ಪಿಸಿಬಿ ಏಷ್ಯಾ ಕಪ್ ಆತಿಥ್ಯ ವಹಿಸುವುದಕ್ಕೆ ಅಭ್ಯಂತರ ಇಲ್ಲ, ಆದರೆ... ಬಿಸಿಸಿಐ ಹೇಳಿದ್ದು ಇಷ್ಟು... 

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಏಷ್ಯಾ ಕಪ್ ಆತಿಥ್ಯ ವಹಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಬಿಸಿಸಿಐ ಹೇಳಿದೆ. 

Published: 29th January 2020 01:48 AM  |   Last Updated: 29th January 2020 01:48 AM   |  A+A-


No problem with PCB hosting Asia Cup, but India won't play in Pakistan: BCCI

ಪಿಸಿಬಿ ಏಷ್ಯಾ ಕಪ್ ಆತಿಥ್ಯ ವಹಿಸುವುದಕ್ಕೆ ಅಭ್ಯಂತರ ಇಲ್ಲ, ಆದರೆ... ಬಿಸಿಸಿಐ ಹೇಳಿದ್ದು ಇಷ್ಟು...

Posted By : Srinivas Rao BV
Source : The New Indian Express

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಏಷ್ಯಾ ಕಪ್ ಆತಿಥ್ಯ ವಹಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಬಿಸಿಸಿಐ ಹೇಳಿದೆ. 

2020 ರ ಏಷ್ಯಾಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ಪೂರ್ವಭಾವಿಯಾಗಿ ನಡೆಯಲಿದ್ದು, ಪಾಕ್ ಆತಿಥ್ಯ ವಹಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ ಆದರೆ ಭಾರತ ಮಾತ್ರ ಪಾಕಿಸ್ತಾನದಲ್ಲಿ ಆಡುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. 

ಐಎಎನ್ಎಸ್ ಜೊತೆ ಮಾತನಾಡಿರುವ ಬಿಸಿಸಿಐ ಅಧಿಕಾರಿ, ಆತಿಥ್ಯದ ಹಕ್ಕು ಸಮಸ್ಯೆಯಲ್ಲ ಆದರೆ ಎಲ್ಲರಿಗೂ ಒಪ್ಪಿಗೆಯಾಗುವಂತಹ ಪ್ರದೇಶವಾಗಿರಬೇಕು, ಸದ್ಯದ ಪರಿಸ್ಥಿತಿಯಲ್ಲಿ ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ  ತೆರಳುವುದು ನಮ್ಮ ಆಯ್ಕೆಯಾಗಿಲ್ಲ ಭಾರತ ತಂಡ ಪಾಕಿಸ್ತಾನದಲ್ಲಿ ಆಡುವುದಿಲ್ಲ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಭಾರತವನ್ನು ಹೊರತುಪಡಿಸಿದ ಏಷ್ಯಾ ಕಪ್ ನಡೆಸುವುದಾದರೆ ಅದು ಬೇರೆಯ ವಿಷಯ. ಆದರೆ ಏಷ್ಯಾ ಕಪ್ ನಲ್ಲಿ ಭಾರತ ಇರಬೇಕೆಂದರೆ ಅದರ ಆತಿಥ್ಯ ಪಾಕಿಸ್ತಾನ ವಹಿಸುವಂತಿಲ್ಲ 2018 ರ ಏಷ್ಯಾಕಪ್ ನ್ನು ಯುಎಇಗೆ ಸ್ಥಳಾಂತರಿಸುವುದಕ್ಕೆ ಪಾಕ್ ಆಟಗಾರರಿಗೆ ಭಾರತದ ವೀಸಾ ನೀಡುವುದಕ್ಕೆ ಇಡ್ಡ ಅಡೆತಡೆಗಳೇ ಕಾರಣ ಎಂದು ಬಿಸಿಸಿಐ ಹೇಳಿದೆ.

Stay up to date on all the latest ಕ್ರಿಕೆಟ್ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp