. 

ಈ ಮಧ್ಯೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೊಯೇಬ್ ಅಖ್ತರ್ ಎಂಎಸ್ ಧೋನಿಗೆ ಪರ್ಯಾಯ ಆಟಗಾರನನ್ನು ಗುರುತಿಸಿದ್ದಾರೆ. ಹೌದು, ಟೀಂ ಇಂಡಿಯಾದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಮನೀಷ್ ಪಾಂಡೆ ಅವರು ಧೋನಿಯಂತೆ ಪಂದ್ಯವನ್ನು ಮುಗಿಸುವ ಕಲೆ ಹೊಂದಿದ್ದಾರೆ ಎಂದರು.

30 ವರ್ಷ ಮನೀಶ್ ಪಾಂಡೆ ಅವರು ಬ್ಯಾಟಿಂಗ್ ಮೂಲಕ ತಂಡಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡುತ್ತಿದ್ದಾರೆ. ಇನ್ನು ಆಸ್ಟ್ರೇಲಿಯಾ ಸರಣಿಗೂ ಮುನ್ನ ನಡೆದ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಪಾಂಡೆ ನಾಲ್ಕನೇ ಕ್ರಮಾಂಕದಲ್ಲಿ ಬಂದು 18 ಎಸೆತಗಳಲ್ಲಿ 31 ರನ್ ಪೇರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಧೋನಿಯಂತೆ ಪಂದ್ಯವನ್ನು ದಡ ಮುಟ್ಟಿಸುವ ಕಾರ್ಯವನ್ನು ಮನೀಶ್ ಪಾಂಡೆ ಸಹ ಯಶಸ್ವಿಯಾಗಿ ಮಾಡುತ್ತಾರೆ ಎಂದು ಅಖ್ತರ್ ಹೇಳಿದ್ದಾರೆ. 

ತಮ್ಮ ಯುಟ್ಯೂಬ್ ಚಾನಲ್ ನಲ್ಲಿ ಮಾತನಾಡಿರುವ ಶೊಯೇಬ್ ಅಖ್ತರ್ ಅವರು ಮನೀಶ್ ಪಾಂಡೆ ಮತ್ತು ಶ್ರೇಯಸ್ ಅಯ್ಯರ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಭಾರತಕ್ಕೆ ಈ ಇಬ್ಬರು ಆಟಗಾರರು ಭದ್ರ ಬುನಾದಿಗಳಾಗುತ್ತಾರೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com