ಟಿ20 ವಿಶ್ವಕಪ್: 4ನೇ ಕ್ರಮಾಂಕಕ್ಕೆ ನಾನು ಸ್ಪರ್ಧಿ, ಐಪಿಎಲ್ ಪ್ರದರ್ಶನ ನನ್ನ ತಾಕತ್ತನ್ನು ನಿರ್ಣಯಿಸಲಿದೆ: ರೈನಾ

ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾದಿಂದ ದೂರ ಉಳಿದಿರುವ ಸುರೇಶ್ ರೈನಾ ಸದ್ಯ ಐಪಿಎಲ್ ಗಾಗಿ ಅಭ್ಯಾಸದಲ್ಲಿ ನಿರತರಾಗಿದ್ದು ನಾನು ಸಹ ಭಾರತದ ತಂಡದ 4 ಕ್ರಮಾಂಕದ ಮೇಲೆ ಕಣ್ಣೀಟ್ಟಿದ್ದೇನೆ. ಐಪಿಎಲ್ ನಲ್ಲಿನ ನನ್ನ ಪ್ರದರ್ಶನ...
ಸುರೇಶ್ ರೈನಾ
ಸುರೇಶ್ ರೈನಾ

ನವದೆಹಲಿ: ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾದಿಂದ ದೂರ ಉಳಿದಿರುವ ಸುರೇಶ್ ರೈನಾ ಸದ್ಯ ಐಪಿಎಲ್ ಗಾಗಿ ಅಭ್ಯಾಸದಲ್ಲಿ ನಿರತರಾಗಿದ್ದು ನಾನು ಸಹ ಭಾರತದ ತಂಡದ 4 ಕ್ರಮಾಂಕದ ಮೇಲೆ ಕಣ್ಣೀಟ್ಟಿದ್ದೇನೆ. ಐಪಿಎಲ್ ನಲ್ಲಿನ ನನ್ನ ಪ್ರದರ್ಶನ ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಸ್ಥಾನ ಪಡೆಯುವುದನ್ನು ನಿರ್ಣಯಿಸಲಿದೆ ಎಂದು ಹೇಳಿದ್ದಾರೆ.

ಟೀಂ ಇಂಡಿಯಾದಲ್ಲಿ 4ನೇ ಕ್ರಮಾಂಕದ ದಾಂಡಿಗನ ಅನಿಶ್ಚಿತತೆ ಎದ್ದು ಕಾಣುತ್ತಿದೆ. ಹೀಗಾಗಿ ಐಪಿಎಲ್ ನಲ್ಲಿ ನಾನು ಉತ್ತಮ ಪ್ರದರ್ಶನ ನೀಡಿದರೆ ಆಗ ಮುಂದಕ್ಕೆ ಸಾಗುವ ಕುರಿತು ಸ್ಪಷ್ಟತೆ ಸಿಗಲಿದೆ. ನನ್ನ ಐಪಿಎಲ್ ನಲ್ಲಿನ ನಿರ್ವಹಣೆಯ ಮೇಲೆ ಟಿ20 ವಿಶ್ವಕಪ್ ನಿರೀಕ್ಷೆಗಳು ಅವಲಂಬಿತವಾಗಿದೆ ಎಂದು ರೈನಾ ಹೇಳಿದ್ದಾರೆ.

ಭಾರತ ತಂಡದಲ್ಲಿ ಸ್ಥಾನ ಸಿಗಬೇಕಾದರೆ ನಾನು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು. ನಾನು ಎಂತಹ ಆಟಗಾರ ಎಂಬುದು ಎಲ್ಲರಿಗೂ ತಿಳಿದಿದೆ. ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಐಪಿಎಲ್ ಎಲ್ಲ ಆಟಗಾರರಿಗೂ ಉತ್ತಮ ವೇದಿಕೆಯಾಗಿರಲಿದೆ ಎಂದರು. 

ಗಾಯದ ಸಮಸ್ಯೆಯಿಂದ ಸದ್ಯ ಚೇತರಿಸಿಕೊಂಡಿರುವ ಸುರೇಶ್ ರೈನಾ ಅವರು ಐಪಿಎಲ್ ಗಾಗಿ ನೆಟ್ಸ್ ನಲ್ಲಿ ತರಬೇತಿ ಮುಂದುವರೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com