ದೃಷ್ಟಿ ವಿಶೇಷಚೇತನ ಕ್ರಿಕೆಟಿಗರಿಗೆ ಬೆಂಗಳೂರಿನಲ್ಲಿ ವಿಶೇಷ ಕ್ರೀಡಾಂಗಣ ನಿರ್ಮಾಣ ಶೀಘ್ರ

 ದೃಷ್ಟಿ ವಿಶೇಷಚೇತನ ಕ್ರಿಕೆಟಿಗರಿಗಾಗಿ ಮೀಸಲಾದ ಕ್ರೀಡಾ ತರಬೇತಿ ಸಂಕೀರ್ಣವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸುವ ನಿರೀಕ್ಷೆ ಇದ್ದು ಇದು ಅವರು  ವೃತ್ತಿಪರ ಆಟಗಾರರಾಗಿ ಬೆಳೆಯಲುಅನುವು ಮಾಡಿಕೊಡುತ್ತದೆ ಎಂದು ಕ್ರಿಕೆಟ್ ಅಸೋಸಿಯೇಷನ್ ​​ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (ಸಿಎಬಿಐ) ಹೇಳಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದೃಷ್ಟಿ ವಿಶೇಷಚೇತನ ಕ್ರಿಕೆಟಿಗರಿಗಾಗಿ ಮೀಸಲಾದ ಕ್ರೀಡಾ ತರಬೇತಿ ಸಂಕೀರ್ಣವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸುವ ನಿರೀಕ್ಷೆ ಇದ್ದು ಇದು ಅವರು  ವೃತ್ತಿಪರ ಆಟಗಾರರಾಗಿ ಬೆಳೆಯಲುಅನುವು ಮಾಡಿಕೊಡುತ್ತದೆ ಎಂದು ಕ್ರಿಕೆಟ್ ಅಸೋಸಿಯೇಷನ್ ​​ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (ಸಿಎಬಿಐ) ಹೇಳಿದೆ.

ತರಬೇತಿ ಕ್ರೀಡಾಂಗಣ, ಜಿಮ್, ಮತ್ತು ಈಜುಕೊಳದೊಂದಿಗೆ ಕ್ರೀಡಾ ಸಂಕೀರ್ಣವನ್ನು ಸ್ಥಾಪಿಸಲು 25 ಎಕರೆ ಭೂಮಿಯನ್ನು ಮಂಜೂರು ಮಾಡಿರೆಂದು ಸಿಎಬಿಐ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದೆ.ಇದಕ್ಕೆ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಿಎಬಿಐ ಅಧ್ಯಕ್ಷ ಮತ್ತು ಸಮರ್ಥನಂ ಟ್ರಸ್ಟ್ ಮುಖ್ಯಸ್ಥ ಮಹಂತೇಶ್ ಜಿಕೆ ಮಾಧ್ಯಮಗಳಿಗೆ ತಿಳಿಸಿದರು.

"ಚಿನ್ನಸ್ವಾಮಿ ಕ್ರೀಡಾಂಗಣ ವರ್ಷದ ಬಹುತೇಕ ದಿನ ಬೇರೆ ಬೇರೆ ಕಾರ್ಯಕ್ರಮಗಳಿಂದ ಕೂಡಿರುತ್ತದೆಮತ್ತು ಅದನ್ನು ಬಳಸಲು ನಮಗೆ ಅನುಮತಿ ಸಿಕ್ಕುವುದು ಕಠಿಣವಾಗಿದೆ.ದೃಷ್ಟಿ ವಿಶೇಷಚೇತನ ಕ್ರೀಡಾಪಟುಗಳಿಗೆ ಮಾತ್ರವೇ ಮೀಸಲಾಗಿರುವ ಆಟದ ಮೈದಾನವಿದ್ದಲ್ಲಿ ಅವರಿಗೆ ಯಾವಾಗ ಬೇಕಾದರೂ ತರಬೇತಿ ನೀಡಲು ಸಾಧ್ಯವಾಗುತ್ತದೆ. ನಾವು ಉನ್ನತ ತರಬೇತುದಾರರನ್ನು ಕೂಡ ಕರೆತರಲಿದ್ದೇವೆ. ಸರ್ಕಾರ ನಮಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ ”ಎಂದು ಮಹಂತೇಶ್ ಹೇಳಿದರು.

ತಮ್ಮ ಸಂಸ್ಥೆ ಬೆಂಗಳೂರಿನ ಹೊರವಲಯದಲ್ಲಿ ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಇರುವಂತಹಾ  ಸೂಕ್ತವಾದ ಸ್ಥಳಾವಕಾಶವನ್ನು ಹುಡುಕಲಿದೆ ಎಂದು ಮಹಂತೇಶ್ ಹೇಳಿದರು. ದೃಷ್ಟಿ ಮತ್ತು ಇತರ ಬಗೆಯ ವಿಶೇಷಚೇತನರಿಗೆ ಅಗತ್ಯ ಸೌಲಭ್ಯ ಬೇಕಾಗಿದ್ದು ಇದರಿಂದ ತಿಯೊಬ್ಬರೂ ಬಂದು ತಮ್ಮ ಕ್ರೀಡಾಭ್ಯಾಸ ಕೈಗೊಳ್ಳಬಹುದು ಶಾಲಾ ವಿದ್ಯಾರ್ಥಿಗಳು ಮತ್ತು ವಯಸ್ಕರನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ದೃಷ್ಟಿ ವಿಶೇಷಚೇತನನರಲ್ಲಿ ಕ್ರಿಕೆಟ್ ಅನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲು ಸಿಎಬಿಐ ಪ್ರಯತ್ನಿಸುತ್ತಿದೆ.

"ನಾವು ದಿನನಿತ್ಯದ ಕ್ರಿಕೆಟ್ ಲೀಗ್ ಅನ್ನು ಯೋಜಿಸುತ್ತಿದ್ದೇವೆ ಮತ್ತು ಹೆಚ್ಚಿನ ಮಹಿಳೆಯರನ್ನು ಮೈದಾನಕ್ಕೆ ತರಲು ಬಯಸುತ್ತೇವೆ" ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com